More

    ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ: ಅಧ್ಯಕ್ಷ , ಉಪಾಧ್ಯಕ್ಷರಾಗಿ ಆಯ್ಕೆ

    ತಾವರಗೇರಾ: ಸಮೀಪದ ಸಂಗನಾಳ ಗ್ರಾಪಂಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷ ರೇವಣಪ್ಪ ರಾವಣಕಿ, ಉಪಾಧ್ಯಕ್ಷೆಯಾಗಿ ರುದ್ರಮ್ಮ ಗದ್ದಿ ಆಯ್ಕೆಯಾದರು.


    ಗ್ರಾಪಂಯು ಒಟ್ಟು 16 ಸದಸ್ಯರ ಬಲ ಹೊಂದಿದ್ದು, ಚುನಾವಣೆಯಲ್ಲಿ ರೇವಣಪ್ಪ ರಾವಣಕಿ 9 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ಅಧ್ಯಕ್ಷ ಸ್ಥಾನದ ಪ್ರತಿಸ್ಪರ್ಧಿ ಮರಿಯಮ್ಮ ಸಣ್ಣ ಹನುಮಪ್ಪ 7 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರುದ್ರಮ್ಮ ಗದ್ದಿ ಹಾಗೂ ಶಾರದಾ ನಾಗಪ್ಪ ಸಮಬಲಗಳ ತಲಾ 8 ಮತ ಪಡೆದಿದ್ದರು. ನಂತರ ಚುನಾವಣೆ ಅಧಿಕಾರಿಗಳು ಚೀಟಿ ಎತ್ತುವ ಮೂಲಕ ಉಪಾಧ್ಯಕ್ಷೆಯಾಗಿ ರುದ್ರಮ್ಮ ಗದ್ದಿಯನ್ನು ಆಯ್ಕೆ ಮಾಡಿದರು. ಅಧ್ಯಕ್ಷ, ಉಪಾಧ್ಯಕ್ಷರು ಕಾಂಗ್ರೆಸ್ ಬೆಂಬಲಿತರಾಗಿದ್ದು, ಫಲಿತಾಂಶ ಹೊರ ಬಿಳುತ್ತಿದ್ದಂತೆ ಕಾರ್ಯಕರ್ತರು, ಮುಖಂಡರು ವಿಜಯೋತ್ಸವ ಆಚರಿಸಿದರು.

    ಇದನ್ನೂ ಓದಿ: ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ


    ಚುನಾವಣೆ ಅಧಿಕಾರಿ ಸೂಗೂರಪ್ಪ, ಬಸವರಾಜ ಕಟ್ಟಿಮನಿ ಚುನಾವಣಾ ಪ್ರಕ್ರಿಯೆ ನಡೆಸಿದರು. ಪಿಎಸ್‌ಐ ತಿಮ್ಮಣ್ಣ ನಾಯಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಲಾಗಿತ್ತು. ಪಿಡಿಒ ಕವಿತಾ ಪಾಟೀಲ್ ಕಾರ್ಯದರ್ಶಿ ಮತ್ತು ಸಿಬ್ಬಂದಿ, ಪ್ರಮುಖರಾದ ವೀರೇಶ ಗುರಿಕಾರ, ವಕೀಲ ತಿಪ್ಪಣ್ಣ, ರುದ್ರಗೌಡ ಕುಲಕರ್ಣಿ, ಅಮರೇಶ ಕುಂಬಾರ ಇದ್ದರು


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts