More

    ರಾಯಚೂರು ಜಿಲ್ಲೆಯ ಪಡಿತರದಾರರಿಗೆ ತೊಗರಿ ಬೇಳೆ ವಿತರಿಸಿ : ಹೈ.ಕ. ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಆಗ್ರಹ

    ರಾಯಚೂರು: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ, ಒಂದು ಪಡಿತರ ಚೀಟಿಗೆ ಒಂದು ಕೆಜಿ ತೊಗರಿ ಬೇಳೆ ನೀಡುವುದಾಗಿ ಹೇಳಿದ್ದರೂ ಜಿಲ್ಲೆಯ ಪಡಿತರ ಚೀಟಿದಾರರಿಗೆ ನೀಡಿಲ್ಲ ಎಂದು ಹೈ.ಕ. ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ದೂರಿದರು.

    ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ತೊಗರಿ ಬೇಳೆ ಸರಬರಾಜಿನಲ್ಲಿ ಸಮಸ್ಯೆಯಾಗಿದೆ ಎಂದು ಹೇಳಲಾಗುತ್ತಿದ್ದು, ಬೇರೆ ವ್ಯವಸ್ಥೆ ಮಾಡದೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದರು.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್, ಮೇ ತಿಂಗಳ ಪಡಿತರವನ್ನು ಒಂದೇ ಸಲಕ್ಕೆ ವಿತರಣೆ ಮಾಡಲು ಸೂಚಿಸಿದಂತೆ ಕಳೆದ ತಿಂಗಳು ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ, ಪಡಿತರ ಚೀಟಿಗೆ 4 ಕೆಜಿ ಗೋದಿ ವಿತರಿಸಲಾಗಿದೆ. ಆದರೆ ತೊಗರಿ ವಿತರಣೆ ಮಾಡದಿದ್ದರಿಂದ ಬಡ ಜನರಿಗೆ ಸಮಸ್ಯೆಯಾಗಿದೆ.

    ಮೇ ತಿಂಗಳ ಎರಡು ವಾರ ಕಳೆದರೂ ಈವರಿಗೆ ಪಡಿತರ ವಿತರಿಸಿಲ್ಲ. ಇದರಿಂದ ಜಿಲ್ಲೆಯ 19 ಲಕ್ಷ ಪಡಿತರದಾರರು ಸಮಸ್ಯೆ ಎದುರಿಸುವಂತಾಗಿದ್ದು, ಶೀಘ್ರ ಪಡಿತರ ವಿತರಣೆಗೆ ಕ್ರಮಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಡಾ.ರಜಾಕ್ ಉಸ್ತಾದ್ ಎಚ್ಚರಿಸಿದರು. ಸಮಿತಿ ಪದಾಧಿಕಾರಿಗಳಾದ ಶಿವಕುಮಾರ ಯಾದವ್, ಸೈಯದ್ ಖೈಸರ್ ಹುಸೇನ್, ಮಹ್ಮದ್ ರಫಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts