More

    ರಾಜಧರ್ಮ- ರಾಜನೀತಿ; ರಾಷ್ಟ್ರನಿರ್ಮಾಣಕ್ಕೆ ಬೇಕಾದ ಧನಾತ್ಮಕ ದೃಷ್ಟಿ

    ‘ಲಾಲ್, ಪಾಲ್, ಬಾಲ್’ ಎಂಬ ಲಾಲಾ ಲಜಪತರಾಯ್, ಬಿಪಿನ್ ಚಂದ್ರಪಾಲ್, ಬಾಲಗಂಗಾಧರ ತಿಲಕ್​ರ ಕಾಂಗ್ರೆಸ್ಸು ತುಂಬ ಧನಾತ್ಮಕವಾಗಿತ್ತು. ಅದರಲ್ಲೇ ಸುಭಾಷ್, ಸಾವರ್ಕರ್, ಆಮೇಲಿನ ಶ್ಯಾಮಪ್ರಸಾದಾದಿಗಳೂ ಆಶ್ರಯ ಕಂಡು ಭಾರತೀಯ ರಾಜಕೀಯಕ್ಕೆ ದಿಕ್ಕು ಕೊಡಲು ಯತ್ನಿಸಿದರು.

    ‘ಧನಾತ್ಮಕ’ ಎಂದರೆ ‘ದುಡ್ಡು ಮಾಡುವ’ ದೃಷ್ಟಿ ಅಲ್ಲ. ಅದು ಸೋನಿಯಾ ಕಾಕದೃಷ್ಟಿ, ಅದು ಕಾಂಗ್ರೆಸ್ಸಿನ ‘ಹರಿ ಹಂಚಿಕೊಳ್ಳುವ’, ‘ಕೊಳ್ಳೆಬಾಕತನ’, ‘ಲೂಟಿಯ’ದ್ದಲ್ಲ. ರಚನಾತ್ಮಕ, ಸಕಾರಾತ್ಮಕ, ‘ಕನಸ್ಟ್ರಕ್ಟಿವ್’ ಎಂಬ ಧ್ಯೇಯಾತ್ಮಕ, ‘ಐಡಿಯಲಿಜಂ’ನ ದೃಷ್ಟಿ. ಅದೇ ‘ಪಶ್ಯೇಯ ಶರದಃ ಶತಂ’, ಭದ್ರಂ ಕರ್ಣೆಭಿ ಶೃಖಯಾಮ’ ‘ಏಕಂ ಸತ್, ವಿಪ್ರಾ ಬಹುಧಾ ವದಂತಿ’, ‘ಏಕೋ ದೇವಃ ಸರ್ವಭೂತೇಷು ಗೂಢಃ’, ‘ಸರ್ವೆ ಜನಾಃ ಸುಖಿನೋ ಭವಂತು’, ‘ಉತ್ತಿಷ್ಠತ ಜಾಗ್ರತ’, ‘ಓಂ ಶಾಂತಿಃ’ ಎಂಬ ರೀತಿಯ ದೃಷ್ಟಿ. ಈಗಿನ ಮೋದಿಯವರ ‘ಆತ್ಮನಿರ್ಭರ’, ‘ಸ್ವಾವಲಂಬನ’ ದೃಷ್ಟಿ. ‘ಇದು ಗೊತ್ತೇ ಇದೆ, ಈಗ ನೆನಪಿಸುವುದೇಕೆ?’ ಎಂದು ಕೇಳುವಿರಾದರೆ, ಇಲ್ಲಿ ಕಾರಣವಿದೆ. ಈ ದೇಶವನ್ನು ಸಾವಿರ ವರ್ಷಗಳ ಕಾಲ ಗುಲಾಮಗಿರಿಗೆ ತಳ್ಳಿದ್ದೂ, ಸ್ವಾತಂತ್ರ್ಯ ಬಂದ ಮೇಲೂ ಕಾಂಗ್ರೆಸ್ಸು, ನೆಹ್ರೂ ಪರಂಪರೆ, ಕಾಂಗ್ರೆಸ್ ಮರಿಗಳು ಸಾಯಿಸಿದ್ದೂ ಈ ಸನಾತನ ದೃಷ್ಟಿಯ ವಿರುದ್ಧದ ಅಪಧ್ಯೇಯಗಳು, false goals wrong methods.

    ರಾಜಧರ್ಮ- ರಾಜನೀತಿ; ರಾಷ್ಟ್ರನಿರ್ಮಾಣಕ್ಕೆ ಬೇಕಾದ ಧನಾತ್ಮಕ ದೃಷ್ಟಿ

    ವೇದೇತರ ವಾಕ್ಯವೊಂದರಲ್ಲಿ-‘ಜಗತ್ತು ಭ್ರಾಂತಿ, ಆತ್ಮವೇ ಇಲ್ಲ, ದುಃಖವೇ ಶಾಶ್ವತ, ಚಲನಾತ್ಮಕ ಜೀವನ ಪ್ರವಾಹದಲ್ಲಿ ಎಲ್ಲವೂ ಕ್ಷಣಿಕ’ ಎಂಬ ಗಟ್ಟಿ ಪ್ರಚಾರದ ಬಿರುಗಾಳಿ. ‘ಜಗತ್ತಿನಿಂದ ನಿರ್ಗಮಿಸುವುದೇ ಜೀವನ ಗುರಿ’ ಎಂಬ ಪಲಾಯನವಾದ, ಜೀವನದ ಬಗ್ಗೆ ತಿರಸ್ಕಾರ, ‘ಸೃಷ್ಟಿಯೇ ಆಗಿಲ್ಲ’ ಎಂಬ ‘ನಿಷ್ಪ್ರಪಂಚವಾದ’, ನಿರಾಶಾವಾದ, ‘ಮಾಯಾ’ವಾದ ಇಂಥ ದುರ್ವಾದಗಳು ಎಲ್ಲಾ ಋಣಾತ್ಮಕ ವಾದಗಳಲ್ಲೇ, ದುರ್ದೃಷ್ಟಿಯಲ್ಲೇ ಸೇರುತ್ತವೆ. ಈಗ ಜಗತ್ತನ್ನು ಆಕ್ರಮಿಸಿ, ಎಲ್ಲರನ್ನೂ ತನ್ನ ಬೂಟಿನಡಿಯಲ್ಲಿ ಹೊಸಕುವ ಚೀನೀ ದೃಷ್ಟಿ, ವಾಣಿಜ್ಯಾತ್ಮಕವಾಗಿ ಗೆಲ್ಲಲು ಹೊರಟ ಐರೋಪ್ಯರ ವಸಾಹತುಷಾಹಿ, ಸಾಮ್ರಾಜ್ಯಷಾಹಿ, ಶೋಷಣಾತ್ಮಕ ದೃಷ್ಟಿಗಳು ಎಲ್ಲ ಋಣಾತ್ಮಕವೇ!Kill, Conquer, Convert ಎಂಬ ಕ್ರೖೆಸ್ತ, ಇಸ್ಲಾಮಿಯ ಧ್ಯೇಯಗಳೂ ಋಣಾತ್ಮಕ, ವಿನಾಶಾತ್ಮಕ ಎಂಬುದು ಈಗ ವಿದಿತ! ಇದರಿಂದ ಪ್ರಗತಿಯೂ ಇಲ್ಲಾ, ಶಾಂತಿಯೂ ಇಲ್ಲಾ ಎಂಬುದು Dark ages ಯುಗದ ಆಚೆಗೇ ಜಗತ್ತಿಗೆ ತಿಳಿಯಿತು. ಮತಾಂತರಿತ ಭಾರತೀಯರಿಗೆ, ಕಪು್ಪವರ್ಣೀಯರಿಗೆ, ಆಫ್ರಿಕನ್ನರಿಗೆ, ನಮ್ಮವರೆನಿಸಿದ ದಲಿತರಿಗೆ, ಇನ್ನೂ ತಿಳಿಯುವುದಿದೆ. ‘ಸದ್ಯಕ್ಕೆ ಲಾಭವೇ ಸಾಕು, ಮುಂದೇನಾದರೂ ಆಗಲಿ’ ಎಂಬ ‘ಪ್ರಾಗ್ಮಾಟಿಸಂ’ ಕೂಡ ಋಣಾತ್ಮಕವೇ. ಇನ್ನೊಂದು ‘ಎಕ್ಸಿಸ್ಟೆಂಷಿಯಲಿಸಂ’ ಎಂಬುದು ಐವತ್ತು ವರ್ಷಗಳಿಂದ ಆಂಗ್ಲ ಸಾಹಿತ್ಯವನ್ನು ಕೊಂದ ದೃಷ್ಟಿ, ಅನುಕರಣೆಯ ಹಳ್ಳಕ್ಕೆ ಬಿದ್ದ ನಮ್ಮ ನವ್ಯದ ದೃಷ್ಟಿಯು ಇಂಥದೇ. ‘ಹಾಗೆಂದರೇನು?’ ತಿಳಿಯಿರಿ. ‘ಕಾಮ ಕ್ರೋಧಗಳು ಇವೆ’, ಏಕೆ ಇವೆ ಅಂದರೆ, ಅವು ಇವೆ! ಪೂರೈಸುವುದು ವಾಸ್ತವ ಸತ್ಯ. ಪುಣ್ಯ ಪಾಪ, ಮೌಲ್ಯಗಳು, ಪರಲೋಕ, ಇವೆಲ್ಲ ಭ್ರಾಂತಿ ಕಲ್ಪಿತ. ಈಗ ಜೀವನ ಇದೆ-it’s exists ಹಿಂದೆ, ಮುಂದೆ ಎಂಬವು ನಮ್ಮ ಉಸಾಬರಿ ಅಲ್ಲ ಎಂಬುದು ಈಗ ಅಲ್ಪದೃಷ್ಟಿ.

    ‘ಕಣ್ಣಿಗೆ ಕಾಣುವುದಷ್ಟೇ ಸತ್ಯ, ಪಂಚೇಂದ್ರಿಯಗಳಿಗೆ ಅನುಭವಕ್ಕೆ ಬಾರದುದೆಲ್ಲ ಅಸತ್ಯ’ ಎಂಬ ಭೌತವಾದ, ಅದರ ಕೇಂಬ್ರಿಡ್ಜ್​ನ ಹೊಸ ಅವತಾರ, ನಮ್ಮ ಚಾರ್ವಾಕರ ವಾದ, ಎಲ್ಲ ನಾಸ್ತಿಕವಾದಗಳೂ ಋಣಾತ್ಮಕವೇ. ಇವನ್ನು ಈಗ ಫ್ಯಾಷನ್ ಮಾಡಿ ನಮ್ಮನ್ನು ಸಾಯಿಸುತ್ತಿರುವವರು ಜೀವನ ವಿರೋಧಿಗಳು. ತಿಳಿಯಿರಿ. ಶ್ರೀ ಅರವಿಂದರು Life Divine ಎಂಬ ತಮ್ಮ ಗ್ರಂಥದಲ್ಲಿ ಈ ಬಗೆಯ ದೃಷ್ಟಿಗಳನ್ನು ಪರಾಮಶಿಸಿದ್ದಾರೆ. ಜೀವನದಲ್ಲಿ ಈ ಎರಡೂ ಎಂದೂ ಇವೆ- ಪರಸ್ಪರ ಯುದ್ಧದಲ್ಲಿ. ಚಾರ್ವಾಕನೂ ‘ಪರ’ಲೋಕ, Ideal Values ಇಲ್ಲ ಎಂದ. ಮಾಯಾವಾದಿಯೂ ‘ಇಹ’ವನ್ನೇ ಇಲ್ಲ ಎಂದ! ಅಯ್ಯ, ಎರಡೂ ಕೂಡಿಯೇ ಅಲ್ಲವೇ ಜೀವನ?

    ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ, ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ’ ಎಂಬ ಬಸವಣ್ಣನವರ ಸಮನ್ವಯ ಈಗ ಗಮನಾರ್ಹ, ಪ್ರಸ್ತುತ, ಧನಾತ್ಮಕ. ಎಲ್ಲ ವಚನಕಾರರಲ್ಲೂ, ಈ ಜನ ಸಮರ್ಥಕರಲ್ಲೂ ಈ ಸಮನ್ವಯ ಇದೆಯೇ? ಎಂಬುದು ವಿಚಾರಣೀಯ. ಭಾರತೀಯ ಧರ್ಮ ಎಂಬುದು ಸಮನ್ವಯಾತ್ಮಕ, ಸಮಯ ಸಾಧಕವಲ್ಲ!

    ಚೀನೀಯರಿಗೆ ಪ್ರಶ್ನೆ- ‘ರೋಗವನ್ನು ಜಗತ್ತಿನಲ್ಲಿ ಹರಡಿ, ಕೊಂದು, ನೀವು ಸಾಧಿಸಿರುವುದೇನು? ನೀವು ಶಾಶ್ವತವೇ? ನಿಮ್ಮೀ ಸಾಮ್ರಾಜ್ಯದಾಹ ಹಿಂದಿನ ಹಿರಣ್ಯಾಕ್ಷ, ರಾವಣ, ಕಂಸ, ಜರಾಸಂಧ, ಈ ಯುಗದ ಹಿಟ್ಲರ್, ನೆಪೊಲಿಯನ್, ಸ್ಟಾಲಿನ್, ಹಿಂದೆ ಅಲೆಕ್ಸಾಂಡರ್, ಆಗಿನ ತೈಮೂರ್, ಛಂಗೀಸ್ ಖಾನ್, ಈ ದಿನಗಳ ಭಯೋತ್ಪಾದಕರು, ಅವರ ಮೂಲಗ್ರಹಿಕೆಗಳಾದ ಕ್ಯಾಪಿಟಲಿಸಂ, ಫಂಡ್​ವೆುಂಟಲಿಸಂಗಳು, ತಾಲಿಬಾನ್, ನಾನಾ ಸೇನೆಗಳ ಜಿಹಾದಿ ಗುರಿ ಇವೆಲ್ಲ ಋಣಾತ್ಮಕ, ವಿನಾಶಾತ್ಮಕ ಗೊತ್ತಿಲ್ಲವೇ?’

    ಈಗ ಕಾಂಗ್ರೆಸಿಗೆ ಬನ್ನಿ. ‘ಲಾಲ್, ಪಾಲ್, ಬಾಲ್’ ಎಂಬ ಲಾಲಾ ಲಜಪತರಾಯ್, ಬಿಪಿನ್ ಚಂದ್ರಪಾಲ್, ಬಾಲಗಂಗಾಧರ ತಿಲಕ್​ರ ಕಾಂಗ್ರೆಸ್ಸು ತುಂಬ ಧನಾತ್ಮಕವಾಗಿತ್ತು. ಅದರಲ್ಲೇ ಸುಭಾಷ್, ಸಾವರ್ಕರ್, ಆಮೇಲಿನ ಶ್ಯಾಮಪ್ರಸಾದಾದಿಗಳೂ ಆಶ್ರಯ ಕಂಡು ಭಾರತೀಯ ರಾಜಕೀಯಕ್ಕೆ ದಿಕ್ಕು ಕೊಡಲು ಯತ್ನಿಸಿದರು. ಋಣಾತ್ಮಕ ಚಿಂತನೆಗಳು ಗಾಂಧಿ, ನೆಹರೂ ಪರಂಪರೆಯಲ್ಲಿ ಬೆಳೆದು ನಮ್ಮವರೇ ನಮ್ಮನ್ನು ಇನ್ನೂ ಶೋಷಿಸುತ್ತಿದ್ದಾರೆ, ಸೋತರೂ! ಚೀನಾದಿಂದ ಕೋಟಿಗಟ್ಟಲೇ ಹಣವನ್ನು ರಾಜೀವ್ ಗಾಂಧಿ ಟ್ರಸ್ಟ್​ಗೆ

    ಎಲ್ಲ ವಾಮಮಾರ್ಗದಲ್ಲೂ ಆಮದು ಮಾಡಿಕೊಂಡ ಆರೋಪ ಇದೆಯಲ್ಲ, ಹಾಗಾದರೆ ಸೋನಿಯಾ ಉದ್ದೇಶವೇನು? ಮೆಹುಲ್ ಚೋಕ್ಸಿಯಿಂದ ಪಡೆದುದೋ? ಎಷ್ಟೊಂದು ಹಗರಣಗಳಲ್ಲಿ ಪಡೆದ ಈ ಪಡೆಯ ಕೊಡುಗೆ ಈ ದೇಶಕ್ಕೆ ಏನು? ಚಿದಂಬರಂ ಹೇಳುವರೆ? ಮನಮೋಹನರೋ? ಎ.ಆರ್.ಅಂತುಳೆ ಎಂಬುವವರು ‘ಗಾಂಧಿನಿಧಿ’ ಅಧ್ಯಕ್ಷರಾಗಿದ್ದರಲ್ಲ? ನೆಹ್ರೂ ಟ್ರಸ್ಟ್ ಹಣ ಎಲ್ಲಿ ಹೋಯಿತು? ‘ಗುಳುಂ’ ಎಂಬುದು ಋಣಾತ್ಮಕ. ಇದು ಬದುಕಿಸುವುದಿಲ್ಲ. ಸಾಯಿಸುತ್ತದೆ. ಎಲ್ಲ ಬಗೆಯ ಎಡಪಂಥೀಯ ಚಿಂತನೆಗಳು ಋಣಾತ್ಮಕವೇ? ಪ್ರಶ್ನೆ. ‘ಕಮ್ಯುನಿಸಂ, ಬುದ್ಧಿಸಂ, ಇಂಥವುಗಳಲ್ಲಿ ಒಳ್ಳೆಯದೇನೂ ಇಲ್ಲವೇ ಇಲ್ಲವೇ?’ ಸ್ವಲ್ಪ ಇದೆ. ‘ಯಾರೂ ಶೋಷಿತರಾಗಬಾರದು’ ಎಂಬುದು ಸರಿ. ಆದರೆ ಎಲ್ಲವನ್ನೂ ಸಂಶಯಿಸುವುದು, ರಕ್ತಕ್ರಾಂತಿಯೊಂದೇ ಪರಿಹಾರ ಎಂಬುದು ಸರಿಯಲ್ಲ. ಬೌದ್ಧದಲ್ಲಿ Ethical Values ಬಗ್ಗೆ ಒತ್ತು. ‘ಮನುಷ್ಯನಿಗೆ ಶುದ್ಧ ಚಾರಿತ್ರ್ಯ ಬೇಕು, ಬಾಳುವೆಯಲ್ಲಿ ಶಾಂತಿ ಬೇಕು, ಆತ್ಮೋದ್ಧಾರಕ್ಕೆ ಸಾತ್ವಿಕ ಜೀವನ ದಾರಿ’ ಎಂಬ ಬಗೆಯ ಉಪದೇಶಗಳು- ಎಲ್ಲವೂ ಸರಿಯೇ! ಇವು ಉಪನಿಷತ್ತುಗಳಲ್ಲಿಯೇ ಇವೆಯಲ್ಲಾ ಮಾರಾಯ್ರೆ? ಟಾಲ್ ಸ್ಟಾಯ್ ಬೋಧಿಸುವುದೇನು? ಕನ್​ಫ್ಯೂಷಿಯಸ್, ಲಾವೊತ್ಸೆಗಳು ಬೋಧಿಸಿದ್ದೇನು? ಚೀನಾ ಅನುಸರಿಸುತ್ತಿದೆಯೇ? ಅಮೆರಿಕ, ಅಬ್ರಹಾಂ ಲಿಂಕನ್​ನ ಬೋಧೆ, ಜೀವನ, ಆಡಳಿತ ನೀತಿಯನ್ನು ಹಿಡಿದಿದೆಯೇ? ಆಂಗ್ಲರಲ್ಲಿ ಶೆಕ್ಸ್​ಪಿಯರ್​ನ ‘ಸಮನ್ವಯ’ ಸಿದ್ಧಾಂತಕ್ಕೆ ಬೇರೆ- ರಾಜಕೀಯದಲ್ಲಿ ಇದೆಯೇ? ಈ ಮಹಾಶಯನ ಕೊನೆಯ ನಾಲ್ಕು ನಾಟಕಗಳಲ್ಲಿ ಇವೆ ವಸ್ತು ಸಮನ್ವಯ. Reconeiliation, ಹೊಂದಾಣಿಕೆ ಎಂಬುದು ಟೆಂಪೆಸ್ಮ, ಸಿಂಬೆಲಿನ್ ಮೊದಲಾದವು ಆಂಗ್ಲರಿಗೆ ಆದರಣೀಯವೇ?

    ಈಸ್ಟ್ ಇಂಡಿಯಾ ಕಂಪನಿಯವರಿಗೆ ಸಾಹಿತ್ಯ, ಸಂಗೀತ,ಕಲೆ, ಶಿಲ್ಪ ಬೇಕಿರಲಿಲ್ಲ! ಹಣ, ಅಧಿಕಾರ, ಶಕ್ತಿ ಹಿಡಿದು ನಾಶವಾದರು. ಕ್ರೖೆಸ್ತರು Vandals ಆದರು. ಚೆನ್ನಾಗಿದ್ದ ಶಿಲ್ಪ, ವಾಸ್ತುಗಳನ್ನು ಗ್ರೀಕ್, ರೋಮನ್, ಶಿಲ್ಪಸಾಹಿತ್ಯ ಕಲೆಗಳನ್ನು ನಾಶಮಾಡಿದರು. ಇಸ್ಲಾಮಿಯರು ಭಾರತದಲ್ಲೂ, ಅಫ್ಘಾನಿಸ್ತಾನದಲ್ಲೂ ಬಾಮೀಯ ಬುದ್ಧ ವಿಗ್ರಹಗಳನ್ನು, ದೇವಾಲಯಗಳನ್ನು ನಾಶಮಾಡಿದ್ದು- ಯಾವ ಧನಾತ್ಮಕ ದೃಷ್ಟಿಯಲ್ಲೂ ಅಲ್ಲ. ‘ನಾನೂ ಸಾಯುತ್ತೇನೆ, ಮೊದಲು ನಿನ್ನನ್ನೂ ಸಾಯಿಸುತ್ತೇನೆ’ ಎಂಬ ಆತ್ಮಾಹುತಿದಳದ ಧ್ಯೇಯ ಅತ್ಯಂತಿಕ ವಿನಾಶಾತ್ಮಕ. ಪಾಕಿಸ್ತಾನ ಹುಟ್ಟಿದ್ದೇ ಋಣಾತ್ಮಕ ಚಿಂತನೆಯಲ್ಲಿ. ‘ಹಿಂದೂಗಳೊಡನೆ ಕೂಡಿ ಬದುಕಲು ಸಾಧ್ಯವಿಲ್ಲ’ ಎಂದ ಜಿನ್ನಾ ಸಾಹೇಬರು, ಎಲ್ಲೂ ಒಡಕಿನ ಬೀಜವನ್ನೂ ಬಿತ್ತಿದರು. ‘ಇಸ್ಲಾಮಿಗೆ ಒಂದುಗೂಡಿಸುವ ಶಕ್ತಿ ಇಲ್ಲ’ ಅಂತ ಒಬ್ಬ ಪಾಕ್ ಚಿಂತಕನೇ ಇತ್ತೀಚೆಗೆ ಬರೆದು ಹೇಳಿಕೆಯಿತ್ತಿದ್ದಾನೆ. ಕರ್ನಾಟಕದ ಪಾಳೆಗಾರರಿಗೂ, ಗೌಡ, ಲಾಲೂ, ಮಮತಾ, ಮಾಯಾ, ಪಿಣರಾಯ್, ಉದ್ಧವ್, ದೆಹಲಿಯ ಪಟ್ಟಭದ್ರರಿಗೂ ಯಾರಿಗೂ ಧನಾತ್ಮಕ ಚಿಂತನೆಯಿಲ್ಲ.

    ಇತ್ತೀಚೆಗೆ ಒಬ್ಬರು ನನ್ನನ್ನು ನೋಡಲು ಬಂದಿದ್ದರು. ಸಜ್ಜನರು, ದೇಶಸೇವೆಗೆ ಅರ್ಪಿಸಿಕೊಂಡವರು. ನನ್ನನ್ನ- ‘ವೈಚಾರಿಕತೆಯ ಪ್ರತೀಕ’ ಎಂದು ವರ್ಣಿಸಿದರು. ನಾನೆಂದೆ, ‘ಸ್ವತಂತ್ರ ವಿಚಾರ ಶಕ್ತಿ, ಆವಿಷ್ಕಾರ, ಮಾನವನ ಮೂಲಭೂತ ಹಕ್ಕು. ಇದರಲ್ಲಿ ನನ್ನ ಹೊಸತನ ಇಲ್ಲ. ಇದೆಲ್ಲ ಋಷಿಗಳದೇ ದಾರಿ’ ಅಂತ. ಈಗ ಸ್ವಂತ ವಿಚಾರ, ಸ್ವಾವಲಂಬನೆ, ದೇಶೀಯ ಉತ್ಪನ್ನಗಳ ಆದ್ಯತೆ, ಪರಾವಲಂಬನೆ ತಿರಸ್ಕಾರಕ್ಕೆ ಕರೆ ಕೊಟ್ಟಿರುವ ಮೋದಿ ಧಾಟಿ ಅಪ್ಪಟ ಋಷಿಗಳದೇ ದಾರಿ. ಅದು ಶುದ್ಧ ಭಾರತೀಯ ಚಿಂತನೆ. ಕಾಡಿನಲ್ಲಿ ಸಿಂಹಕ್ಕೆ ಯಾರೂ ‘ಮೃಗರಾಜ’ ಎಂದು ಪಟ್ಟಾಭಿಷೇಕ ಮಾಡುವುದಿಲ್ಲ. ಆದರೂ ಅದು ಮೃಗೇಂದ್ರ! ಇಲ್ಲಿ ‘ನರೇಂದ್ರ’! ಹಿಂದಿನ ‘ರಾಜೇಂದ್ರ’(ಪ್ರಸಾದ್), ‘ಚಕ್ರವರ್ತಿ’, ರಾಜಾಜಿ – ಎಲ್ಲರೂ ಸ್ವಂತ ಚಿಂತಕರೇ. ಕ್ರಿಯಾಶೀಲರೇ! ಪರತಂತ್ರರು ಎಲ್ಲ ನೆಹರೂ ಸಂತಾನವೇ! ಭಾರತೀಯರು ‘ನಮ್ಮತನಕ್ಕೆ’ ಎಚ್ಚೆತ್ತುಕೊಳ್ಳಬೇಕಾದ ಅರುಣೋದಯ ಕಾಲ. ಈಗ ‘ಗುಳುಂ’ ಸಿದ್ಧಾಂತದ, ಆಚರಣೆಯ, ಢೋಂಗಿಗಳು ಎಲ್ಲ ಜೈಲು ಸೇರುವ ಕಾಲ. ಸದ್ಯಕ್ಕೆ ಅಹಮದ್ ಪಟೇಲರ ಸರದಿ. ನಂತರ? ಕಾಂಗ್ರೆಸ್ ಸಮಾಧಿ. ಆಮೇಲೆ ‘ಓಂ ಶಾಂತಿ’.

    (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts