More

    ಭೂಹೀನ ರೈತರು, ಬಡವರಿಗೆ ಪಟ್ಟಾ ನೀಡಲು ಅಖಿಲ ಭಾರತ ಕಿಸಾನ್ ಸಂಘಟನೆ ಪ್ರತಿಭಟನೆ

    ರಾಯಚೂರು: ತಾಲೂಕಿನ ಯರಗೇರಾದ ಸರ್ಕಾರದ ಪಾರಂಪೋಕ ಭೂಮಿಯಲ್ಲಿ 55 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಭೂಹೀನ ಬಡವರಿಗೆ ಅಕ್ರಮ ಸಕ್ರಮದಡಿ ಪಟ್ಟಾ ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಂಘಟನೆ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

    ತಾಲೂಕಿನಾದ್ಯಂತ ಭೂಹೀನ ಬಡ ರೈತರು ತಲೆಮಾರುಗಳಿಂದ ಕೃಷಿ ಯೋಗ್ಯ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. 35-40 ವಷರ್ಗಳು ಕಳೆದರು ಭೂಸಾಗುವಳಿದಾರರಿಗೆ ಇನ್ನೂ ಪಟ್ಟಾ ನೀಡಿಲ್ಲ. ಕರ್ನಾಟಕ ಭೂ ಕಂದಾಯ ಕಾಯ್ದೆ ಅನ್ವಯ ರಾಯಚೂರು ತಾಲೂಕಿನ ಯರಗೇರಾದ ಸರ್ವೇ ನಂ.319/1ರ 175.35 ಎಕರೆ ಸರ್ಕಾರಿ ಪಾರಂಪೋಕ ಭೂಮಿಯಲ್ಲಿ 1968-77ರಿಂದ ಇಂದಿಗೂ100 ಕ್ಕೂ ಹೆಚ್ಚು ರೈತರು ಸಾಗುವಳಿ ಮಾಡುತ್ತಿದ್ದಾರೆ. ಸರ್ಕಾರದ ನಿಯಮಗಳ ಅನುಸಾರವಾಗಿ ಈಗಾಗಲೇ ಅರ್ಜಿ ನಂ.50, 53 ಹಾಗೂ 56ಅರ್ಜಿ ನಮೂನೆಗಳನ್ನು ಸಲ್ಲಿಸಿದ್ದರೂ ವಿಲೇವಾರಿ ಮಾಡಿಲ್ಲ ಎಂದು ದೂರಿದರು.

    ಕೂಡಲೇ ಯರಗೇರಾದ ಸರ್ವೇ ನಂ.319/1ರಲ್ಲಿ 100 ಕ್ಕೂ ಹೆಚ್ಚು ಹಾಗೂ ಸರ್ವೇ ನಂ.233/1 ರಲ್ಲಿ 200 ಕ್ಕೂ ಹೆಚ್ಚು ರೈತರಿಗೆ ಫಾರಂ ನಂ.50 53 ಹಾಗೂ 56ರ ಅರ್ಜಿ ನಮೂನೆಗಳ ಅನ್ವಯ, ಅಕ್ರಮ ಸಕ್ರಮದ ಅಡಿ ಭೂ ಮಂಜೂರಾತಿ ನೀಡಿ ಪಟ್ಟಾ ನೀಡಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts