More

    ಬಾಬಾ ರಾಮ್​​ದೇವ್ ಅವರ ಕರೊನಾ ಔಷಧ ಮಾರುವವರಿಗೆ ರಾಜಸ್ಥಾನ ಖಡಕ್ ವಾರ್ನಿಂಗ್

    ಜೈಪುರ: ಕೋವಿಡ್ 19 ಗುಣಪಡಿಸುವ ಔಷಧ ಎಂದು ಹೇಳಿಕೊಂಡಿರುವ ಔಷಧವೊಂದರ ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಬಾಬಾ ರಾಮದೇವ್ ರಾಜ್ಯ ಸರ್ಕಾರದ ಅನುಮತಿ ಪಡೆದಿಲ್ಲ ಎಂದು ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಹೇಳಿದ್ದಾರೆ.
    ಔಷಧದ ಪ್ರಾಯೋಗಿಕ ಪರೀಕ್ಷೆಗಳಿಗೆ ರಾಜ್ಯ ಸರ್ಕಾರ ಯಾವುದೇ ಪ್ರಸ್ತಾಪವನ್ನು ಸ್ವೀಕರಿಸಿಲ್ಲ ಅಥವಾ ಸರ್ಕಾರ ಈ ಕುರಿತು ಯಾರಿಗೂ ಯಾವುದೇ ಅನುಮತಿ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಬಂತು ಇ-ಬ್ಲಡ್ ಸರ್ವೀಸಸ್ ಆ್ಯಪ್… ಜೀವ ರಕ್ಷಕ ರಕ್ತದ ಲಭ್ಯತೆಯನ್ನು ಪರಿಶೀಲಿಸುವುದು ಇನ್ನೂ ಸುಲಭ

    “ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಯಾವುದೇ ರೀತಿಯ ಮಾನವ ಪ್ರಯೋಗಗಳನ್ನು ನಡೆಯುವಂತಿಲ್ಲ. ಸರ್ಕಾರದ ಅನುಮತಿಯಿಲ್ಲದೆ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುವವರು ಜನರ ಹಾದಿ ತಪ್ಪಿಸಿದಂತಾಗುತ್ತದೆ ಮತ್ತು ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಖಡಕ್ಕಾಗಿ ಎಚ್ಚರಿಸಿದ್ದಾರೆ.
    ತಮ್ಮ ಕಂಪನಿಯ ಔಷಧ ಕರೊನಾ ಗುಣಪಡಿಸುತ್ತದೆ ಎಂಬ ಬಾಬಾ ರಾಮದೇವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶರ್ಮಾ , ಆಯುರ್ವೇದ ಔಷಧಗಳು ರೋಗನಿರೋಧಕ ವರ್ಧಕಗಳಾಗಿ ಕಾರ್ಯನಿರ್ವಹಿಸಬಹುದು ಆದರೆ
    ಆಯುಷ್ ಸಚಿವಾಲಯದ ಅನುಮತಿಯಿಲ್ಲದೆ ಯಾವುದೇ ಒಂದು ‘ಕಾಯಿಲೆ ಗುಣಮುಖವಾಗುತ್ತದೆ ‘ ಎಂದು ಹೇಳುವುದು ಸ್ವೀಕಾರಾರ್ಹವಲ್ಲ ಎಂದರು.

    ಇದನ್ನೂ ಓದಿ: ಬೃಹತ್ ಚಂಡಮಾರುತ ಆಕಾಶದಲ್ಲಿ ಕತ್ತಲೆಯನ್ನೇ ಸೃಷ್ಟಿಸಿತು

    ಪತಂಜಲಿ ಆಯುರ್ವೇದದ ಸಂಸ್ಥೆಯ ಸಂಶೋಧಕರ ತಂಡ ಕೋವಿಡ್ -19 ಅನ್ನು ಗುಣಪಡಿಸಲು ಔಷಧವನ್ನು ಕಂಡುಹಿಡಿದಿದೆ ಎಂದು ಹಾಗೂ ಜೈಪುರದ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎನ್​ಐಎಂಎಸ್) ವಿಶ್ವವಿದ್ಯಾಲಯದ ಜೊತೆಗೆ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗಿದೆ ಎಂದೂ ಬಾಬಾ ರಾಮ್​​ದೇವ ತಿಳಿಸಿದ್ದರು.
    ಕ್ಲಿನಿಕಲ್ ಪ್ರಯೋಗಗಳಿಗೆ ಅಗತ್ಯವಾದ ಎಲ್ಲ ಅನುಮೋದನೆಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಪ್ರಯೋಗಗಳನ್ನು ನಡೆಸುವ ಮೊದಲು ಸಿಟಿಆರ್​​​​ಐನಿಂದ ಅನುಮತಿ ಪಡೆಯಲಾಗಿದೆ ಎಂದು ನಿಮ್ಸ್ ನಿರ್ದೇಶಕ ಡಾ.ಅನುರಾಗ್ ತೋಮರ್ ಹೇಳಿದ್ದರು.
    ಆಯುಷ್ ಸಚಿವಾಲಯವು ಬಾಬಾ ರಾಮದೇವ್ ಅವರಿಗೆ ಔಷಧದ ಬಗ್ಗೆ ವಿವರಗಳನ್ನು ನೀಡುವಂತೆ ಮತ್ತು ಉತ್ಪನ್ನಗಳ ಜಾಹೀರಾತನ್ನು ನಿಲ್ಲಿಸುವಂತೆ ತಿಳಿಸಿದೆ.
    ಕೋವಿಡ್ -19 ಅನ್ನು ಗುಣಪಡಿಸುವುದಾಗಿ ಬಾಬಾ ರಾಮ್‌ದೇವ್ ಹೇಳಿಕೊಂಡ ಔಷಧವನ್ನು ಯಾರಾದರೂ ಮಾರಾಟ ಮಾಡುತ್ತಿರುವುದು ಕಂಡುಬಂದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶರ್ಮಾ ಎಚ್ಚರಿಸಿದ್ದಾರೆ.

    ಇದನ್ನೂ ಓದಿ: ನಟ ಸುಶಾಂತ್​ ಸಿಂಗ್​ ರಜಪೂತ್​ ಹಾದಿ ತುಳಿದ 16 ವರ್ಷದ ಟಿಕ್​ಟಾಕ್​ ನಟಿಯ ದುರಂತ ಅಂತ್ಯ..!

    ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ 1940 ಮತ್ತು 1945 ರ ಅಡಿ ಕೇಂದ್ರವು ಜೂನ್ 21 ರಂದು ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ ಆಯುಷ್ ಸಚಿವಾಲಯದ ಅನುಮತಿಯಿಲ್ಲದೆ ಯಾರೂ ಕೋವಿಡ್ -19 ಗೆ ಸಂಬಂಧಪಟ್ಟಂತೆ ಆಯುರ್ವೇದ ಔಷಧವನ್ನು ಮಾರಾಟ ಮಾಡುವಂತಿಲ್ಲ ಎಂದು ಸಚಿವರು ಹೇಳಿದ್ದಾರೆ.
    “ಕೋವಿಡ್ -19 ಅನ್ನು ಗುಣಪಡಿಸುವುದಾಗಿ ಹೇಳಿಕೊಳ್ಳುವ ಯಾವುದೇ ಔಷಧವನ್ನು ಯಾರಾದರೂ ಮಾರಾಟ ಮಾಡುತ್ತಿರುವುದು ಕಂಡುಬಂದರೆ, ಕಾನೂನಿನ ಪ್ರಕಾರ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
    ಕೋವಿಡ್ -19 ರೋಗಿಗಳ ಚಿಕಿತ್ಸೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ, ಆಯುಷ್ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಯ ಮಾರ್ಗಸೂಚಿಗಳನ್ನು ರಾಜಸ್ತಾನ ಸರ್ಕಾರ ಪಾಲಿಸುತ್ತಿದೆ ಎಂದು ಅವರು ಹೇಳಿದರು.

    ಇದನ್ನೂ ಓದಿ:  ಆಕೆಗೆ ಬಯಲಲ್ಲೇ ಹೆರಿಗೆಯಾಯ್ತು… ಆದರೆ ಮಗು ಏನಾಯ್ತು?

    ಕರೊನಾ ರೋಗಿಗಳ ಮೇಲೆ ಈ ಔಷಧ ಪ್ರಯೋಗಿಸಲಾಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಶಂಕಿತ ಕೋವಿಡ್-19 ರೋಗಿಗಳನ್ನು ಕೆಲವು ದಿನಗಳವರೆಗೆ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ, ಅವರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲದಿದ್ದಾಗ ಅಂಥವರ ಮೇಲೆ ಕ್ಲಿನಿಕಲ್ ಪರೀಕ್ಷೆಗಳನ್ನು ನಡೆಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
    ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದ ರೋಗಿಗಳು ಏಳು ದಿನಗಳಲ್ಲಿ ಚೇತರಿಸಿಕೊಂಡಿದ್ದಾರೆ ಎಂಬ ಬಾಬಾ ರಾಮ್‌ದೇವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶರ್ಮಾ, ಸಾಮಾನ್ಯ ಸ್ಥಿತಿಯಲ್ಲಿಯೂ ಸಹ ಏಳು ದಿನಗಳಲ್ಲಿ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

    ಸೈಕಲ್​ ಏರಿ ಹೊರಟ ಕಾಂಗ್ರೆಸ್​ ನಾಯಕ ದಿಗ್ವಿಜಯ್​ ಸಿಂಗ್​ ವಿರುದ್ಧ ಎಫ್​ಐಆರ್​ ದಾಖಲಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts