ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ಶಿಕ್ಷಕ ಅಪಘಾತದಲ್ಲಿ ಸಾವು, ಮಗನಿಗೆ ಗಾಯ

teacher died
Published on

ರಾಯಚೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದು ಆರಂಭಗೊಂಡಿದೆ. ಕರೊನಾ ಆತಂಕದಲ್ಲೇ ಪರೀಕ್ಷೆ ಎದುರಾಗಿದ್ದು, ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ಪಾಲಕರು ಹಾಗೂ ಶಿಕ್ಷಕರಿಗೂ ಮತ್ತಷ್ಟು ಒತ್ತಡ ತಂದಂತಾಗಿದೆ. ಇದರಿಂದಾಗಿ ಕೆಲ ಅನಾಹುತಕಾರಿ ಘಟನೆಗಳು ನಡೆದಿವೆ.

ರಾಯಚೂರು ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ಒಬ್ಬ ಶಿಕ್ಷಕ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಮಗ ಗಾಯಗೊಂಡಿದ್ದಾನೆ.  ಪರೀಕ್ಷೆಗೆ ತಂದೆಯ ಜೊತೆ ತೆರಳುತ್ತಿದ್ದ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದೆ.

ರಾಯಚೂರಿನ ದೇವದುರ್ಗದ ಮೀಯಾಪುರ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಬೈಕ್ ಗೆ ಆಕಳು ಅಡ್ಡ ಬಂದಿದ್ದರಿಂದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ನಾಗಿರೆಡ್ಡಿ (57) ಮೃತ ಶಿಕ್ಷಕ , ಮಗ ವಿಶ್ವನಾಥ್ ಗಾಯಗೊಂಡವ. ಪರೀಕ್ಷೆ ಬರೆಯಬೇಕಿದ್ದ ಆತ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಂಕೇಶ್ವರಾಳದ ಶಿಕ್ಷಕ ನಾಗಿರೆಡ್ಡಿಯನ್ನು ಮಸರಕಲ್ ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಮಗನನ್ನು ದೇವದುರ್ಗದ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಬರಲು ಹೋಗುತ್ತಿದ್ದಾಗ ಅಪಘಾತದಲ್ಲಿ ಶಿಕ್ಷಕ ಸಾವಿಗೀಡಾಗಿದ್ದಾರೆ.  ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net