More

    ಪ್ಲೀಸ್​… ನನ್ನ ಅಮ್ಮನನ್ನು ಉಳಿಸಿಕೊಡಿ: ಮನಕಲಕುತ್ತೆ ಶಿಕ್ಷಕ ದಂಪತಿ ಮಗಳ ರೋದನ

    ಮಂಗಳೂರು: ‘ವಿದ್ಯಾಗಮ’ದ ನಂತರವೇ ಅಮ್ಮನಿಗೆ ಈ ಸ್ಥಿತಿ ಬಂದಿದೆ. ಆಸ್ಪತ್ರೆಗೆ ದಾಖಲಾಗಿರುವ ಅಮ್ಮನನ್ನು ದಯವಿಟ್ಟು ಉಳಿಸಿಕೊಡಿ, ಚಿಕಿತ್ಸೆಗಾಗಿ ಆರ್ಥಿಕ ‌ನೆರವು ನೀಡಿ… ಎಂದು ಸರ್ಕಾರಿ ಶಾಲೆ ಶಿಕ್ಷಕ ದಂಪತಿಯ ಪುತ್ರಿಯೊಬ್ಬರು ಫೇಸ್​ಬುಕ್​ನಲ್ಲಿ ಅಳಲು ತೋಡಿಕೊಂಡಿದ್ದಾರೆ.

    ಮೂಡಬಿದರೆಯ ಶಿಕ್ಷಕ ಕುಟುಂಬಕ್ಕೆ ಕರೊನಾ ಆಘಾತ ನೀಡಿದೆ. ಮೂಡಬಿದರೆಯ ಮಕ್ಕಿ ಜವಹಾರ್ ನೆಹರೂ ಹೈಸ್ಕೂಲ್​ನ ಶಿಕ್ಷಕಿ ಪದ್ಮಾಕ್ಷಿ ಅವರಿಗೆ ಕರೊನಾ ಸೋಂಕು ತಗುಲಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿದ್ದಾರೆ. ಇವರ ಪತಿ, ಮೂಡಬಿದರೆಯ ಡಿ.ಜೆ. ಹೈಯರ್ ಪ್ರೈಮರಿ ‌ಶಾಲೆ ಮುಖ್ಯಶಿಕ್ಷಕ ಶಶಿಕಾಂತ್ ಅವರಿಗೂ ಕರೊನಾ ದೃಢಪಟ್ಟಿದೆ.

    ಪದ್ಮಾಕ್ಷಿ ಮತ್ತು ಶಶಿಕಾಂತ್​ ದಂಪತಿ ಇಬ್ಬರಿಗೂ ಕರೊನಾ ಸೋಂಕು ಕಾಡುತ್ತಿದ್ದು, ಇವರ ಪುತ್ರಿ ಐಶ್ವರ್ಯಾ ಜೈನ್ ಆತಂಕಗೊಂಡಿದ್ದಾರೆ. ಸದ್ಯ ಅಮ್ಮನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗೆ ಆರ್ಥಿಕ ನೆರವು ನೀಡಿ, ಆ ಮೂಲಕ ನನ್ನ ತಾಯಿಯನ್ನು ಉಳಿಸಿಕೊಡಿ ಎಂದು ಫೇಸ್​ಬುಕ್​ನಲ್ಲಿ ಫೋಟೋ ಸಹಿತ ಐಶ್ವರ್ಯಾ ಅಳಲು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿದ್ಯಾಗಮದ ಪರಿಣಾಮ ಅಮ್ಮನಿಗೆ ಈ ಸ್ಥಿತಿ ಬಂದಿದೆ ಎಂದೂ ಅಸಮಾಧಾನ ಹೊರಹಾಕಿದ್ದಾರೆ.

    ವಿದ್ಯಾಗಮಕ್ಕೂ ಮೊದಲು ಅಮ್ಮ ಆರಾಮಾಗಿದ್ದರು. ವಿದ್ಯಾಗಮದ ನಂತರವೇ ಅವರಿಗೆ ಈ ಸ್ಥಿತಿ ಬಂದಿದೆ ಎಂದು ಪೋಸ್ಟ್ ಮಾಡಿದ್ದಾರೆ.

    ಕರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಹಾಗಾಗಿ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂದು ಯೋಚಿಸಿದ ಸರ್ಕಾರ, ವಿದ್ಯಾಗಮ ಯೋಜನೆಯನ್ನು ಜಾರಿ ಮಾಡಿತ್ತು. ಸರ್ಕಾರಿ ಶಾಲೆ ಮಕ್ಕಳು ಇರುವಲ್ಲಿಗೇ ಹೋಗಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಈ ನಡುವೆ ಕೆಲ ಶಿಕ್ಷಕರು ಮತ್ತು ಮಕ್ಕಳಲ್ಲಿ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ವಿದ್ಯಾಗಮ ವಿರುದ್ಧ ಅಪಸ್ವರ ಶುರುವಾಯ್ತು. ಬಹುತೇಕ ಪೋಷಕರು, ಶಿಕ್ಷಕರು ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಸೇರಿದಂತೆ ಹಲವರು ಧ್ವನಿಗೂಡಿಸಿದರು. ಈ ಯೋಜನೆಗೆ ಸರ್ಕಾರ ಇತ್ತೀಚಿಗಷ್ಟೇ ತಾತ್ಕಾಲಿಕ ಬ್ರೇಕ್​ ಹಾಕಿದೆ.

    ಪ್ಲೀಸ್​… ಅಮ್ಮನನ್ನು ಉಳಿಸಿಕೊಡಿ ಎಂದ ಟೀಚರ್​ ಮಗಳು: ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

    ಪಿಪಿಇ ಕಿಟ್​ ಧರಿಸಿ ಬಂದ ಗೆಳೆಯನೊಂದಿಗೆ ಟೆಕ್ಕಿ ಪತ್ನಿ ಎಸ್ಕೇಪ್​! ಬೆಚ್ಚಿ ಬೀಳ್ತೀರಿ ಆಕೆಯ ಮಾಸ್ಟರ್​ ಪ್ಲ್ಯಾನ್​ ಕೇಳಿದ್ರೆ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts