More

    ತುಂಗಭದ್ರಾ ನದಿ ನೀರಿನ ಮಟ್ಟ ಏರಿಕೆ

    ಹರಿಹರ: ಮಲೆನಾಡು ಪ್ರದೇಶದಲ್ಲಿ ಮಳೆ ಹೆಚ್ಚು ಸುರಿಯುತ್ತಿರುವ ಕಾರಣ ತುಂಗಭದ್ರಾ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.

    ಶನಿವಾರ, ನೀರಿನ ಮಟ್ಟ 9.200 ಮೀಟರ್‌ಗೆ ಏರಿದೆ. ಶುಕ್ರವಾರ 7.240 ಮೀ., ಗುರುವಾರ 7.210 ಮೀ. ಇತ್ತು. ಮಳೆ ಇನ್ನಷ್ಟು ದಿನ ಮುಂದುವರಿದರೆ ನದಿಯಲ್ಲಿ ಮತ್ತೆ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಈ ನಡುವೆ ಭದ್ರಾ ಜಲಾಶಯದಿಂದ ನೀರು ಬಿಟ್ಟರೂ ಹರಿವು ಹೆಚ್ಚುತ್ತದೆ.

    ಜುಲೈನಲ್ಲಿ ನದಿ ಹಿನ್ನೀರಿನಿಂದಾಗ ಗಂಗಾನಗರದ ಮನೆಗಳು ಜಲಾವೃತವಾಗಿದ್ದವು. ಚಿಕ್ಕಬಿದರಿ-ಸಾರಥಿ ಹಾಗೂ ಉಕ್ಕಡಗಾತ್ರಿ- ನಂದಿಗುಡಿ ನಡುವಿನ ಸೇತುವೆ ಮುಳುಗಿ ರಸ್ತೆ ಸಂಪರ್ಕ ಕಡಿತವಾಗಿತ್ತು. ಮತ್ತದೇ ದುಸ್ಥಿತಿ ಎದುರಾಗುವ ಸಾಧ್ಯತೆ ಇದೆ.
    ಮಳೆ ಪ್ರಮಾಣ: ಹರಿಹರದಲ್ಲಿ ಶುಕ್ರವಾರ 10.2, ಮಲೆಬೆನ್ನೂರು 14, ಕೊಂಡಜ್ಜಿ 9.2, ಹೊಳೆಸಿರಿಗೆರೆಯಲ್ಲಿ 10.4 ಮಿ.ಮೀ ಒಟ್ಟು 43.6 ಹಾಗೂ ಸರಾಸರಿ 10.90 ಮಿ.ಮೀ. ಮಳೆ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts