More

    ಜನರಲ್​ ಕೋಚ್‌ ಪ್ರಯಾಣಿಕರಿಗೂ 20 ರೂ. ಊಟ, ನೀರಿನ ಬಾಟಲಿ ನೀಡಲು ಮುಂದಾದ ರೈಲ್ವೆ ಇಲಾಖೆ!

    ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ರೈಲಿನಲ್ಲಿ ಪ್ರಯಾಣಿಸುವ ತನ್ನ ಪ್ರಯಾಣಿಕರಿಗೆ ಇದೀಗ ಕೈಗೆಟುಕವ ದರದಲ್ಲಿ ಊಟ ಮತ್ತು ನೀರಿನ ಬಾಟಲಿಯನ್ನು ನೀಡಲು ನಿರ್ಧರಿಸಿದೆ.

    ಇದನ್ನೂ ಓದಿ: ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ: ಅಧ್ಯಕ್ಷ , ಉಪಾಧ್ಯಕ್ಷರಾಗಿ ಆಯ್ಕೆ

    ರೈಲಿನ ಪ್ರಯಾಣದ ಅನುಭವವನ್ನು ಉತ್ತಮಗೊಳಿಸಲು ಜನರಲ್​ ಕೋಚ್ ಪ್ರಯಾಣಿಕರಿಗೆ ವಿಶೇಷವಾಗಿ ಕೈಗೆಟುಕುವ ದರದಲ್ಲಿ ಊಟ ಮತ್ತು ಪ್ಯಾಕೇಜ್ಡ್ ನೀರನ್ನು ನೀಡಲು ನಿರ್ಧರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈಲ್ವೆ ಮಂಡಳಿ ಹೊರಡಿಸಿದ ಆದೇಶದ ಪ್ರಕಾರ, ಈ ಊಟಗಳನ್ನು ಪೂರೈಸುವ ಕೌಂಟರ್‌ಗಳನ್ನು ಸಾಮಾನ್ಯ ಕೋಚ್‌ಗಳಿಗೆ ಹೊಂದಿಕೆಯಾಗುವ ಪ್ಲಾಟ್‌ಫಾರ್ಮ್‌ಗಳಲ್ಲಿ ಇರಿಸಲಾಗುವುದು.

    ಆಹಾರವನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದ್ದು, 20 ರೂ. ಬೆಲೆಗೆ ದೊರೆಯುವ ಟೈಪ್​ 1ರಲ್ಲಿ 7 ಪೂರಿಗಳು, ಆಲೂ ಮತ್ತು ಉಪ್ಪಿನಕಾಯಿ ಇರುತ್ತದೆ. ಟೈಪ್ 2, 50 ರೂ.ಗೆ ಸಿಗುವ ಊಟದಲ್ಲಿ ಅನ್ನ, ರಾಜ್ಮಾ, ಚೋಲೆ, ಖಿಚಡಿ ಕುಲ್ಚೆ, ಭಟೂರ್, ಪಾವೊ-ಭಾಜಿ ಮತ್ತು ಮಸಾಲೆ ದೋಸೆಯಂತಹ ದಕ್ಷಿಣ ಭಾರತೀಯ ಆಹಾರಗಳು ಲಭ್ಯವಿರುತ್ತದೆ.

    ಇದನ್ನೂ ಓದಿ: ಟ್ರಾಫಿಕ್ ಸಮಸ್ಯೆಗಳಿಗೂ 112ಗೆ ಕರೆ ಮಾಡಿ;ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚನೆ

    ಜಿ.ಎಸ್ ಕೋಚ್‌ಗಳ ಬಳಿ ಇರುವ ಪ್ಲಾಟ್‌ಫಾರ್ಮ್‌ನಲ್ಲಿ ಇರಿಸಲಾಗುವ ಕೌಂಟರ್‌ಗಳ ಮೂಲಕ ಮಿತ ವ್ಯಯದ ಊಟ ಮತ್ತು ಕುಡಿಯುವ ನೀರಿನ ಬಾಟಲಿಯನ್ನು ಒದಗಿಸುವಂತೆ ರೈಲ್ವೆ ಮಂಡಳಿಯು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದೆ,(ಏಜೆನ್ಸೀಸ್).

    ಸೂಚನೆ ನೀಡಿ ತಡೆದರೂ ನಮ್ಮ ಮೇಲೆಯೇ ಕೇಸ್: ಭಜರಂಗದಳ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts