More

    ರಾಜ್ಯದ ಹಲವೆಡೆ ಮೂರು ದಿನ ಮಳೆ; ತಾಪಮಾನ ಏರಿಕೆ, ಮೇಲ್ಮೈ ಸುಳಿಗಾಳಿ ಪರಿಣಾಮ

    ಬೆಂಗಳೂರು: ರಾಜ್ಯದ ಹಲವೆಡೆ ಸೋಮವಾರ ಮಳೆಯಾಗಿದ್ದು, ಗುರುವಾರದವರೆಗೂ (ಮಾ.26) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತುಮಕೂರು ಜಿಲ್ಲೆಯ ಕೊರಟಗೆರೆಯ ನೀಲ ಗೊಂಡನಹಳ್ಳಿಯಲ್ಲಿ ಅತಿ ಹೆಚ್ಚು (72 ಮಿಮೀ) ಮಳೆ ಯಾಗಿದ್ದರೆ, ಬೆಂಗಳೂರು ಉತ್ತರದ ಸೊಂಡೆಕೊಪ್ಪದಲ್ಲಿ 59 ಮಿಮೀ, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಬಿ.ಜಿ.ದೊಡ್ಡಿಯಲ್ಲಿ 45 ಮಿಮೀ, ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಂಗಳದಲ್ಲಿ 42 ಮಿಮೀ ಹಾಗೂ ನೆಲಮಂಗಲದ ಯಂಟೆಗಾನಹಳ್ಳಿಯಲ್ಲಿ 38 ಮಿಮೀ ಮಳೆ ಬಿದ್ದಿದೆ. ಮೈಸೂರು, ಉಡುಪಿ ಮತ್ತಿತರರ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ. ಮುಂದಿನ ಮೂರು ದಿನಗಳಲ್ಲಿ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ ಇದೆ.

    ಬೆಂಗಳೂರಿನ ಹಾರೋಹಳ್ಳಿಯಲ್ಲಿ 35 ಮಿಮೀ, ಸೂಲದೇವನಹಳ್ಳಿ 32 ಮಿಮೀ, ಕೊಡಿಗೆಹಳ್ಳಿ ಮತ್ತು ಕಡಬಗೆರೆಯಲ್ಲಿ ತಲಾ 23 ಮಿಮೀ, ಮಾರುತಿಮಂದಿರ 20 ಮಿಮೀ, ತಾವರಕೆರೆ 19 ಮಿಮೀ, ನಾಗರಭಾವಿ 17 ಮಿಮೀ, ಗಾಳಿ ಆಂಜನೇಯ ದೇವಸ್ಥಾನ 15 ಮಿಮೀ, ಅಗ್ರಹಾರ ದಾಸರಹಳ್ಳಿ 16 ಮಿಮೀ, ಚಾಮರಾಜಪೇಟೆ 15 ಮಿಮೀ ಹಾಗೂ ಕಾಟನ್​ಪೇಟೆಯಲ್ಲಿ 14 ಮಿಮೀ ಮಳೆಯಾಗಿದೆ ಎಂದು ವರುಣಮಿತ್ರ ತಿಳಿಸಿದೆ. ಕೆಲ ತಗ್ಗು ಪ್ರದೇಶಗಳಲ್ಲಿ ಹಾಗೂ ರಸ್ತೆಗಳ ಮೇಲೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು ಪರದಾಡಿದರು.

    ಬಿರುಗಾಳಿ ಸಹಿತ ಮಳೆಗೆ ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದಲ್ಲಿ ಕೆಲ ಮನೆಗಳಿಗೆ ಹಾನಿಯಾಗಿದೆ. ಗ್ರಾಮದ ಸುತ್ತಮುತ್ತಲ ನೂರಾರು ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಜಮೀನಿನಲ್ಲಿ ಬೆಳೆದಿದ್ದ ನೂರಾರು ತೆಂಗು, ಮಾವು ಮರಗಳು ಬಿದ್ದಿವೆ. ಗ್ರಾಮದ ಹಲವು ಮನೆಗಳ ಮೇಲ್ಛಾವಣಿಗೆ ಹಾಕಲಾಗಿದ್ದ ಶೀಟ್​ಗಳು, ಹೆಂಚುಗಳು ಹಾರಿಹೋಗಿವೆ.

    ಸೋಮವಾರ ಒಂದೇ ದಿನ ರಾಜ್ಯದಲ್ಲಿ 7 ಮಂದಿ ಕರೊನಾ ಸೋಂಕು ಪೀಡಿತರು ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts