More

    ಸದ್ಯಕ್ಕಿಲ್ಲ ಪ್ರಯಾಣಿಕ ರೈಲ್ವೆ ಸೇವೆ

    ನವದೆಹಲಿ: ಈ ಹಿಂದೆ ಹಂತ ಹಂತವಾಗಿ ರೈಲ್ವೆ ಸೇವೆ ಆರಂಭಿಸುವುದಾಗಿ ಹೇಳಿದ್ದ ಭಾರತೀಯ ರೈಲ್ವೆ ಸದ್ಯ ಸೇವೆ ಇಲ್ಲ ಎಂಬ ಸುಳಿವು ನೀಡಿದೆ.
    ಜೂನ್ 30 ರಂದು ಅಥವಾ ಅದಕ್ಕೂ ಮುನ್ನ ಪ್ರಯಾಣಕ್ಕಾಗಿ ಮಾರ್ಚ್ 25 ರ ಮುನ್ನ ಕಾಯ್ದಿರಿಸಿದ ಎಲ್ಲ ರೈಲು ಟಿಕೆಟ್​​ಗಳನ್ನು ರದ್ದುಗೊಳಿಸಲಾಗುವುದು ಮತ್ತು ಗ್ರಾಹಕರಿಗೆ ಪೂರ್ಣ ಮರುಪಾವತಿ ಮಾಡಲಾಗುವುದು ಎಂದು ರೈಲ್ವೆ ಸಚಿವಾಲಯ ಗುರುವಾರ ಪ್ರಕಟಿಸಿದೆ.
    ಇನ್ನೇನು ರೈಲ್ವೆ ಸೇವೆ ಆರಂಭಗೊಳ್ಳಲಿದ್ದು, ಜೀವನ ಸಹಜ ಸ್ಥಿತಿಗೆ ಬರುತ್ತದೆ ಎಂದುಕೊಂಡು ನಿಟ್ಟುಸಿರು ಬಿಟ್ಟಿರುವ ಲಕ್ಷಾಂತರ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯ ಈ ನಿರ್ಧಾರದಿಂದ ನಿರಾಸೆಯಾಗಿದೆ.

    ಇದನ್ನೂ ಓದಿ: ಶಾಲೆಗಳು ಪುನರಾರಂಭವಾದಾಗ ಹೀಗಿದ್ದರೆ ಚೆನ್ನ..!

    ಕರೊನಾ ಲಾಕ್​​ಡೌನ್ ನಿಂದಾಗಿ ವಿವಿಧೆಡೆ ಸಿಲುಕಿರುವ ವಲಸೆ ಕಾರ್ಮಿಕರನ್ನು ಸಾಗಿಸಲು ವ್ಯವಸ್ಥೆ ಮಾಡಲಾದ ಶ್ರಮಿಕ್ ವಿಶೇಷ ರೈಲು ವ್ಯವಸ್ಥೆ ಮುಂದುವರಿಯಲಿದೆ. ಮೇ 12 ರಂದು ಕಾರ್ಯ ಆರಂಭಿಸಿದ 15 ವಿಶೇಷ ಅಂತರರಾಜ್ಯ ಪ್ರಯಾಣಿಕ ರೈಲುಗಳು ಸಹ ಯಾವುದೇ ಬದಲಾವಣೆ ಇಲ್ಲದೆ ನಿರಂತರವಾಗಿ ಸೇವೆಯಲ್ಲಿರುತ್ತವೆ. ಸಚಿವಾಲಯದ ಇತ್ತೀಚಿನ ಪ್ರಕಟಣೆ ಈ ಮೇಲೆ ತಿಳಿಸಿದ ರೈಲ್ವೆ ಸೇವೆಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ. 

    ಈ ತಿಂಗಳ ಆರಂಭದಲ್ಲಿ ಕರೊನಾವೈರಸ್ ಲಾಕ್​ಡೌನ್ ಜಾರಿಯಿಂದಾಗಿ ದೇಶಾದ್ಯಂತ ವಿವಿಧೆಡೆ ಸಿಲುಕಿರುವ ವಲಸೆ ಕಾರ್ಮಿಕರನ್ನು ಸ್ಥಳೀಯ ಊರುಗಳಿಗೆ ಸಾಗಿಸಲು ಸರ್ಕಾರ ವಿಶೇಷ ಶ್ರಮಿಕ್ ರೈಲು ಸೇವೆ ಆರಂಭಿಸಿದೆ. ಈಗವರೆಗೆ 600 ಕ್ಕೂ ಹೆಚ್ಚು ವಿಶೇಷ ರೈಲುಗಳು ಕಾರ್ಯನಿರ್ವಹಿಸಿವೆ.

    ಇದನ್ನೂ ಓದಿ: ಕರೊನಾಕ್ಕೆ ಸಿದ್ಧವಾಗಿದೆ ಆಯುರ್ವೇದದ 4 ಮದ್ದು; ಕ್ಲಿನಿಕಲ್​ ಪ್ರಯೋಗಕ್ಕೆ ಸಿದ್ಧತೆ

    ಲಾಕ್​ಡೌನ್​ನಿಂದಾಗಿ ಅಲ್ಲಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಸಾಗಿಸುವ ಒತ್ತಡದಲ್ಲೇ ಇರುವ ರೈಲ್ವೆ ಇಲಾಖೆ ಸಧ್ಯ ಪ್ರಯಾಣಿಕ ರೈಲ್ವೆ ಸೇವೆ ತಾತ್ಕಾಲಿಕವಾಗಿ ಕೈಬಿಡಲು ನಿರ್ಧರಿಸಿರಬಹುದು ಅಥವಾ ರಾಜಧಾನಿ ಎಕ್ಸ್​ಪ್ರೆಸ್ ನಂತಹ ವಿಶೇಷ ರೈಲ್ವೆ ಸೇವೆಗಳಿಂದ ಬರುವ ಬಹುಕೋಟಿ ಆದಾಯ ಸಾಮಾನ್ಯ ರೈಲ್ವೆ ಸೇವೆಯಿಂದ ಬರಲಿಕ್ಕಿಲ್ಲ ಎಂಬುದೂ ಕೂಡ ಪ್ರಯಾಣಿಕ ರೈಲ್ವೆ ಸೇವೆ ಸ್ಥಗಿತಗೊಳಿಸಲು ಒಂದು ಕಾರಣವಾಗಿರಬಹುದು. ಅಥವಾ ಪ್ರಮುಖ ಸೌಲಭ್ಯಗಳ ಕೊರತೆಯೂ ಕಾರಣವಾಗಿರಬಹುದು.

    ದೇಶದಲ್ಲಿ ಸೋಂಕಿನ ಸರಪಳಿಯನ್ನು ಮುರಿಯಲು ರಾಷ್ಟ್ರವ್ಯಾಪಿ ಲಾಕ್​​ಡೌನ್ ಘೋಷಣೆಯಾದ ನಂತರ ಮಾರ್ಚ್​​​ನಲ್ಲಿ ಎಲ್ಲ ಪ್ರಯಾಣಿಕ ರೈಲು ಸೇವೆ ಸ್ಥಗಿತಗೊಳಿಸಲಾಗಿತ್ತು. ಆದರೆ ಸಚಿವಾಲಯ ಮೇ 12 ರಂದು 15 ಅಂತರರಾಜ್ಯ ಪ್ರಯಾಣಿಕ ರೈಲು ಸೇವೆಗಳನ್ನು ಪ್ರಾರಂಭಿಸಿತು. ರಾಷ್ಟ್ರ ರಾಜಧಾನಿಯಿಂದ ಪ್ರಾರಂಭಿಸಿ ದೇಶದ ವಿವಿಧ ನಗರಗಳನ್ನು ಸಂಪರ್ಕಿಸುವ 15 ರೈಲುಗಳು ಮೇ 12 ರಿಂದ ಸೇವೆ ಪ್ರಾರಂಭಿಸಿದವು.
    ಮೇ 13 ರಿಂದ ಜಾರಿಗೆ ಬರುವಂತೆ ಟಿಕೆಟ್ ಕಾಯ್ದಿರಿಸುವ ಎಲ್ಲ ಪ್ರಯಾಣಿಕರ ಗಮ್ಯಸ್ಥಾನದ ವಿಳಾಸವನ್ನು ಐಆರ್​ಸಿಟಿಸಿ ತೆಗೆದುಕೊಳ್ಳಲು ಪ್ರಾರಂಭಿಸಿದೆ ಎಂದು ಸಚಿವಾಲಯ ತಿಳಿಸಿದೆ. ಕೊರೊನಾ ವೈರಸ್ ಸೋಂಕು ಪತ್ತೆ ಹಚ್ಚುವುದೇ ಈ ಕ್ರಮದ ಉದ್ದೇಶ ಎನ್ನಬಹುದು. ಇದಕ್ಕಾಗಿ ಆನ್​​ಲೈನ್ ಬುಕ್ಕಿಂಗ್ ರೂಪದಲ್ಲಿ ಹೊಸ ನಿಬಂಧನೆಗಳನ್ನು ಪರಿಚಯಿಸುವುದಾಗಿ ಸಚಿವಾಲಯ ತಿಳಿಸಿದೆ. 

    ತಂದೆಯನ್ನೇ ಬರ್ಬರವಾಗಿ ಹತ್ಯೆಗೈದಿದ್ದ ಮೂವರು ಸಹೋದರಿಯರ ಬೆನ್ನಿಗೆ ನಿಂತ ಕೋರ್ಟ್​, ತನಿಖಾ ಸಮಿತಿ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts