More

    10 ವರ್ಷದ ಹಿಂದಿನ ಕಥೆ; ಆಂಗ್ಲ ಡಾಕ್ಯುಮೆಂಟರಿಗಾಗಿ ಅಪ್ಪಾಜಿ ಬಗ್ಗೆ ಶಿವಣ್ಣ, ಪುನೀತ್​ ಏನೆಲ್ಲ ಮಾತನಾಡಿದ್ರು; ವಿಡಿಯೋ ನೋಡಿ..

    ಬೆಂಗಳೂರು: ಡಾ. ರಾಜ್​ ಪುಣ್ಯಸ್ಮರಣೆ ಪ್ರಯುಕ್ತ ಕಿರಿ ಮಗ ಪುನೀತ್ ರಾಜ್​ಕುಮಾರ್​ 10 ವರ್ಷದ ಹಿಂದಿನ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಆಂಗ್ಲ ಡಾಕ್ಯುಮೆಂಟರಿಯೊಂದಕ್ಕೆ ಪಾರ್ವತಮ್ಮ ರಾಜ್​ಕುಮಾರ್​, ಶಿವರಾಜ್​ಕುಮಾರ್​, ಪುನೀತ್ ರಾಜ್​ಕುಮಾರ್​ ಮತ್ತು ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಮಾತನಾಡಿದ್ದಾರೆ. ಅವರೆಲ್ಲರ ಮಾತಿನ ಆಯ್ದ ಭಾಗ ಇಲ್ಲಿದೆ.
    ಪಾರ್ವತಮ್ಮ ರಾಜ್​ಕುಮಾರ್​ ಅವರು ಮನೆಯಲ್ಲಿದ್ದರೆ ಟೈಮ್​ ಹೇಗೆ ಹೋಗುತ್ತಿತ್ತೋ ಗೊತ್ತಿರಲಿಲ್ಲ. ಅವರಿಲ್ಲ ಅಂದರೆ ಟೈಮ್​ ಕಳೆಯೋದೆ ಕಷ್ಟ.. ಅವರು ನಿಭಾಯಿಸಿದ ರಾಘವೇಂದ್ರ ಸ್ವಾಮಿ ಸಿನಿಮಾ ಈಗಲೂ ಕಾಡುತ್ತದೆ..
    ಶಿವಣ್ಣ; ಅಪ್ಪನ ಕಣ್ಣುಗಳು ತುಂಬ ಆಕರ್ಷಕವಾಗಿದ್ದವು. ಆ ಕಣ್ಣುಗಳು ಎಲ್ಲರಿಗೂ ಇಷ್ಟ.. ಸಿನಿಮಾ ವಿಚಾರದಲ್ಲಿ ತುಂಬ ಬಿಜಿ ಇರುತ್ತಿದ್ದರು. ಒಂದೊಂದು ತಿಂಗಳು ಮನೆಗೆ ಬರುತ್ತಿರಲಿಲ್ಲ. ಯಾವಾಗ ಮರಳಿ ಬರುತ್ತಿದ್ದರೋ, ಬಂದ ಕೂಡಲೇ ಮಿಸ್​ ಆಗಿದ್ದ ಪ್ರೀತಿಯನ್ನು ನೀಡುತ್ತಿದ್ದರು.
    ಪುನೀತ್​; ಶಿಸ್ತು ಅವರ ಜೀವನದ ಬಹುಮುಖ್ಯ ಅಂಗ, ಆಹಾರ ವೇಸ್ಟ್​ ಮಾಡುವುದು ಅವರಿಗೆ ಇಷ್ಟ ಆಗುತ್ತಿರಲಿಲ್ಲ. ಅವರೊಬ್ಬ ಕೇವಲ ನಟನಾಗಿ ಇರಲಿಲ್ಲ. ಪ್ರೀತಿ, ಕಾಳಜಿಗೆ ಹೆಸರಾಗಿದ್ದರು..
    ಹೀಗೆ ವಿಡಿಯೋದಲ್ಲಿ ಒಂದಷ್ಟು ಅಂಶಗಳನ್ನು ಹೇಳಿಕೊಂಡಿದ್ದಾರೆ. ಸದ್ಯ ಆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳೂ ಖುಷಿಯಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts