More

  ಹಾಸ್ಟೆಲ್ ಸೌಲಭ್ಯ ರದ್ದತಿಗೆ ವಿರೋಧ

  ರಾಯಚೂರು: ಮ್ಯಾನೇಜ್‌ಮೆಂಟ್ ಕೋಟಾದಡಿ ಬಿಇಡಿಗೆ ಪ್ರವೇಶ ಪಡೆದವರಿಗೆ ಹಾಸ್ಟೆಲ್ ಸೌಲಭ್ಯ ರದ್ದುಪಡಿಸಿರುವುದನ್ನು ವಿರೋಧಿಸಿ ನಗರದಲ್ಲಿ ಸೋಮವಾರ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

  ಅಂಬೇಡ್ಕರ್ ವೃತ್ತದಿಂದ ಡಿಸಿ ಕಚೇರಿಗೆ ಮೆರವಣಿಗೆ ನಡೆಸಿದ ಹೋರಾಟಗಾರರು ಡಿಸಿಗೆ ಮನವಿ ಸಲ್ಲಿಸಿದರು. ಬಿಇಡಿ ಮ್ಯಾನೇಜ್‌ಮೆಂಟ್ ಕೋಟಾದಡಿ ಪ್ರವೇಶ ಪಡೆದವರಿಗೆ ಸೌಲಭ್ಯಗಳ ಕಡಿತದಿಂದ ವ್ಯಾಸಂಗಕ್ಕೆ ಅಡಚಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  ಇದನ್ನೂ ಓದಿ: ಹಾಸ್ಟೆಲ್ ಗಳಿಗೆ ಕಾವಲುಗಾರರ ನೇಮಿಸಿ

  ಸರ್ಕಾರ ಕೂಡಲೇ ಈ ಕ್ರಮ ಕೈಬಿಡಬೇಕು. ಈ ಆದೇಶದಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದ್ದು, ಓದು ನಿಲ್ಲಸಬೇಕಾದಂಥ ಸ್ಥಿತಿಯಿದೆ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

  ನಗರ ಸಂಘಟನಾ ಕಾರ್ಯದರ್ಶಿ ಪಾಂಡು ಸರೋಜ, ಭೀಮೇಶ್ ಸಾಗರ್, ಶಾಂತಾಕುಮಾರಿ, ಭರಮರೆಡ್ಡಿ, ಅನ್ನಪೂರ್ಣ, ಮುತ್ತಮ್ಮ, ಶ್ರೀದೇವಿ,ರೇಣುಕಾ, ಗಿರಿಜಾ ಸೇರಿ ಅನೇಕ ವಿದ್ಯಾರ್ಥಿಗಳು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts