More

    ಕಲ್ಯಾಣ ಕರ್ನಾಟಕದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಿ ; ಜಿಲ್ಲಾ ಖಾಸಗಿ ಶಾಲಾ, ಕಾಲೇಜು ಮಂಡಳಿಗಳ ಒಕ್ಕೂಟ ಮನವಿ

    ರಾಯಚೂರು: ಕಲ್ಯಾಣ ಕರ್ನಾಟಕದ ಅನುದಾನ ರಹಿತ ಶಾಲೆ, ಕಾಲೇಜುಗಳಿಗೆ ವಿಶೇಷ ಅನುದಾನ ನೀಡಲು ಸರ್ಕಾರ ನಿರ್ಧರಿಸುವಂತೆ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಒಕ್ಕೂಟ ಆಗ್ರಹಿಸಿದೆ.

    ಜಿಪಂ ಸಭಾಂಗಣದಲ್ಲಿ ಶನಿವಾರ ಸಂಜೆ ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ಶಿಕ್ಷಣ ಸಚಿವ ಸುರೇಶ ಕುಮಾರ್‌ಗೆ ಒಕ್ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

    ರಾಜ್ಯದ ಇತರ ಪ್ರದೇಶಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರ ಹಿಂದುಳಿದಿದೆ. ಶೈಕ್ಷಣಿಕ ಅಭಿವೃದ್ಧಿಗೆ ಕೈ ಜೋಡಿಸುತ್ತಿರುವ ಖಾಸಗಿ ಸಂಸ್ಥೆಗಳ ಬಗ್ಗೆಯೂ ಕಾಳಜಿ ವಹಿಸಬೇಕಾದ ಅಗತ್ಯವಿದೆ ಎಂದು ಮನವಿ ಮಾಡಿದರು.

    ಶಾಲೆಯ ಸಿಬ್ಬಂದಿಗೆ ವೇತನ ನೀಡುವುದು ಸಂಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಈ ಭಾಗಕ್ಕೆ ಗಮನ ಹರಿಸಿ ವಿಶೇಷ ನೆರವು ನೀಡಲು ಕೋರಿದರು. ಎಚ್.ಕೆ.ಪಾಟೀಲ್ ಸಮಿತಿ ಅನ್ವಯ ಮೂಲ ಸೌಕರ್ಯ, 10-15 ವರ್ಷ ಮೇಲ್ಪಟ್ಟ ವಿದ್ಯಾಸಂಸ್ಥೆಗಳಿಗೆ ಶಾಶ್ವತ ನವೀಕರಣ ನೀಡಬೇಕು, ತಾರತಮ್ಯ ಸರಿಪಡಿಸಲು ಕ್ರಮ ವಹಿಸಬೇಕು, ಕೆಕೆಆರ್‌ಡಿಬಿಯ ಅನುದಾನದಲ್ಲಿ ವಿಶೇಷ ಸಹಾಯಕ್ಕೆ ಸರ್ಕಾರ ನಿರ್ಧರಿಸಬೇಕು, ಪಠ್ಯ ಪುಸ್ತಕಗಳಿಗೆ ಶೇ.10 ಹಣ ಭರಿಸಲಾಗುತ್ತಿದ್ದು, ಪಾಲಕರಿಗೆ ಉಳಿದ ಹಣ ಕಟ್ಟಲು ತೊಂದರೆ ಇದ್ದು ಆಸರೆಗೆ ಧಾವಿಸಿದರೆ ಈ ವರ್ಷ ಶಿಕ್ಷಣದ ಸ್ಥಿತಿ ಸುಧಾರಿಸಬಹುದಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.

    ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಬಸವರಾಜ ಸಿರವಾರ, ಡಿ.ಕೆ.ಮುರಳಿಧರ, ಎಂ.ವೆಂಕಟೇಶ, ಶಫುದ್ಧೀನ್ ಮಾನ್ವಿ, ಬಿ.ವಿ. ರಡ್ಡಿ, ವೈ.ನರೇಂದ್ರನಾಥ ಸಿಂಧನೂರು, ಮಲ್ಲನಗೌಡ, ಆದಯ್ಯ ದಳಪತಿ ಲಿಂಗಸುಗೂರು, ನರಸಪ್ಪ, ಚನ್ನಪ್ಪ ಬೂದನಾಳ ದೇವದುರ್ಗ, ತಿರುಪತಿ, ಚಂದ್ರಶೇಖರ ಬಲ್ಲಟಗಿ, ಪ್ರಕಾಶ, ಮಲ್ಲಿಕಾರ್ಜುನ ಮಸ್ಕಿ, ಕೆ.ವಿ.ರಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts