More

    12 ಕೋಟಿ ಸಂಪತ್ತಿನ ಒಡತಿ ಕುಸುಮಾ, ಅಫಿಡವಿಟ್​ನಲ್ಲಿ ಪತಿಯ ಹೆಸರನ್ನು ಪ್ರಸ್ತಾಪಿಸಿಯೇ ಇಲ್ಲ!

    ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಂಗೇರುತ್ತಿದ್ದು, ಕಾಂಗ್ರೆಸ್​ ಅಭ್ಯರ್ಥಿಯಾಗಿ ದಿ. ಐಎಎಸ್ ಅಧಿಕಾರಿ ಡಿ.ಕೆ. ರವಿ ಪತ್ನಿ ಹಾಗೂ ಹನುಮಂತರಾಯಪ್ಪರ ಪುತ್ರಿ ಕುಸುಮಾ ಅಖಾಡಕ್ಕಿಳಿದಿದ್ದಾರೆ.

    ಕುಸುಮ ಹುಟ್ಟಿದ್ದು ಮಂಗಳವಾರ. ಹಾಗಾಗಿ ಆ ದಿನ ಶುಭ ಸಂಕೇತ ಎಂದು ಜ್ಯೋತಿಷಿಗಳ ಸಲಹೆಯಂತೆ ನಿನ್ನೆಯೇ ನಾಮಪತ್ರ ಸಲ್ಲಿಸಿರುವ ಕುಸುಮಾ, ಅಫಿಡೇವಿಟ್​ನಲ್ಲಿ ತಾನು 12 ಕೋಟಿ ಆಸ್ತಿ ಒಡತಿ ಎಂದು ಘೋಷಿಸಿದ್ದಾರೆ. ತನ್ನ ಹೆಸರಿನಲ್ಲಿ ಯಾವುದೇ ವಾಹನ ಹೊಂದಿಲ್ಲದ ಕುಸುಮಾ, ಪ್ರಮಾಣಪತ್ರದಲ್ಲಿ ಪತಿ ಡಿ.ಕೆ. ರವಿ ಹೆಸರನ್ನು ಪ್ರಸ್ತಾಪಿಸಿಲ್ಲ!

    12 ಕೋಟಿ ಸಂಪತ್ತಿನ ಒಡತಿ ಕುಸುಮಾ, ಅಫಿಡವಿಟ್​ನಲ್ಲಿ ಪತಿಯ ಹೆಸರನ್ನು ಪ್ರಸ್ತಾಪಿಸಿಯೇ ಇಲ್ಲ!ನಿನ್ನೆಯೇ(ಮಂಗಳವಾರ) ನಾಮಪತ್ರ ಸಲ್ಲಿಸಿದ್ದ ಕುಸುಮಾ, ಇಂದು(ಬುಧವಾರ) ಬೆಳಗ್ಗೆ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸಿದರು, ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಮತ್ತು ತಂದೆ ಹನುಮಂತರಾಯಪ್ಪ ಸಾಥ್​ ನೀಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ತಂದೆ ಮತ್ತು ಕುಟುಂಬಸ್ಥರೊಂದಿಗೆ ನಾಗರಬಾವಿ ಬಳಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕುಸುಮಾ ಪೂಜೆ ಸಲ್ಲಿಸಿದ್ದರು.

    ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ್ದ ಅಫಿಡೇವಿಟ್​ನಲ್ಲಿ ಕುಸುಮಾರ ಆಸ್ತಿ ವಿವರ ಹೀಗಿದೆ.

    • 1.13 ಕೋಟಿ ರೂ. ಮೌಲ್ಯದ ಚರಾಸ್ತಿ
    • 1.54 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ
    • 20.48 ಲಕ್ಷ ರೂ. ಸಾಲ ಇದೆ
    • 2.45 ಲಕ್ಷ ರೂ. ಷೇರು ಹೊಂದಿದ್ದಾರೆ
    • 1.45 ಲಕ್ಷ ನಗದು ಹಣ ಇದೆ

      45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇದೆಬಿಬಿಎಂಪಿ ವಾರ್ಡ್ 40ರಲ್ಲಿ 1500 ಚದರ ಅಡಿ ಹಾಗೂ 2380 ಚದರಡಿ ವಿಸ್ತೀರ್ಣದ ಎರಡು ನಿವೇಶನ ಹೊಂದಿದ್ದಾರೆ. ಇದನ್ನು 17,84,575 ರೂ.ಗೆ ಖರೀದಿಸಿದ್ದರು. ಈ ಎರಡು ನಿವೇಶನದ ಸದ್ಯದ ಮಾರುಕಟ್ಟೆ ಮೌಲ್ಯ 1.37 ಕೋಟಿ! ಒಟ್ಟಾರೆ 12 ಕೋಟಿ ಸಂಪತ್ತಿನ ಒಡತಿ ಕುಸುಮಾ. ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿರುವ ಕುಸುಮಾ 2016ರಿಂದ ‘ನಿರಾಂತಕ’ ಸ್ವಯಂ ಸೇವಾ ಸಂಸ್ಥೆಯಲ್ಲಿ ಪ್ರವರ್ತಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಸಲ ಮಾಡುತ್ತಿದ್ದ ಸಂಬಳವೇ ಆರ್ಥಿಕ ಮೂಲ ಎಂದು ಹೇಳಲಾಗಿದೆ.

    ಡಿ.ಕೆ.ರವಿ ಹೆಸರನ್ನು ಚುನಾವಣೆಯಲ್ಲಿ ನಾನು ಬಳಸಲ್ಲ: ಕುಸುಮಾ

    ಪ್ಲೀಸ್​… ನನ್ನ ಅಮ್ಮನನ್ನು ಉಳಿಸಿಕೊಡಿ: ಮನಕಲಕುತ್ತೆ ಶಿಕ್ಷಕ ದಂಪತಿ ಮಗಳ ರೋದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts