More

    ಭಾರೀ ಮಳೆಗೆ ರೈಲು ಹಳಿ ಮೇಲೆ ಗುಡ್ಡ ಕುಸಿತ

    ಪಣಜಿ: ಬೆಳಗಾವಿ ಜಿಲ್ಲೆ ಸೇರಿದಂತೆ ಗಡಿ ಭಾಗದಲ್ಲೂ ವರುಣ ಆರ್ಭಟ ಜೋರಾಗಿದ್ದು, ನದಿತೀರದ ಗ್ರಾಮಸ್ಥರಲ್ಲಿ ನೆರೆಭೀತಿ ಆವರಿಸಿದೆ. ಈ ನಡುವೆ ಗೋವಾದ ದೂಧಸಾಗರ ಜಲಪಾತದ ಬಳಿ ಬಾರಿ ಮಳೆಗೆ ರೈಲ್ವೆ ಹಳಿಯ ಮೇಲೆ ಗುಡ್ಡ ಕುಸಿದು ರೈಲ್ವೆ ಸಂಚಾರ ಸ್ಥಗಿತಗೊಂಡಿತ್ತು.

    ಬುಧವಾರ ಬೆಳಗ್ಗೆ ಗೋವಾ ಎಕ್ಸ್​ಪ್ರೆಸ್​ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಲೊಂಡಾ ಜಂಕ್ಷನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ನಂತರ ಅವರನ್ನು ವಿಶೇಷ ಬಸ್ ಮೂಲಕ ವಾಸ್ಕೊಗೆ ತಲುಪಿಸಲು ವ್ಯವಸ್ಥೆ ಕಲ್ಪಿಸಲಾಯಿತು.

    ಇದನ್ನೂ ಓದಿರಿ ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ, ನದಿತೀರದಲ್ಲಿ ನೆರೆಭೀತಿ

    ‘ಗೋವಾ-ಬೆಳಗಾವಿಗೆ ಸಂಪರ್ಕ ಕಲ್ಪಿಸುವ ಚೋರ್ಲಾ ಘಾಟ್‌ನಲ್ಲೂ ಭಾರಿ ಮಳೆಯಾಗಿದ್ದು, ಭೂ ಕುಸಿತ ಸಂಭವಿಸಿ ಸಂಪರ್ಕ ಸ್ಥಗಿತಗೊಂಡಿದೆ. ಗೋವಾ ಮುಖ್ಯಮಂತ್ರಿಗಳ ಕಚೇರಿಯಿಂದ ಬಿಡುಗಡೆಗೊಳಿಸಿರುವ ಸಂದೇಶದಲ್ಲಿ- ಚೋರ್ಲಾ ಘಾಟ್‌ನಲ್ಲಿ ಮಣ್ಣು ತೆರವುಗೊಳ್ಳುವವರೆಗೂ ಈ ಮಾರ್ಗವಾಗಿ ಯಾರೂ ತೆರಳಬಾರದು ಎಂದು ಮನವಿ ಮಾಡಲಾಗಿದೆ.

    ಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts