More

    ಕರಾವಳಿಯಲ್ಲಿ ಸಾಮಾನ್ಯ ಮಳೆ: ಮೋಡ ಸಹಿತ ತಂಪಿನ ವಾತಾವರಣ

    ಮಂಗಳೂರು/ಉಡುಪಿ: ತೌಕ್ತೆ ಚಂಡಮಾರುತ ದೂರವಾಗುತ್ತಿದ್ದಂತೆ, ಕರಾವಳಿಯಲ್ಲಿ ಮಳೆ ತೀವ್ರತೆ ಕಡಿಮೆಯಾಗಿದೆ. ಸೋಮವಾರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಕಂಡುಬಂದು, ಬಿಟ್ಟು ಬಿಟ್ಟು ಸಾಮಾನ್ಯ ಮಳೆ ಸುರಿದಿದೆ. ಉಡುಪಿ ಜಿಲ್ಲೆಯ್ಲಲಿಯೂ ಮೂರು ದಿನಗಳ ಅಬ್ಬರಿಸಿದ್ದ ಮಳೆ, ಸೋಮವಾರ ಪ್ರಭಾವ ತಗ್ಗಿಸಿದೆ. ಹಲವೆಡೆ ಬಿಟ್ಟು ಬಿಟ್ಟು ಸಾಧಾರಣ ಮಳೆ ಸುರಿದಿದೆ.

    ಉಡುಪಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆ ಕಾಲ 32.2 ಮಿ.ಮೀ ಮಳೆ ಸುರಿದಿದೆ. ಬೈಕಾಡಿ, ಚಿತ್ರಪಾಡಿ, ಹೆಗ್ಗುಂಜೆ, ಮುಂಡ್ಕೂರು, ಕೌಡೂರು, ಎಳ್ಳಾರೆ, ಉಳಿಯಾರಗೋಳಿ, ಬೆಳ್ವೆ, ಪಲಿಮಾರು, ಇನ್ನಂಜೆ, ಕೋಟೇಶ್ವರ, ಕೇದೂರು, ಬೀಜಾಡಿ, ಗುಜ್ಜಾಡಿ ಭಾಗದಲ್ಲಿ ಸಾಕಷ್ಟು ಮನೆಗಳ ಮೇಲೆ ಮರಬಿದ್ದು ಹಾನಿ ಸಂಭವಿಸಿದೆ. ಉಡುಪಿಯಲ್ಲಿ 59, ಕುಂದಾಪುರ 64 ಸೇರಿದಂತೆ ಒಟ್ಟು 123 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮಧ್ಯಾಹ್ನ ಬಳಿಕ ರಾತ್ರಿವರೆಗೂ ಉಡುಪಿ ಸುತ್ತಮುತ್ತ ಬಿಟ್ಟುಬಿಟ್ಟು ಮಳೆ ಸುರಿದಿದೆ.

    ಶಾಂತವಾಗದ ಕಡಲು: ಕಡಲು ಇನ್ನೂ ಪ್ರಕ್ಷುಬ್ಧವಾಗಿಯೇ ಇದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಮಂಗಳೂರಿನಿಂದ ಕಾರವಾರದವರೆಗೆ ಮಂಗಳವಾರ ರಾತ್ರಿವರೆಗೂ 3.5ರಿಂದ 5 ಮೀ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಸಲಾಗಿದೆ. ಮಂಗಳವಾರವೂ ಕರಾವಳಿಗೆ ಯೆಲ್ಲೋ ಅಲರ್ಟ್ ವಿಧಿಸಲಾಗಿದ್ದು, ಸಾಮಾನ್ಯ ಮಳೆಯಾಗಲಿದೆ.

    200 ಕಿ.ಮೀ ದಾಟಿದ ಗಾಳಿ: ಚಂಡಮಾರುತ ಗುಜರಾತ್ ತೀರಕ್ಕೆ ಸಮೀಪಿಸುತ್ತಿದ್ದಂತೆ ಗಾಳಿಯ ವೇಗ ಗಂಟೆಗೆ 200 ಕಿ.ಮೀ ದಾಟಿದೆ. ಸೋಮವಾರ ಬೆಳಗ್ಗೆ 180-190 ಕಿ.ಮೀನಿಂದ 210 ಕಿ.ಮೀ. ತಲುಪಿದ್ದರೆ, ಮಧ್ಯಾಹ್ನ 12 ಗಂಟೆಗೆ 200 ಕಿ.ಮೀ ಇತ್ತು. ಜಿಲ್ಲೆಯಲ್ಲಿ ಗಾಳಿಯ ಅಬ್ಬರ ಸ್ವಲ್ಪ ಕಡಿಮೆಯಾಗಿದೆ.

    ತಾಪಮಾನ ಇಳಿಕೆ: ತಾಪಮಾನದಲ್ಲಿ ಗಣನೀಯ ಇಳಿಕೆಯಾಗಿದೆ. ಹಗಲು ವೇಳೆಯಲ್ಲೂ ಥಂಡಿ ಹವೆ ಇದ್ದು, ಮುಂಗಾರಿನ ವಾತಾವರಣ ನಿರ್ಮಾಣವಾಗಿದೆ. ವಾರದ ಹಿಂದೆ 36 ಡಿಗ್ರಿ ಸೆಲ್ಸಿಯಸ್ ಇದ್ದ ಗರಿಷ್ಠ ತಾಪಮಾನ ಸರಾಸರಿಗಿಂತ 5 ಡಿಗ್ರಿ ಸೆಲ್ಸಿಯಸ್ ಇಳಿದಿದೆ. ಸೋಮವಾರ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 24.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts