More

    ಶಿವಮೊಗ್ಗ ಸಾರ್ವಜನಿಕ ಗಣೇಶೋತ್ಸವದಲ್ಲಿ ಪವರ್ ಸ್ಟಾರ್ ಪ್ರಮುಖ ಆಕರ್ಷಣೆ

    ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ. ಬುಧವಾರ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಮೂರ್ತಿಗಳ ಪೈಕಿ ಹಲವು ಮೂರ್ತಿಗಳನ್ನು ಅಂದೇ ವಿಸರ್ಜಿಸಲಾಯಿತು.
    ಜಿಲ್ಲೆಯಲ್ಲಿ ಈ ಭಾರಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲ್ಪಟ್ಟಿರುವ ಗಣೇಶ ಮೂರ್ತಿಗಳ ಸಂಖ್ಯೆ 2,882. ಮೊದಲ ದಿನ ವಿಜೃಂಭಣೆಯ ರಾಜಬೀದಿ ಉತ್ಸವದೊಂದಿಗೆ ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು.
    ಶಿವಮೊಗ್ಗ ನಗರದ ವಿವಿಧೆಡೆ ಪ್ರತಿಷ್ಠಾಪಿಸಲ್ಪಟ್ಟಿರುವ ನಾನಾ ವಿಧಧ ಭಂಗಿಯ ಗಣೇಶ ಮೂರ್ತಿಗಳು ಸಾರ್ವಜನಿಕರ ಗಮನಸೆಳೆಯುತ್ತಿವೆ. ಅನೇಕ ವೃತ್ತಗಳಲ್ಲಿ ಕೇಸರಿ ಬಂಟಿಂಗ್ಸ್ ರಾರಾಜಿಸುತ್ತಿವೆ. ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಬೀದಿ ಸಂಪೂರ್ಣ ಕೇಸರಿಮಯವಾಗಿದೆ.
    ಪೊಲೀಸ್ ಚೌಕಿಯಲ್ಲಿ ಭಗತ್‌ಸಿಂಗ್ ಯುವಕರ ಸಂಘದಿಂದ ಕೃಷ್ಣಾಜಿನದ ಮೇಲೆ ಈಶ್ವರನ ಭಂಗಿಯಲ್ಲಿ ಆಲದ ಮರದ ಕೆಳಗೆ ತ್ರಿಶೂಲ, ಢಮರುಗದೊಂದಿಗೆ ಕುಳಿತ ಗಣೇಶ, ಪಕ್ಕದಲ್ಲೇ ಕುಳಿತ ಸಿಂಹಗಳ ಸನ್ನಿವೇಶ ಮನೋಜ್ಞವಾಗಿದೆ. ಹೊಸಮನೆಯಲ್ಲಿ ಹಿಂದೂ ವಿರಾಟ್ ಸೇವಾ ಸಮಿತಿಯಿಂದ ಗಜವದನನ ಮುಖವನ್ನು ಗಜದ ಮುಖದಿಂದಲೇ ನಿರ್ಮಿಸಿರುವುದು ಮನಸೆಳೆಯುತ್ತಿದೆ.
    ಗಣೇಶನೊಂದಿಗೆ ಪುನೀತ
    ಈ ಬಾರಿ ಗಣೇಶ ಮೂರ್ತಿಯೊಂದಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೂರ್ತಿಯೂ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಬಸವನಗುಡಿ 5ನೇ ಕ್ರಾಸ್‌ನಲ್ಲಿ ಚಂದ್ರೋದಯ ಯುವಕರ ಸಂಘದವರು ಗೌರಿಯ ಮಡಿಲಿನಲ್ಲಿ ಕುಳಿತು ಪುನೀತ್ ಪ್ರತಿಮೆ ನಿರ್ಮಿಸುತ್ತಿರುವ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ.
    ಉಷಾ ನರ್ಸಿಂಗ್ ಹೋಂ ವೃತ್ತದ ಬಳಿ ಕದಂಬ ಬಾಯ್ಸ ಗೆಳೆಯರ ಬಳಗದವರು ಪ್ರತಿಷ್ಠಾಪಿಸಿರುವ ಗಣೇಶ, ಪುನೀತ್ ರಾಜ್‌ಕುಮಾರ್ ಮೂರ್ತಿಗೆ ಸೇಬುಹಣ್ಣು ತಿನಿಸುತ್ತಿರುವ ದೃಶ್ಯ ಗಮನಸೆಳೆಯುತ್ತಿದೆ.

     

     

     

     

     

     

     

     

     

     

     

     

     

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts