More

    ಶಿಕ್ಷಣದ ಮೂಲಕ ಸಮಾಜಕ್ಕೆ ಕೀರ್ತಿ ತನ್ನಿ

    ರಾಯಚೂರು: ಹಾಲುಮತ ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆದು ಪಾಲಕರು ಹಾಗೂ ಹಾಲುಮತ ಸಮಾಜಕ್ಕೆ ಕೀರ್ತಿ ತರಬೇಕೆಂದು ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.

    ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನಕದಾಸರು ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಾರೆ. ಅಂತಹ ಮಹಾತ್ಮರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉನ್ನತ ಹುದ್ದೆ ಪಡೆದು ಸಮಾಜವನ್ನು ಅಭಿವೃದ್ಧಿಪಡಿಸಬೇಕು ಎಂದರು.

    ಮಾನ್ವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಶಿವರಾಜ ಕೊಪ್ಪರ ಉಪನ್ಯಾಸ ನೀಡಿ, ಜ್ಞಾನ ಮತ್ತು ಭಕ್ತಿ ಕೇವಲ ಕೆಲವೇ ವರ್ಗಗಳಿಗೆ ಸೀಮಿತವಾಗಿದ್ದ ಸಂದರ್ಭದಲ್ಲಿ ಅವುಗಳನ್ನು ಪಡೆದುಕೊಂಡು ಕನಕದಾಸರು ಶ್ರೇಷ್ಠರಾದರು ಎಂದು ಹೇಳಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಕವಿತಾಳದ ವಿವಿಧೆಡೆ ಕಾರ್ಯಕ್ರಮ
    ಕವಿತಾಳ: ಪಟ್ಟಣದ ಕನಕ ವೃತ್ತ ಹಾಗೂ ಪಪಂ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಹಾಲುಮತ ಸಮುದಾಯದ ಗುರುಗಳಾದ ಜಡೆ ಕರೆಯಪ್ಪ ತಾತ, ಮುಖ್ಯಾಧಿಕಾರಿ ಜಗದೀಶ ಭಂಡಾರಿ, ಸದಸ್ಯರಾದ ರಮೇಶ ನಗನೂರ, ರಾಘವೇಂದ್ರ ಶೆಟ್ಟಿ, ಲಿಂಗರಾಜ ಕಂದಗಲ್, ಮಲ್ಲಿಕಾರ್ಜುನಗೌಡ, ರುಕ್ಮದ್ದಿನ್, ಯಲ್ಲಪ್ಪ ಮಾಡಗೇರ, ಲಾಳೆಸ ನಾಯಕ, ಪ್ರಮುಖರಾದ ಕಿರಿಲಿಂಗಪ್ಪ, ಶಿವಣ್ಣ ವಕೀಲ ಇತರರಿದ್ದರು.

    ಅಮೀನಗಡದಲ್ಲಿ ಕನಕ ವೃತ್ತಕ್ಕೆ ಪೂಜೆ ಸಲ್ಲಿಸಿದ ನಂತರ ಕನಕದಾಸರ ಭಾವಚಿತ್ರವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಶಿವರಾಜ ಟಿಪಿ, ಶಿವಲಿಂಗಪ್ಪ, ಚಂದಪ್ಪ, ಮಾಳಿಂಗರಾಯ, ಹುಚ್ಚರಡ್ಡಿ ಪೂಜಾರಿ. ಚನ್ನಪ್ಪ, ಕರೆಯಪ್ಪ, ಹುಚ್ಚರಡ್ಡಿ, ಅಮರಮ್ಮ ಪೂಜಾರಿ, ಬಸವಲಿಂಗಮ್ಮ ಉಪಸ್ಥಿತರಿದ್ದರು.

    ಮಾರ್ಗದರ್ಶಕವಾಗಿವೆ ತತ್ವಾದರ್ಶಗಳು
    ಸಿರವಾರ: ಜಕ್ಕಲದಿನ್ನಿ ಗ್ರಾಮದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಬಿಜೆಪಿ ಮಾನ್ವಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ ಮಾತನಾಡಿ, ಕನಕದಾಸರು ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಂಕು ಡೊಂಕು ತಿದ್ದುವ ಕೆಲಸ ಮಾಡಿದ್ದಾರೆ. ಕನಕದಾಸರ ತತ್ವ, ಆದರ್ಶಗಳು ಇಂದಿಗೆ ಮಾರ್ಗದರ್ಶಕವಾಗಿವೆ ಎಂದು ಹೇಳಿದರು. ಪ್ರಮುಖರಾದ ನಿಂಗಯ್ಯ ಗಡಗಿ, ರಮೇಶ ಕುರಿ, ರಮೇಶ ಗುಡಿಸಲು, ಮುದಿಯಪ್ಪ ಅಗಸೆ, ಗುರುಬಸವ, ಹಂಪಣ್ಣ ಕೋಟಿ ಇತರರಿದ್ದರು.

    ಗೊರೇಬಾಳ ಕ್ಯಾಂಪ್‌ನಲ್ಲಿ ಮೆರವಣಿಗೆ
    ಗೊರೇಬಾಳ ಕ್ಯಾಂಪ್‌ನಲ್ಲಿ ಹಾಲುಮತ ಸಮುದಾಯದವರು ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿದರು. ಕಳಸ, ವಾದ್ಯ ಮೆಳದೊಂದಿಗೆ ಮೆರವಣಿಗೆ ನಡೆಸಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮೇಕೆಗಳನ್ನೂ ಮೆರವಣಿಗೆಯಲ್ಲಿ ಕರೆತರಲಾಗಿತ್ತು. ಪ್ರಮುಖರಾದ ರೇವಯ್ಯ ಶ್ರೇಷ್ಠಿ, ಆದಪ್ಪ ಅಂಗಡಿ, ಯಮನೂರಪ್ಪ ನಾಯಕ, ನಾಗಪ್ಪ ಜವಾಲಿ, ಸಿದ್ದಪ್ಪ ಕುರಿ, ಸಿದ್ರಾಮೇಶ ಕೊಂತನೂರ, ವಿಜಯ ಜವಾಲಿ, ಲಿಂಗಪ್ಪ ಕೊಂತನೂರ, ನಾಗರಬೆಂಚಿ ಬಸನಗೌಡ, ಮಂಜುನಾಥ ಶ್ರೇಷ್ಠಿ, ವಿರುಪಣ್ಣ ಹಾಲಾಪುರ, ಹುಚ್ಚಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts