14 ಮತ ಪಡೆದು ಮಂಗಳಮ್ಮ ಅಧ್ಯಕ್ಷೆಯಾಗಿ ಆಯ್ಕೆ

Untitled design
ಗುಂಡೂರು ಗ್ರಾಪಂಗೆ ಅಧ್ಯಕ್ಷೆ ಮಂಗಳಮ್ಮ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಸತ್ಯವತಿ ಅವರನ್ನು ಕಾಂಗ್ರೆಸ್ ಬೆಂಬಲಿತ ಸದಸ್ಯರು ಸನ್ಮಾನಿಸಿದರು.
Published on

ಸಿದ್ದಾಪುರ: ಸಮೀಪದ ಗುಂಡೂರು ಗ್ರಾಪಂಗೆ ಎರಡನೇ ಅವಧಿಗೆ ಅಧ್ಯಕ್ಷೆ ಮಂಗಳಮ್ಮ ಹಾಗೂ ಉಪಾಧ್ಯಕ್ಷೆಯಾಗಿ ಸತ್ಯವತಿ ಆಯ್ಕೆಯಾದರು.


ಗುಂಡೂರು ಗ್ರಾಪಂಯಲ್ಲಿ ಒಟ್ಟು 24 ಜನ ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಎಸ್.ಸಿ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿತ್ತು. ಕಾಂಗ್ರೆಸ್ ಪರ ಮಂಗಳಮ್ಮ ಹಾಗೂ ಬಿಜೆಪಿಯಿಂದ ಬಸವರಾಜ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಬಸವರಾಜ 10, ಮಂಗಳಮ್ಮ 14 ಮತ ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸತ್ಯವತಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು. ಗೆಲುವು ಸಾಧಿಸಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.


ಗ್ರಾಪಂ ಸದಸ್ಯರಾದ ವಿಜಯಲಕ್ಷ್ಮೀ, ಚಂದ್ರಕಲಾ, ವಿರೇಶ್, ಕಾರ್ಯಕರ್ತರಾದ ಈ. ಸುರೇಶ್ ಬಾಬು, ಈ. ಶ್ರೀನಾಥ್, ಗೋನಾಳ ಸುರೇಶ್, ರುದ್ರೇಶ್ ಸಿಂಗನಾಳ, ಮಂಜುನಾಥ ಬಾಗೋಡಿ, ಸತ್ಯನಾರಾಯಣ ಕೆ.ಜಿ. ಕ್ಯಾಂಪ್, ಬೆಟ್ಟಪ್ಪ ಭೋವಿ, ಬಸವರಾಜ ಹೊಟೇಲ್, ಕುಮಾರ್ ಹೂಗಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net