More

    ರಾಜ್ಯದಲ್ಲಿ ಏಪ್ರಿಲ್ 13ರವರೆಗೂ ಮುಂದುವರಿಯಲಿದೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ಕರೊನಾ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ ಮಳೆ ಆರ್ಭಟವೂ ಮುಂದುವರಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಗುರುವಾರವೂ ರಾಜ್ಯದ ಹಲವೆಡೆ ಮಳೆಯಾಗಿದೆ. ರಾಜ್ಯಾದ್ಯಂತ ಏ.13ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

    ಬೆಂಗಳೂರು, ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ, ದೇವನಹಳ್ಳಿ, ಯಲಹಂಕ, ಕೋಲಾರದ ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಿಲು, ಚಿಕ್ಕಬಳ್ಳಾಪುರ, ಚಿಂತಾಮಣಿ, ಚಾಮರಾಜನಗರ, ಕೊಳ್ಳೇಗಾಲ, ತುಮಕೂರಿನ ಕೊರಟಗೆರೆ ಮತ್ತಿತರರ ಭಾಗಗಳಲ್ಲಿ ಸರಾಸರಿ 10 ರಿಂದ 25 ಮಿ.ಮೀ.ವರೆಗೆ ಮಳೆಯಾಗಿದೆ.

    ಚಿತ್ರದುರ್ಗ, ಯಾದಗಿರಿ, ಮೈಸೂರು, ರಾಮನಗರ, ಹಾಸನ, ಕೊಪ್ಪಳ, ಬೀದರ್, ಉಡುಪಿ, ಮಂಡ್ಯ, ದಕ್ಷಿಣ ಕನ್ನಡ ಮತ್ತಿತರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

    ಕರಾವಳಿ, ಉತ್ತರ ಒಳನಾಡಿನಕ್ಕಿಂಥ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಹೆಚ್ಚು ಮಳೆಯಾಗಲಿದೆ. ಕೆಲವೆಡೆ ಅಕಾಲಿಕ ಮಳೆಯಿಂದ ರೈತರು ಬೆಳೆದಿರುವ ಬೆಳೆಗಳು ಹಾಳಾಗಿವೆ ಬಗ್ಗೆ ವರದಿಯಾಗಿದೆ.

    ಗುಣಮುಖರಾದವರಲ್ಲಿ ಮತ್ತೆ ಸೋಂಕು: ತಲೆನೋವು ತಂದ ಕರೊನಾ ವೈರಸ್​ ಹೊಸ ವರಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts