More

    ಹುಲಿಹೈದರ ಗ್ರಾಪಂಗೆ ಶರಣಮ್ಮ ಕೆಲ್ಲೂರು ಅಧ್ಯಕ್ಷೆ

    ಕನಕಗಿರಿ(ಕೊಪ್ಪಳ) : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ತಾಲೂಕಿನ ಹುಲಿಹೈದರ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಶರಣಮ್ಮ ಕೆಲ್ಲೂರು, ಉಪಾಧ್ಯಕ್ಷರಾಗಿ ಜಗದೀಶ ಗದ್ದಿ ಆಯ್ಕೆಯಾಗಿದ್ದಾರೆ.

    ಅಧ್ಯಕ್ಷ ಸ್ಥಾನವು ಎಸ್ಟಿ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಒಟ್ಟು 23 ಸದಸ್ಯ ಬಲದ ಗ್ರಾಪಂಗೆ ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 22 ಸದಸ್ಯರು ಹಾಜರಾಗಿದ್ದರು. ಸದಸ್ಯೆ ದೇವಮ್ಮ ಗೈರಾಗಿದ್ದರು.

    ಕಾಂಗ್ರೆಸ್ ಬೆಂಬಲಿತರಾಗಿ ಅಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಶರಣಮ್ಮ ಕೆಲ್ಲೂರು, ಉಪಾಧ್ಯಕ್ಷ ಸ್ಥಾನಕ್ಕೆ ಜಗದೀಶ ಗದ್ದಿ ತಲಾ 12 ಮತಗಳನ್ನು ತೆಗೆದುಕೊಂಡು ಗೆಲುವು ಸಾಧಿಸಿದರೆ, ಬಿಜೆಪಿಯ ಬೆಂಬಲಿತರಾಗಿ ಸ್ಪರ್ಧೆಗಿಳಿದಿದ್ದ ಸುನೀತಾ ನಾಮಸೇವೆ, ಪಾಲಾಕ್ಷಗೌಡ ತಲಾ 10 ಮತಗಳನ್ನು ಪಡೆದುಕೊಂಡು 2 ಮತಗಳ ಅಂತರದಲ್ಲಿ ಸೋಲಪ್ಪಿದ್ದಾರೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ ಸಂಜಯ ಕಾಂಬ್ಳೆ ತಿಳಿಸಿದರು.

    ಬಿಜೆಪಿ ಬೆಂಬಲಿತ ಸದಸ್ಯೆಯಾಗಿದ್ದ ದೇವಮ್ಮ ಎಸ್ಟಿ ವರ್ಗಕ್ಕೆ ಸೇರಿದ್ದು, ಇತ್ತೀಚೆಗೆ ಕಾಂಗ್ರೆಸ್‌ಗೆ ಬೆಂಬಲಿಸಿ ಪ್ರವಾಸ ತೆರಳಿದ್ದರು. ಇವರಿಗೆ ಅಧಿಕಾರ ಹಂಚಿಕೆಯ ಭರವಸೆ ನೀಡಲಾಗಿತ್ತು. ಕೊನೆ ಗಳಿಗೆಯಲ್ಲಿ ಭರವಸೆ ಈಡೇರಿಸಲು ಹಿಂದೇಟು ಹಾಕಿದ್ದು, ಅದಕ್ಕಾಗಿಯೇ ಅವರನ್ನು ಚುನಾವಣೆಯಿಂದ ದೂರವಿಡಲಾಗಿದೆ ಆರೋಪ ಕೇಳಿ ಬಂದಿದೆ.ಪಿಐ ಜಗದೀಶ ಕೆ.ಜೆ, ಪಿಎಸ್‌ಐ ಕಾಶಿಂಸಾಬ, ಪಿಡಿಒ ಅಮರೇಶ ರಾಠೋಡ್, ತಾ.ಪಂ ಚುನಾವಣಾ ಸಂಯೋಜಕ ಕೊಟ್ರಯ್ಯ, ಯರಡೋಣ ಸೇರಿ ಇತರರಿದ್ದರು.

    ಮೂರನೇ ಚುನಾವಣಾಧಿಕಾರಿ : ಈ ಮೊದಲು ನೀರಾವರಿ ಇಲಾಖೆಯ ಸತ್ಯಪ್ಪ ಹುಲಿಹೈದರ ಗ್ರಾಪಂನ ಚುನಾವಣಾಧಿಕಾರಿಯನ್ನಾಗಿ ನೇಮಕಗೊಳಿಸಲಾಗಿತ್ತು. ಆದರೆ, ಅವರ ವರ್ಗಾವಣೆಗೊಂಡಿದ್ದರಿಂದ ತಾಪಂ ಯೋಜನಾಧಿಕಾರಿ ನಿರ್ದೇಶಕ ರಾಜಶೇಖರ ಪಾಟೀಲ್‌ ನೇಮಕಗೊಳಿಸಲಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಚುನಾವಣೆ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts