More

    ನೇತ್ರದಾನ ಮತ್ತೊಬ್ಬರ ಜೀವನಕ್ಕೆ ಬೆಳಕು

    ರಾಯಚೂರು: ಮರಣದ ನಂತರವೂ ಇನ್ನೊಬ್ಬರ ಜೀವನಕ್ಕೆ ಬೇಳಕಾಗುವುದೇ ನೇತ್ರದಾನ. ಬದುಕಿರುವಾಗಲೇ ನೇತ್ರದಾನ ಮಾಡಲು ಜನರಲ್ಲಿ ಜಾಗೃತಿಯ ಅವಶ್ಯಕತೆ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ಹೇಳಿದರು.

    ಜಿಲ್ಲಾ ತರಬೇತಿ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ 37ನೇ ನೇತ್ರದಾನ ಪಾಕ್ಷಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜಗತ್ತಿನಲ್ಲಿ ಹಲವಾರು ಕಾರಣದಿಂದ ಅಂಧತ್ವ ಹೊಂದಿದವರ ಪ್ರಮಾಣ ಹೆಚ್ಚುತ್ತಿದೆ. ಈ ಪ್ರಮಾಣವನ್ನು ನಿವಾರಣೆಗೆ ನೇತ್ರದಾನಿಗಳ ಸಂಖ್ಯೆ ಹೆಚ್ಚಿಸುವುದು ಅತ್ಯಗತ್ಯ ಎಂದರು.

    ಮರಣದ ನಂತರ ನಮ್ಮ ಕಣ್ಣುಗಳನ್ನು ಇನ್ನೊಬ್ಬರಿಗೆ ದಾನ ನೀಡುವ ಮೂಲಕ ಅಂಧರು ಮತ್ತೊಮ್ಮೆ ಜಗತನ್ನು ನೋಡುವಂತೆ ಮಾಡಬಹುದು. ನೇತ್ರದಾನ ಕುರಿತು ಜನರಲ್ಲಿ ಇರುವ ತಪ್ಪು ಕಲ್ಪನೆ ಹೋಗಲಾಡಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳು ಕಾರ್ಯಾನಿರ್ವಹಿಸುತ್ತಿದ್ದು, ಜಾಗೃತಿ ಕಾರ್ಯದಿಂದ ಜನರು ಸ್ವಯಂ ಪ್ರೇರಣೆಯಿಂದ ನೇತ್ರದಾನಕ್ಕೆ ಮುಂದಾಗುತ್ತಿರುವುದು ಆಶಾದಾಯಕ ಬೆಳೆವಣಿಗೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts