More

    ದುಶ್ಚಟದಿಂದ ದೂರವಿಡಲು ಭೀಮ ಮಾಲಾ

    ರಾಯಚೂರು: ಯುವಕರು ದುಶ್ಚಟಗಳಿಂದ ದೂರವಿರುವ ಪ್ರತಿಜ್ಞೆಯೊಂದಿಗೆ ಪ್ರಥಮ ಬಾರಿಗೆ 40 ದಿನಗಳ ಭೀಮ ಮಾಲಾ ಕಾರ್ಯಕ್ರಮ ಆರಂಭಿಸಲಾಗುತ್ತಿದೆ ಎಂದು ಬಹುಜನ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಶರಣಪ್ಪ ಬಲ್ಲಟಗಿ ತಿಳಿಸಿದರು.

    ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, 40 ದಿನಗಳ ನಂತರ ಮಸ್ಕಿಯ ಅಶೋಕ ಶಿಲಾಶಾನದ ಬಳಿ ಭೀಮ ಮಾಲಾ ಸಮಾರೋಪ ಸಮಾರಂಭ ನಡೆಸಲಾಗುವುದು ಎಂದರು. ಪ್ರತಿದಿನ ಅಂಬೇಡ್ಕರ್ ಭಾಷಣ ಕೇಳುವುದು, ತಿಳಿದುಕೊಳ್ಳುವುದನ್ನು ರೂಢಿಸಿಕೊಂಡು ದುಶ್ಚಟಗಳಿಂದ ದೂರು ಇರುವಂತೆ ಅರಿವು ಮೂಡಿಸಲಾಗುವುದು. ಸಾಂಸ್ಕೃತಿಕ ಬದಲಾವಣೆ ಉದ್ದೇಶದಿಂದ ಭೀಮ ಮಾಲಾದ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

    ಸಮಿತಿ ಸದಸ್ಯ ಎಂ.ಆರ್.ಭೇರಿ ಮಾತನಾಡಿ, ಭೀಮ ಮಾಲಾ ಎಂಬುವುದು ಜಾಗೃತಿ ಮೂಡಿಸುವ ಹಾಗೂ ಜೀವನ ಶೈಲಿ ಬದಲಾವಣೆಯ ಉದ್ದೇಶ ಹೊಂದಲಾಗಿದೆ. ಯಾವುದೇ ಮೌಢ್ಯ ಆಚರಣೆಯಿಲ್ಲದೆ ಬುದ್ಧ, ಅಂಬೇಡ್ಕರ ಕುರಿತು ಓದುವುದು, ತಿಳಿಸುವ ಕೆಲಸ ನಡೆಸಲಾಗುವುದು. ವ್ಯಕ್ತಿತ್ವ ವಿಕಸನದೊಂದಿಗೆ ಸಾಂಸ್ಕೃತಿಕ ಬದಲಾವಣೆಗೆ ಭೀಮ ಮಾಲಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರು ಸ್ವಯಂ ಪ್ರೇರಿತವಾಗಿ ಮಾಲೆ ಧರಿಸಲು ಮುಂದೆ ಬರಲಿದ್ದಾರೆ ಎಂದು ತಿಳಿಸಿದರು. ಸಮಿತಿ ಪದಾಧಿಕಾರಿಗಳಾದ ಈರಣ್ಣ ಕೊಸಗಿ, ಯಮನಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts