More

    2023ನೇ ಸಾಲಿನಲ್ಲಿ ಹೂಡಿಕೆದಾರರಿಗೆ ಹಣದ ಸುರಿಮಳೆ: ಒಂದು ವರ್ಷದಲ್ಲಿ 81.6 ಲಕ್ಷ ಕೋಟಿ ರೂಪಾಯಿ ಲಾಭ

    ಮುಂಬೈ: ಬಿಎಸ್ಇ ಸೂಚ್ಯಂಕವು 11,399 ಅಂಕಗಳ ಏರಿಕೆಯೊಂದಿಗೆ 2023 ಸಾಲನ್ನು ಪೂರ್ಣಗೊಳಿಸಿದೆ. ಬಿಎಸ್‌ಇ ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಎಲ್ಲ ಷೇರುಗಳ ಮಾರುಕಟ್ಟೆ ಬಂಡವಾಳವು 2023ನೇ ಸಾಲಿನಲ್ಲಿ 81.6 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ. ಅಂದರೆ, ಒಂದು ವರ್ಷದಲ್ಲಿ ಷೇರುಗಳು ಗಳಿಸಿದ ಲಾಭ ಇದಾಗಿದೆ. ಈ ಮೂಲಕ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು (ಎಲ್ಲ ಷೇರುಗಳ ಒಟ್ಟು ಮೊತ್ತವು) 364 ಲಕ್ಷ ಕೋಟಿ ರೂಪಾಯಿ ಅಂದರೆ, ಅಂದಾಜು 4 ಲಕ್ಷ ಕೋಟಿ ಡಾಲರ್​ ಮೈಲಿಗಲನ್ನು ದಾಟಿದೆ. ಈ ಮೂಲಕ ಹಾಂಗ್ ಕಾಂಗ್ ಷೇರು ಮಾರುಕಟ್ಟೆಯನ್ನು ಮೀರಿಸಿ, ವಿಶ್ವದ ನಾಲ್ಕನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಲು ಸಜ್ಜಾಗಿದೆ.

    ಸಣ್ಣ ಷೇರುಗಳಲ್ಲಿ ದೊಡ್ಡ ಲಾಭ ಇದೆ ಎಂಬುದು ದಲಾಲ್​ ಸ್ಟ್ರೀಟ್​ನಲ್ಲಿನ ಈ ಸಾಲಿನ ಮಂತ್ರವಾಗಿದೆ.

    ನಿಫ್ಟಿ ಸೂಚ್ಯಂಕವು (50 ದೊಡ್ಡ ಕಂಪನಿಗಳ ಷೇರುಗಳ ಸೂಚ್ಯಂಕ) ಈ ವರ್ಷ ಶೇಕಡಾ 20ರಷ್ಟು ಏರಿಕೆ ಕಂಡಿರುವುದು ಕಡಲೆ ಬೀಜ ಗಳಿಸಿದಂತೆ ಕಾಣುತ್ತದೆ.

    ಕನಿಷ್ಠ 1,000 ಕೋಟಿ (ಡಿಸೆಂಬರ್ 28 ರವರೆಗೆ) ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ 238 ಕಂಪನಿಗಳು ಈ ವರ್ಷ ನೀಡಿದ ಲಾಭ ಪ್ರಮಾಣ ಹುಬ್ಬೇರುವಂತೆ ಮಾಡುತ್ತದೆ. ಈ ಕಂಪನಿಗಳ ಷೇರುಗಳ ಬೆಲೆ 2,961% ರಷ್ಟು ಹೆಚ್ಚಿವೆ.

    ನಿಫ್ಟಿ ಮಿಡ್‌ಕ್ಯಾಪ್ 50 ಸೂಚ್ಯಂಕವು (ಮಧ್ಯಮ ಗಾತ್ರದ 50 ಕಂಪನಿಗಳ ಸೂಚ್ಯಂಕ) ಶೇಕಡಾ 50 ರಷ್ಟು ಏರಿದ್ದರೆ, ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕವು 55% ರಷ್ಟು ಹೆಚ್ಚಳ ಕಂಡಿದೆ.

    ರೂ. 2 ಲಕ್ಷ ಹೂಡಿದ್ದರೆ ಒಂದೇ ವರ್ಷದಲ್ಲಿ ಕೋಟ್ಯಧಿಪತಿ: ಈ ಬಂಪರ್​ ಷೇರು ಯಾವುದು ಗೊತ್ತೆ?

    ಬಿಎಸ್​ಇ, ನಿಫ್ಟಿ ಸೆನ್ಸೆಕ್ಸ್​ ಅಲ್ಪ ಇಳಿಕೆ: 2003ರ ಕೊನೆಯ ವಹಿವಾಟಿನ ದಿನ ಸೂಚ್ಯಂಕ ಕುಸಿತ ಕಂಡಿದ್ದೇಕೆ?

    ಇಂಡಿಯಾ ಮೈತ್ರಿಕೂಟದಲ್ಲಿ ಕಾಣಿಸಿಕೊಳ್ಳುತ್ತಿದೆ ಬಿರುಕು: 23 ಸ್ಥಾನಗಳಲ್ಲಿ ಸ್ಪಧಿಸಲು ಶಿವಸೇನೆ (ಯುಬಿಟಿ) ಪಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts