ತಾವರಗೇರಾ: ಸಮೀಪದ ಕಿಲ್ಲಾರಹಟ್ಟಿ ಗ್ರಾಪಂಯ ಎರಡನೇ ಅವಧಿಗೆ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮತ್ತು ಉಪಾಧ್ಯಕ್ಷೆಯಾಗಿ ಅನಂತಮ್ಮ ತುಮ್ಮಲಗಡ್ಡಿ ಅವಿರೋಧವಾಗಿ ಆಯ್ಕೆಯಾದರು.
ಕಿಲ್ಲಾರಹಟ್ಟಿ ಗ್ರಾಪಂಯಲ್ಲಿ ಒಟ್ಟು 26 ಜನ ಸದಸ್ಯರಿದ್ದು, ಅಧ್ಯಕ್ಷ ಪರಿಶಿಷ್ಟ ಪಂಗಡದ ಮೀಸಲು ಸ್ಥಾನಕ್ಕೆ ಶರಣೇಗೌಡ ಪೊಲೀಸ್ ಪಾಟೀಲ್, ಉಪಾಧ್ಯಕ್ಷೆ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಅನಂತಮ್ಮ ತುಮ್ಮಲಗಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ದುರ್ಗಾ ಪ್ರಸಾದ ಘೋಷಿಸಿದರು. ಕಾಂಗ್ರೆಸ್ ಬೆಂಬಲಿತರಾದ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆಯಾದರು. ಪಿಡಿಒ ರಾಮಣ್ಣ ದಾಸರ , ಕಾರ್ಯದರ್ಶಿ ಛತ್ರಪ್ಪ ಕಾಟಿಗಲ್ ಇದ್ದರು.
ಇದನ್ನೂ ಓದಿ: 14 ಮತ ಪಡೆದು ಮಂಗಳಮ್ಮ ಅಧ್ಯಕ್ಷೆಯಾಗಿ ಆಯ್ಕೆ