More

    ವಿಷಬೀಜದಿಂದ ಅಮೃತವೃಕ್ಷ ಹೇಗೆ ಬೆಳೆಯಬೇಕು?

    ಭಾರತ ಸ್ವಾತಂತ್ರ್ಯ ಪ್ರಾಪ್ತಿಯ ಗುರಿ, ಧ್ಯೇಯ ಇದ್ದ ತನಕ ಕಾಂಗ್ರೆಸ್​ಗೆ ಜೀವ ಇತ್ತು. ಅದಾದ ಮೇಲೆ ‘ವಿಸರ್ಜಿಸಿ’ ಎಂದರು ಗಾಂಧಿ. ನೆಹರು ಕೇಳಲಿಲ್ಲ. ಆಗ ಶುರುವಾಯಿತು ಕೃತಕ ಧ್ಯೇಯ- ವಂಶಾಡಳಿತ, ಪಾರಂಪರ್ಯ ಮೋಹ. ಇದು ಬದುಕಿಸಲಾರದ ಒಣಧ್ಯೇಯ.

    ವಿಷಬೀಜದಿಂದ ಅಮೃತವೃಕ್ಷ ಹೇಗೆ ಬೆಳೆಯಬೇಕು?ಜಗತ್ತಿನ ಭೂಪಟದಲ್ಲಿ ಎಷ್ಟೋ ರಾಷ್ಟ್ರಗಳು ಹೇಳಹೆಸರಿಲ್ಲದೆ ನಾಶವಾಗಿವೆ. ಭೂಭಾಗ ಅಲ್ಲೇ ಇರಬಹುದು. ಅಲ್ಲಿ ಎದ್ದ ರಾಷ್ಟ್ರಗಳು ನಾಮಾವಶೇಷ. ಸುಮೇರಿಯಾ ಎಲ್ಲಿದೆ? ಪ್ರಷ್ಯಾ ಎಲ್ಲಿದೆ? ಅಮೇನಿಯಾ ಎಲ್ಲಿದೆ? ಇತ್ತೀಚಿನ ಝೆಕೋಸ್ಲೊವೇಕಿಯಾ ಹಾಗೂ ಯುಗೋಸ್ಲೊವಿಯಾ? ಎನ್ನಾವೋ, ಆಸ್ಟೆಕ್ಸ್ ಜನಾಂಗಗಳ ದೇಶವೋ? ಯುಎಸ್​ಎಸ್​ಆರ್ ಎಂಬ ದುರಂತ ಪ್ರಯೋಗದಲ್ಲಿ ವಿಲೀನವಾಗಿ, ಬೇರೊಂದು ಕಾಲದಲ್ಲಿ ಎದ್ದ ರಾಷ್ಟ್ರಗಳು ಯಾವವು? ‘ರಾಷ್ಟ್ರಗಳುದಿಸಲಿ, ರಾಷ್ಟ್ರಗಳಳಿಯಲಿ, ಹಾರಲಿ ಗದ್ದುಗೆ ಮುಕುಟಗಳು. ಹಕ್ಕಿ ಹಾರುತಿದೆ ನೋಡಿದಿರಾ?’ ಎಂದರಲ್ಲ ಬೇಂದ್ರೆ? ತ್ರಿಕಾಲ ಜ್ಞಾನಿಗಳಲ್ಲವೆ? ಕಾಲಪಕ್ಷಿಯ ರೆಕ್ಕೆ ಗಾಳಿಯಲ್ಲಿ ತೂರಿಹೋದವು. ಅಭಿಸಾರ, ಅಂಧಿ, ಪುಷ್ಕಲಾವರ್ತ, ತಕ್ಷಶಿಲೆ, ಆದಟ್ಟ, ದರದ, ಇತ್ತ, ಚೇದಿ, ಮಗಧ, ಪಾಂಡ್ಯ, ಚೋಳ, ಚೇರ- ಇವು ಆಗ ಸ್ವತಂತ್ರ ರಾಜ್ಯಗಳೆನಿಸಿ, ‘ಒಂದು ಭಾರತ’ ಎಂಬ ಪುರುಷಾರ್ಥ ಸಮ್ರಗತೆ ಭಾವನೆ, ಬೆಸುಗೆ, ಧ್ಯೇಯ, ತಳಪಾಯಗಳಿಲ್ಲದೆ ಅರಳಿದವು. ಬಹುಮನಿಯೋ? ಇಂಥವು ಜಗದ್ವಾ್ಯಪೀ ಇತಿಹಾಸದಲ್ಲಿವೆ. ಈಗ ರಾಷ್ಟ್ರಗಳಲ್ಲಿ ‘ಭಾರತ’ ಎಂಬುದೊಂದು, ಯಾವುದೇ ವಿಕಾರಾಕಾರಗಳ ರೂಪದಲ್ಲಿ ಇನ್ನೂ ಇದೆ. ನಾಶ ಮಾಡಲು ಸಂಘಟಿತ ದುರುಳ ಯತ್ನಗಳು ಶತ ಶತಮಾನಗಳಲ್ಲಿ ನಡೆದೂ ಇನ್ನೂ ಜೀವ ಹಿಡಿದು ಉಳಿದಿದೆ. ಸಿಡಿದು ಹೋದ ಪಾಕಿಸ್ತಾನ, ಅಗ್ನಿಯಿಂದ ಸಿಡಿದ ಕಿಡಿಯಂತೆ ಕ್ಷಣಕಾಲ ಜ್ವಲಿಸಿ, ಕ್ಷೀಣಿಸಿ, ಬೂದಿಯಾದಂತೆ, ನಾಶದ ಅಂಚಿನಲ್ಲಿದೆ. a circle without a centre and periphery ‘ಕೇಂದ್ರವಾಗಲೀ, ಪರಿಧಿಯಾಗಲೀ ಇಲ್ಲದ ವೃತ್ತದಂತೆ’ ಎಂದರೆ ತಿಳಿಯುವುದೇ? ನೋಡಿ. ಕಾರಣವನ್ನು ಇಲ್ಲಿ ವಿಶ್ಲೇಷಿಸೋಣ. ಮನುಷ್ಯರಂತೆ, ಜನ ಸಮುದಾಯಗಳಂತೆ, ರಾಷ್ಟ್ರಗಳಿಗೂ, ರಾಜಕೀಯ ಪಕ್ಷಗಳಿಗೂ ಸ್ವಂತಿಕೆ, ಸ್ವಸ್ವರೂಪ, ಐಡೆಂಟಿಟಿ ಇದ್ದರೆ, ಅವು ಉಳಿಯುತ್ತವೆ. ಇಲ್ಲವಾದರೆ ಸತ್ತು ಮಾಯವಾಗುತ್ತವೆ. ಧ್ಯೇಯವೆಂಬುದು ಅಮೂರ್ತ, ಐಡಿಯಲ್, ವ್ಯಾಲ್ಯೂ ಎಂಬುದು. ಶರೀರದಲ್ಲಿ ಉಸಿರು ಎಂಬ ಪ್ರಾಣವಾಯು ಕಣ್ಣಿಗೆ ಕಾಣುವುದಿಲ್ಲ. ಅದು ಇದ್ದರೆ ಮಾತ್ರ ಬದುಕು. ಧ್ಯೇಯ ಹೋದರೆ ಸಾವು. ಪ್ರಾಣ ಹೋದರೆ ಮರಣ, ಹೆಣ. ಇದು ಅರಿವಿಗೆ ಬರುವ ಸತ್ಯ.

    ದೇವರು ಅಮೂರ್ತ, ಆದರೆ ಜಗತ್ತಿನ ಬೇರು. ‘ತತ್ತ್ವಮಸಿ’ ಪ್ರಕರಣದಲ್ಲಿ ಉದ್ದಾಲಕರು ಶ್ವೇತಕೇತುವಿಗೆ ತಿಳಿಸಲು ಕೊಡುವ ಉದಾಹರಣೆಗಳಲ್ಲಿ-‘ಮರ ಕಡಿದರೂ, ಬೇರು ಭದ್ರವಾಗಿರುವ ತನಕ, ಉಸಿರು ಹಿಡಿದು, ಚಿಗುರುತ್ತಲೇ ಏಳುತ್ತಲೇ, ಹಸಿರೊಡೆಯುತ್ತಲೇ ಇರುತ್ತದೆ, ಆ ಬೇರು ದೇವರು. ಅದು ನಿನ್ನಲ್ಲಿದೆ’ ಎಂಬ ಬೋಧೆ ರಾಜಕೀಯಕ್ಕೂ ಅನ್ವಯ ಎಂದು ನಾನು ನಂಬುತ್ತೇನೆ. ಪುರುಷಾರ್ಥಗಳು ನಾಲ್ಕು- ಅರ್ಥ, ಕಾಮ, ಧರ್ಮ, ಮೋಕ್ಷ. ಹೀಗೆ ನಂಬಿ ಬಂದಿರುವುದು ನಮ್ಮ ಭಾರತ ಮಾತ್ರ. ಇಲ್ಲೇ ಇದ್ದೂ ನಂಬದ ಕಾಂಗ್ರೆಸ್, ಕಮ್ಯೂನಿಸಂ, ಸೋಷಿಯಲಿಸಂ, ಭಯೋತ್ಪಾದಕ ಸಂಘಟನೆಗಳು, ಸೆಕ್ಯುಲರಿಸ್ಟ್ ಪಕ್ಷಗಳು ಸಾಯುತ್ತಿವೆ, ಸತ್ತಿವೆ. ನಿಮ್ಮೆದುರಿನ ಸತ್ಯ ಇದು. ವಿವೇಚಿಸಬೇಡವೇನಿರಯ್ಯ.

    ಪಾಕಿಸ್ತಾನ ರಚನೆಯ ಸಂದರ್ಭದಲ್ಲಿ ಯಾರಿಗೆ ಯಾವ ಪುರುಷಾರ್ಥ ಪ್ರಜ್ಞೆ ಇತ್ತು? ಜಿನ್ನಾ ಸಾಹೇಬರು ಇದರ ಜನಕರೆಂದು ಹೇಳುವವರು ಅವರ ಚರಿತ್ರೆಯನ್ನು ನೋಡಬೇಕು. ಹಂದಿಮಾಂಸ, ಪೋರ್ಕ್ ತಿನ್ನುವವ, ದಾಡಿ ಬಿಡದವ, ಒಮ್ಮೆಯೂ ಮಸೀದಿಗೆ ಹೋಗದವ, ನಮಾಜು ಮಾಡದವ, ಇಸ್ಲಾಂ ಏನೆಂದೇ ಅರಿಯದೆ ಆಚರಿಸಿದ ಈತ ಹೇಳಿದ್ದು-‘ಅತ್ಯಂತ ಖಳ ಖೂಳ ದುರುಳ ಪತಿತ ಮುಸ್ಲಿಂನೂ, ಸಂಭಾವಿತ, ಸುಸಂಸ್ಕೃತ, ಶಾಸ್ತ್ರಸಂಪನ್ನ, ಸದಾಚಾರಿ ಹಿಂದೂವಿಗಿಂತ ಶ್ರೇಷ್ಠ’-ಎಂಬಲ್ಲಿ ದ್ವೇಷವೊಂದೇ ಎದ್ದು ಕಾಣುತ್ತದೆ.

    ದ್ವೇಷವು ಯಾವ ಪುರುಷಾರ್ಥ? ಆ ಹಿಂದೂದ್ವೇಷದಲ್ಲೇ ಪಾಕ್​ನ ಉದಯ. ಇಲ್ಲಿ ಅರ್ಥ ಕಾಮಗಳೂ ಇಲ್ಲ. ಧರ್ಮ ಮೋಕ್ಷಗಳಂತೂ ಇಲ್ಲವೇ ಇಲ್ಲ. ಐರೋಪ್ಯರೇ ವಾಸಿ. ಅರ್ಥಪರರು, ಅರ್ಥೈಕಪರರು, ವಾಣಿಜ್ಯ, ಉತ್ಪಾದನೆ, ಸಾಗಣೆ, ಮೂಲಗಳಲ್ಲಿ ಇವರು ಅಷ್ಟಿಷ್ಟು ಆರ್ಥಿಕ ಸಾಮ್ರಾಜ್ಯಗಳನ್ನು ಕಟ್ಟಿದರು. ಅಲ್ಲಿ ‘ಧರ್ಮ’ ಇಲ್ಲದೆ ನಾಶವಾದರು. ವಸಾಹತುಶಾಹೀ, ಸಾಮ್ರಾಜ್ಯಶಾಹೀ, ಬ್ರಿಟಿಷ್, ಫ್ರೆಂಚ್, ಡಚ್, ಪೋರ್ಚುಗೀಸ್, ಸ್ಪಾನಿಷ್, ರಾಷ್ಟ್ರಗಳ ಬೆನ್ನಿಗೆ- ಬೇರಿಗೆ ಅಲ್ಲ! ನಿಂತದ್ದು ಕ್ರೖೆಸ್ತ ಎಂಬ ಬೇರಿಲ್ಲದ ಮತ. ಅದು ಧರ್ಮದ ಎತ್ತರಕ್ಕೇರದ, ಸಾಮ್ರಾಜ್ಯಶಾಹೀ ಗುರಿಗೇ ಅಂಟಿ ನಾಶವಾಗುತ್ತಿದೆ. ಇಲ್ಲಿ ಪಾಕಿಗಳು ಪಾಠ ಕಲಿಯಲಿಲ್ಲ! ಭಾರತ ಹರಿದು ಚೂರಾದಾಗ ಅಲ್ಲಿ ಋಷಿ ಮುನಿಗಳ ಬೀಡಾಗಿದ್ದ ಸಪ್ತಸಿಂಧು ಪ್ರಾಂತ, ಸರಸ್ವತಿ, ಸಿಂಧೂ, ಆ ಸಂಸ್ಕೃತಿಯ ಅವಶೇಷಗಳಾದ ಹರಪ್ಪಾ (ಹರಿಯುಪ) – ಮೊಹೆಂಜೋದಾರೋ (‘ಮಹಾಯಜ್ಞಧಾರಾ’) ‘ಲವಸ್ಥಲೀ’ (ಲೋಥಾಲ್) ಇನ್ನಿತರ ನಮ್ಮ ಸಂಸ್ಕೃತಿಯ ಹೆಗ್ಗುರುತು ಬೇರುಗಳ ಜನ್ಮಸ್ಥಾನ, ನಮ್ಮ ದ್ವೇಷಿಗಳ ಪಾಲಾಯಿತು! ಇದರಿಂದ ನಮಗಾಗಲೀ, ಅವರಿಗಾಗಲಿ ಏನು ಲಾಭವಾಯಿತು? ನಮಗೆ ನಿರಂತರ ಶತ್ರುಲಾಭ, ಅವರಿಗೆ ನಿರಂತರ ದ್ವೇಷ, ತಮ್ಮದೇ ಮೂಲಸಂಸ್ಕೃತಿಯ ದ್ವೇಷ! ಇಂಡೋನೇಷ್ಯಾ ವಾಸಿ. ‘ನಾವು ಸಂಸ್ಕೃತಿಯಲ್ಲಿ ಹಿಂದೂಗಳು, ಮತದಲ್ಲಿ ಇಸ್ಲಾಮಿಯರು’ ಎಂದು ಘೋಷಿಸಿದ್ದರಿಂದ ವಿಶ್ವ ರಾಮಾಯಣದ ಪ್ರಥಮ ಸಮ್ಮೇಳನ ಜಕಾರ್ತಾದಲ್ಲಿ (ಇಂಡೋನೇಷ್ಯಾ ರಾಜಧಾನಿ, ‘ಯೋಗ ಜಾಗೃತಾ’) ಆಯಿತು. ಸ್ವಂತಿಕೆ ಅಷ್ಟಿಷ್ಟು ಉಳಿಸಿಕೊಂಡರು. ಬೆಳೆಸುವುದು ಭಾರತದ ಜವಾಬುದಾರಿಯಲ್ಲಿದೆ. ವಿಶ್ವದ ಅತಿ ದೊಡ್ಡ ವಿಷ್ಣು ದೇವಾಲಯ ‘ಅಂಕೋರ-ವ್ಯಾಟ್’ ಇರುವ ಪ್ರದೇಶ, ಸಾಕ್ಷಿ. ಪಾಕ್ ಹಾಗಾಗಲಿಲ್ಲ! ವಿಷಬೀಜದಿಂದ ಅಮೃತವೃಕ್ಷ ಹೇಗೆ ಬೆಳೆಯಬೇಕು? ಅವರವರ ಪ್ರಧಾನಿ, ಅಧ್ಯಕ್ಷರನ್ನೇ ಅವರೇ ಕೊಂದರು. ಪಾಕ್ ಸೇನೆಗೆ ಯಾರ ಹಿಡಿತವೂ ಇಲ್ಲ. ಒಂದಷ್ಟು ಕಾಲ ಅಮೆರಿಕದ ಸ್ವಾರ್ಥಕ್ಕೆ ಬಲಿಯಾಯಿತು ಈ ದೇಶ, ಬೆಲೆವೆಣ್ಣು ಯಾರಿಗಾದರೂ ಮಾರಿಕೊಳ್ಳುತ್ತಾಳೆ. ಆಗ ಅಮೆರಿಕ, ಈಗ ಚೀನಾ. strange bedfellows ಎಂದು ರಾಜಕೀಯದ ಭಾಷೆಯಲ್ಲಿ ನೀವೇ ಅರ್ಥೈಸಿಕೊಳ್ಳಿ. ಸೌದಿ ಅರೇಬಿಯಾ ಇಸ್ಲಾಂ ಮೋಹಕ್ಕೋ, ಬೇರಾವ ಪಾಶಕ್ಕೋ ಇತ್ತ ಬಿಲಿಯಗಟ್ಟಲೇ ಸಾಲದ ಮರುಪಾವತಿಗೆ ಈಗ ಹಟ ಹಿಡಿದಿದೆ. ಕೊಡಲು ಪಾಕ್​ಗೆ ಹಣ ಇಲ್ಲ. ದಾವೂದ್ ಇಬ್ರಾಹಿಂನ ಮಾದಕ ದ್ರವ್ಯ ಮಾರಾಟ ಜಾಲದ ಆದಾಯ ಈಗ ಕುಸಿದಿರಬೇಕು. ಪಾಕ್ ಈಗ ನಮ್ಮ ರೂಪಾಯಿ ನೋಟು ಮುದ್ರಣ ಮಾಡುತ್ತಿದೆ. ತನ್ನ ಏಜೆಂಟರನ್ನು ಐಎಸ್​ಐ ಹಾಗೂ ಐಎಸ್​ಐಎಸ್ ಜಾಲವನ್ನು ಇಲ್ಲಿ ಹರಿಯ ಬಿಟ್ಟಿದೆ. ಇಲ್ಲಿನ ಮತಾಂತರಿತ ಮುಸ್ಲಿಂರು ಅವರ ಆಧಾರ, ಉಪಕರಣ, ಉಪದ್ರವ ಜಾಲ. ಎಲ್ಲ ಬಯಲೋ ಬಯಲು! ಪಾಕ್​ನ ಭವಿಷ್ಯ? ಭೂಪಟದಿಂದ ನಿರ್ನಾಮವಲ್ಲದೇ ಬೇರೇನಿರಯ್ಯ? ಪಾಕ್ ನಂಬಿರುವ ಯಾವುದೂ ಅದನ್ನು ಕಾಪಾಡಲಾರದು, ಮೇಲೆತ್ತಲಾರದು. ದ್ವೇಷ, ಕುತಂತ್ರ, ನಿರಂತರ ಯುದ್ಧಾವಲಂಬನೆ- ಇವು ಎಲ್ಲ ಜಿಹಾದ್​ನಲ್ಲಿ ಅಡಗಿ, ವಿಶ್ವವೇ ಇದರ ಎದುರು ನಿಂತಿದೆ. ಪಾಕ್ ವಿನಾಶ ಸನ್ನಿಹಿತ. ಚೀನಾಕ್ಕೆ ಈ ಗತಿಯಾಗುತ್ತಿದೆ ಎಂದರೆ, ಸಾಯುತ್ತ ಮುಳುಗುತ್ತಿರುವವನು ಕಲ್ಲನ್ನು ಅವಲಂಬಿಸಿ ದಡ ಸೇರುವ ಭ್ರಾಂತಿಯಲ್ಲಿರುವಂತೆ ಆಗಿದೆ. ಚೀನಾದ ಐಡೆಂಟಿಟಿ ಇರುವುದು ಬೌದ್ಧ ಮತ್ತು ಕನ್​ಫ್ಯೂಷಿಯಸ್​ನ ತತ್ತ್ವಗಳಲ್ಲಿ. ಮಾರ್ಕ್ಸಿಸಂ ಬದುಕಿಸಲಾರದು. ಅದು ಪೂತನಿಯ ಸೈನ್ಯ. ಹೀರಿದ ಎಲ್ಲರೂ-ಕೃಷ್ಣ ಬಿಟ್ಟು- ಸತ್ತಂತೆ! ನೋಡುತ್ತಿದ್ದೀರಿ. ಇದನ್ನೂ ಓದಿ: ರಾಜಧರ್ಮ- ರಾಜನೀತಿ; ರಾಷ್ಟ್ರನಿರ್ಮಾಣಕ್ಕೆ ಬೇಕಾದ ಧನಾತ್ಮಕ ದೃಷ್ಟಿ

    ಈಗ ಪಕ್ಷಗಳಿಗೆ ಬನ್ನಿ. ಭಾರತ ಸ್ವಾತಂತ್ರ್ಯ ಪ್ರಾಪ್ತಿಯ ಗುರಿ, ಧ್ಯೇಯ ಇದ್ದ ತನಕ ಕಾಂಗ್ರೆಸ್​ಗೆ ಜೀವ ಇತ್ತು. ಅದಾದ ಮೇಲೆ ‘ವಿಸರ್ಜಿಸಿ’ ಎಂದರು ಗಾಂಧಿ. ನೆಹರು ಕೇಳಲಿಲ್ಲ. ಆಗ ಶುರುವಾಯಿತು ಕೃತಕ ಧ್ಯೇಯ- ವಂಶಾಡಳಿತ, ಪಾರಂಪರ್ಯ ಮೋಹ. ಇದು ಬದುಕಿಸಲಾರದ ಒಣಧ್ಯೇಯ. ಈಗಿನ ನಾಯಿಕೊಡೆಗಳ ಸ್ಥಿತಿ ನೋಡಿ. ರಾಹುಲ್, ಸೋನಿಯಾರ ಆಧಿಪತ್ಯ ಸಾಕೆಂದು ಕ್ಷೀಣ ಸ್ವರದ ಮುದಿಯರು ಪತ್ರ ಬರೆದು ಅಭಿಪ್ರಾಯ ಸಂಘಟಿಸುತ್ತಿದ್ದಾರೆ. ಕಾಂಗ್ರೆಸ್ಸು ಹೇಗೆ, ಯಾರ ಕೈಲಿ ಸಾಯುತ್ತದೋ? ನೋಡೋಣ. ಅದೇ ಗತಿ ಜೆಡಿಎಸ್​ಗೆ, ನ್ಯಾಷನಲ್ ಕಾನ್ಪರೆನ್ಸ್ ನಾಯಕ ಅಬ್ದುಲ್ಲಾ ಕುಟುಂಬಕ್ಕೆ.

    ಕಾಮ್ರೇಡರು ಪೂತನಿಯ ಮಕ್ಕಳಂತೆ. ಎಷ್ಟು ದಿನ ವಿಷವುಂಡು ಬದುಕುತ್ತಾರೋ? ಪ್ರಧಾನಿ ನರೇಂದ್ರ ಮೋದಿಯ ನಾಯಕತ್ವದಲ್ಲಿ ಭಾರತವು ಭಾರತೀಯತ್ವಕ್ಕೆ ಮರಳುತ್ತಿದೆ. ಅದರ ಕುರುಹು ಅಯೋಧ್ಯಾ ಉದ್ಧಾರ. ಇಲ್ಲಿ ಧರ್ಮ, ಮೋಕ್ಷಗಳೂ ಇವೆ. ಆರ್ಥಿಕ ಸುಧಾರಣೆಗಳು ರೂಪಗೊಳ್ಳುತ್ತ ಅರ್ಥವೂ ಪುರುಷಾರ್ಥವಾಗುತ್ತಿದೆ. ಸ್ವಾತಂತ್ರ್ಯದ ಅರ್ಥ, ಪುರುಷಾರ್ಥಗಳೊಳಗಿನ ಜೀವನಕ್ರಮ. ಇಲ್ಲಿ ಬದ್ಧತೆ ಬೇಕು. ‘ಬೇಡ’ ಎಂಬುವವರ ಕಾಲ ಹೋಯ್ತು. ಉಳಿದುದು ಶತ್ರುನಾಶ. ಮೊದಲು ಪಾಕಿಸ್ತಾನ, ಆಮೇಲೆ ಚೀನಾ. ಟಿಬೆಟ್​ನ ಸ್ವಾತಂತ್ರ್ಯ ಉದಯವಾದರೆ, ಚೀನಾದ ಬಲ ಕ್ಷೀಣವಾಗುತ್ತದೆ. ಆರ್ಥಿಕ ದಿಗ್ಬಂಧನ ಹಾಕಿದರೆ, ಪೆಟ್ರೋಲ್ ಇಲ್ಲದೆ ಚೀನಾ ಸಾಯುತ್ತದೆ. ಅದಕ್ಕಾಗಿ ಈಗ ಇರಾನ್​ನ ಅವಲಂಬನೆ! ಇರಾನ್ ನಾಶ ಹತ್ತಿರವಾಗುತ್ತ, ಅತ್ತಣಿಂದ ಇಸ್ರೇಲ್, ಇತ್ತಲಿಂದ ರಷ್ಯಾ ವಿಚಾರಿಸಿಕೊಂಡರೆ, ಇನ್ನೊಂದತ್ತ ದಕ್ಷಿಣ ಚೀನಾ ಸಮುದ್ರದ ನಿರ್ಬಂಧವೂ ಆದರೆ, ಚೀನಾ ಮುಳುಗುತ್ತದೆ. ಇದನ್ನೂ ಓದಿ: ರಾಜಧರ್ಮ- ರಾಜನೀತಿ: ನಮಗೆ ನಿಜವಾಗಿಯೂ ಸ್ವಾಭಿಮಾನ ಇದೆಯೇ?

    ಐರೋಪ್ಯ ರಾಜ್ಯಗಳು ಉದಿಸುವ ಮುನ್ನವೂ ಭಾರತ ಇತ್ತು. ಇಸ್ಲಾಂ, ಕ್ರೖೆಸ್ತಗಳ ಮುಂಚೆಯೂ ಇತ್ತು. ಮಾರ್ಕ್ಸಿಸಂ ಮುನ್ನ ಸಹ. ಇವೆಲ್ಲ ನಾಶವಾದ ಮೇಲೂ ಭಾರತ ಇರುತ್ತದೆ. ಅದರ ಬೇರು ಧರ್ಮ- ಅದು ತತ್ತ್ವಚಿಂತನೆ, ಧ್ಯೇಯಾನ್ವೇಷಣೆ, ಆಚಾರ-ವಿಚಾರ, ಜೀವನಶೈಲಿ, ಸಾಧನೆಗಾಗಿ ದೇವಾಲಯ, ಮಠಗಳು, ಸಾಧು-ಸಂತರು, ಇವರಿಗೆ ದಾರಿ ತೋರುವ ವೇದೋಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಾಗವತಗಳು, ತ್ಯಾಗಿಗಳು, ಆದರ್ಶಪುರುಷರು, ಅವತಾರಿಗಳು, ಸಂತ-ಮಹಂತರು ಇವರಲ್ಲಿದೆ. ಈ ಯಾವುದೂ ಚಿರಾಯು. ಇದನ್ನು ಧರಿಸದ ಸಾಹಿತ್ಯ ಈಗ ಸಾಯುತ್ತಿದೆ. ಒಬ್ಬನಿಗೆ ಎಪ್ಪತ್ತು ಕೆಜಿ ತುಪ್ಪ, ಎಪ್ಪತ್ತು ಕೆಜಿ ಗಂಧ ಹಾಕಿ ಸಾವಿನಲ್ಲಿ ಗೌರವ ತೋರಿಸಿದ್ದೂ, ಆ ಪೂರ್ವದ ಯಾವ ಮುಖಂಡನಿಗೂ, ಈಚಿನ ಪುಢಾರಿಗಳಿಗೂ, ದಂಡವತೆ, ಲೋಹಿಯಾ, ಢಾಂಗೆ ಅವರಿಗೂ ಈ ಭಾಗ್ಯ ಸಲ್ಲಲಿಲ್ಲ. ಅದು ‘ವೇಸ್ಟ್’ ಅಂತ ‘ಸ್ಮಶಾನಭಾಗ್ಯ’ ಅನುಭವಿಸಿದವರಿಗೆ ಇನ್ನೂ ತಿಳಿದಿಲ್ಲ! ಆದರೆ, ತುಪ್ಪ ಉರಿಯುತ್ತದೆ, ದೇವರ ದೀಪಕ್ಕೆ; ಗಂಧ ಉಳಿಯುತ್ತದೆ, ದೇವಾಲಯದ ಧೂಪಕ್ಕೆ. ಮುಳ್ಳುಗಿಡ ಗಂಧವಾಗುವುದಿಲ್ಲ. ವನಸ್ಪತಿ ಎಣ್ಣೆ ತುಪ್ಪವಾಗುವುದಿಲ್ಲ. ಈ ವ್ಯತ್ಯಾಸ ತಿಳಿದಾಗ ಭಾರತ ಬೇಗ ಉದ್ಧಾರವಾಗುತ್ತದೆ. ಪಾಕ್ ಅಲ್ಲ.

    ರಾಜಧರ್ಮ ರಾಜನೀತಿ: ಮತ್ತೆ ಶುರುವಾಯಿತು ರಾಮವಿರೋಧಿಗಳ ಪ್ರಲಾಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts