More

    ‘ಕ್ರಾಂತಿಕಾರಿ ಚಂದ್ರಶೇಖರ ಆಜಾದ್​ರ ಸಾವಿಗೆ ನೆಹರೂ ಕಾರಣ’ : ಬಿಜೆಪಿ ಶಾಸಕ

    ಜೈಪುರ: ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರನ್ನು ಕೊಲ್ಲಿಸಲು ಮಾಜಿ ಪ್ರಧಾನಿ ಜವಹರಲಾಲ್ ನೆಹರು ಸಂಚು ನಡೆಸಿದ್ದರೆಂದು ರಾಜಸ್ತಾನದ ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ಶಾಸಕ ಮದನ್ ದಿಲಾವರ್ ಆರೋಪಿಸಿದ್ದಾರೆ. ರಾಜಸ್ಥಾನದ ರಾಜ್ಸಮಂಡ್ ವಿಧಾನಸಭಾ ಕ್ಷೇತ್ರಕ್ಕೆ ಅತಿ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಕಾಂಗ್ರೆಸ್​ ಹಿರಿಯ ನಾಯಕರಾಗಿದ್ದ ನೆಹರೂ ಬಗೆಗಿನ ಈ ಗಂಭೀರ ಆರೋಪ ವಿವಾದಕ್ಕೆ ಎಡೆಮಾಡಿದೆ.

    “ಪ್ರಸಿದ್ಧ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರು ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸುತ್ತಿದ್ದಾಗ ಹಣದ ಅಗತ್ಯ ಬಿದ್ದಿತ್ತು. ಅದಕ್ಕಾಗಿ 1,200 ರೂಪಾಯಿ ಪಡೆಯಲು ಅವರು ಪಂಡಿತ್ ಜವಾಹರಲಾಲ್ ನೆಹರೂ ಬಳಿಗೆ ಹೋಗಿದ್ದರು. ಹಣದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ನೆಹರೂ, ಆಜಾದ್ ಅವರನ್ನು ಉದ್ಯಾನವೊಂದರಲ್ಲಿ ಕಾಯಲು ಹೇಳಿದ್ದರು. ಆನಂತರ ನೆಹರು, ನೀವು ಹುಡುಕುತ್ತಿರುವ ವ್ಯಕ್ತಿ, ಭಯೋತ್ಪಾದಕ ಚಂದ್ರಶೇಖರ್ ಆಜಾದ್ ಉದ್ಯಾನವನವೊಂದರಲ್ಲಿ ಕುಳಿತಿದ್ದಾರೆ ಎಂದು ಬ್ರಿಟಿಷ್ ಪೊಲೀಸರಿಗೆ ಮಾಹಿತಿ ನೀಡಿದ್ದರು” ಎಂದು ದಿಲಾವರ್ ಭಾನುವಾರ ರಾಜಸಮಂಡ್ ಜಿಲ್ಲೆಯಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ.

    ಇದನ್ನೂ ಓದಿ: ಪ್ರಾಣಾಪಾಯದಿಂದ ನಟ ರಿಷಬ್​ ಶೆಟ್ಟಿ, ನಟಿ ಗಾನವಿ ಜಸ್ಟ್ ಮಿಸ್​!

    “ಬ್ರಿಟೀಷ್ ಪೊಲೀಸರು ಉದ್ಯಾನಕ್ಕೆ ಬಂದು ಆಜಾದ್ ಮೇಲೆ ಗುಂಡು ಹಾರಿಸಿದಾಗ, ಆಜಾದ್ ಪ್ರತ್ಯುತ್ತರ ನೀಡಿ ಕೆಲವು ಪೊಲೀಸರನ್ನು ಕೊಂದರು. ಆದರೆ ತಮ್ಮನ್ನು ಪೊಲೀಸರು ಸುತ್ತುವರೆದ ನಂತರ ಕೊನೆಯದಾಗಿ ಉಳಿದಿದ್ದ ಒಂದು ಬುಲೆಟ್​ಅನ್ನು ತಮಗೇ ಹಾರಿಸಿಕೊಂಡು ಮರಣ ಹೊಂದಿದರು” ಎಂದು ದಿಲಾವರ್ ಹೇಳಿದ್ದಾರೆ.

    ಸೋಮವಾರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿರುವ ಕೋಟಾ ಜಿಲ್ಲೆಯ ರಾಮಗಂಜ್​ಮಂಡಿ ಕ್ಷೇತ್ರದ ಶಾಸಕರಾಗಿರುವ ದಿಲಾವರ್, ಆಜಾದ್ ಸಾವಿಗೆ ನೆಹರೂ ಅವರೇ ಕಾರಣ ಎಂದು ಪುನರುಚ್ಚರಿಸಿದ್ದಾರೆ. “ಆಜಾದರ ಸಾವಿನ ನಿಜವಾದ ಆರೋಪಿಯು ಕಾಲಾನಂತರ ದೇಶದ ಪ್ರಧಾನಿಯಾದ ಕಾಂಗ್ರೆಸ್​ ನಾಯಕರಾಗಿದ್ದಾರೆ. ನೆಹರೂ ಈ ಪಿತೂರಿ ನಡೆಸಿ ಚಂದ್ರಶೇಖರ್ ಆಜಾದರ ಸಾವಿಗೆ ಜವಾಬ್ದಾರರಾಗಿದ್ದಾರೆ ಎಂದು ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ” ಎಂದಿದ್ದಾರೆ. ಈ ರೀತಿಯ ಸಂವೇದನಶೀಲ ಮಾತಿನ ಮೂಲ ಏನು ಎಂಬ ಪ್ರಶ್ನೆಗೆ, ಪುಸ್ತಕಗಳಿಂದ ಮತ್ತು ಸ್ಥಳೀಯ ಮಾಧ್ಯಮಗಳಿಂದ ತಾವು ಈ ಬಗ್ಗೆ ತಿಳಿದುಕೊಂಡದ್ದಾಗಿ ದಿಲಾವರ್ ಹೇಳಿದ್ದಾರೆ.

    ಇದನ್ನೂ ಓದಿ: ದುಬಾರಿ ದುನಿಯಾ: ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ 25 ರೂ. ಹೆಚ್ಚಳ..!

    ಆದರೆ ದಿಲಾವರ್ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. “ದಿಲಾವರ್ ಅವರ ಇತಿಹಾಸದ ಜ್ಞಾನವು ತುಂಬಾ ದುರ್ಬಲವಾಗಿದೆ ಮತ್ತು ಸತ್ಯಕ್ಕೆ ಮೀರಿದ್ದಾಗಿದೆ. ವಯಸ್ಸಾದಂತೆ, ದಿಲಾವರ್ ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಮತ್ತು ಸುದ್ದಿಯಲ್ಲಿರುವ ಉದ್ದೇಶದಿಂದ, ಅವರು ಕಾಲಕಾಲಕ್ಕೆ ಇಂತಹ ಅಸಂಬದ್ಧ ವಿಷಯಗಳನ್ನು ಹೇಳುತ್ತಲೇ ಬಂದಿದ್ದಾರೆ” ಎಂದು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ (ಆರ್‌ಪಿಸಿಸಿ) ಕಾರ್ಯದರ್ಶಿ ಪುಷ್ಪೇಂದ್ರ ಭರದ್ವಾಜ್ ಟೀಕಿಸಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    “ರಾಹುಲ್ ಭೈಯಾ… ನೀವಾಗ ರಜೆಯ ಮೇಲಿದ್ದಿರಿ… ಅದಕ್ಕೆ ನಿಮಗೆ ಗೊತ್ತಿಲ್ಲ”

    “ಮೋದಿಗೆ ತಮಿಳುನಾಡು ಟಿವಿ ಥರ… ರಿಮೋಟ್​ನಿಂದ ಸಿಎಂನ ಕಂಟ್ರೋಲ್ ಮಾಡ್ತಾರೆ !”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts