More

    ಪತ್ರಿಕೆ ಓದುವ ಮನಸ್ಥಿತಿ ಎಲ್ಲರೂ ಬೆಳೆಸಿಕೊಳ್ಳುವಂತೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಸಲಹೆ

    ರಾಯಚೂರು: ಕನ್ನಡ ಪತ್ರಿಕೆಗಳನ್ನು ಕೊಂಡು ಓದುವ ಮನಸ್ಥಿತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕಾಗಿದೆ. ಬೆಳಕಿನ ಕಿರಣಗಳ ಜತೆಗೆ ಪತ್ರಿಕೆ ಎಂಬ ಜ್ಞಾನದ ಕಿರಣಗಳನ್ನು ಮನೆಗೆ ಬರಮಾಡಿಕೊಳ್ಳುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಹೇಳಿದರು.

    ನಗರದ ಕರ್ನಾಟಕ ಸಂಘದ ಆವರಣದಲ್ಲಿ ರಾಯಚೂರು ರಿಪೋರ್ಟರ್ಸ್‌ ಗಿಲ್ಡ್‌ನಿಂದ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ಪತ್ರಿಕೆ ಕೊಂಡು ಓದಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಇಂದಿನ ದಿನಮಾನದಲ್ಲಿ ಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು. ಪತ್ರಿಕೆಗಳನ್ನು ಓದುವುದರಿಂದ ಜಗತ್ತಿನ ವಿದ್ಯಮಾನಗಳ ಬಗ್ಗೆ ಅರಿವು ಮೂಡುವುದರ ಜತೆಗೆ ನಮ್ಮ ಜ್ಞಾನ ವೃದ್ಧಿಯಾಗಲಿದೆ. ಅದರಲ್ಲೂ ಗೃಹಣಿಯರು ಪತ್ರಿಕೆಗಳನ್ನು ಓದು ಮೂಲಕ ತಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.

    ಹಿರಿಯ ಪತ್ರಕರ್ತ ಬಸವರಾಜ ಸ್ವಾಮಿ ಮಾತನಾಡಿ, ಪ್ರಸ್ತುತ ಕನ್ನಡ ಪತ್ರಿಕೆಗಳನ್ನು ಕೊಂಡು ಓದುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. 20 ವರ್ಷಗಳ ಹಿಂದೆ ನಗರದಲ್ಲಿ ಕನ್ನಡ ಪತ್ರಿಕೆ ಕೊಂಡು ಓದಿ ಅಭಿಯಾನವನ್ನು ನಡೆಸಲಾಗಿತ್ತು ಎಂದು ಸ್ಮರಿಸಿದರು.

    ಕರ್ನಾಟಕ ಸಂಘದಿಂದ ಪತ್ರಿಕಾ ಭವನದವರೆಗೆ ನಡೆದ ಜಾಥಾದಲ್ಲಿ ಕನ್ನಡ ಪತ್ರಿಕೆಗಳನ್ನು ಕೊಂಡು ಓದುವಂತೆ ಹಾಗೂ ಕನ್ನಡ ಪತ್ರಿಕೆಗಳನ್ನು ಬೆಳೆಸುವಂತೆ ಘೋಷಣೆ ಕೂಗಲಾಯಿತು. ಈ ಸಂದರ್ಭದಲ್ಲಿ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ, ಪ್ರಧಾನ ಕಾರ್ಯದರ್ಶಿ ವಿಜಯ ಜಾಗಟಗಲ್, ಪದಾಧಿಕಾರಿಗಳಾದ ಬಿ.ವೆಂಕಟಸಿಂಗ್, ಕೆ.ಸತ್ಯನಾರಾಯಣ, ಬಸವರಾಜ ನಾಗಡದಿನ್ನಿ, ಜಗನ್ನಾಥ ದೇಸಾಯಿ, ಸಿದ್ದಯ್ಯ ಸ್ವಾಮಿ, ಜಯಕುಮಾರ ದೇಸಾಯಿ, ವಿಶ್ವನಾಥ ಸಾಹುಕಾರ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts