More

    ರಾಯಬಾಗ ಪಟ್ಟಣವೂ ಸಂಪೂರ್ಣ ಲಾಕ್!

    ರಾಯಬಾಗ: ಲಾಕ್‌ಡೌನ್ ಘೋಷಿಸಿ ತಿಂಗಳು ಕಳೆದಿದ್ದು, ರಾಯಬಾಗ ತಾಲೂಕಿನಲ್ಲಿ ಸೋಂಕಿತರ ಪ್ರಕರಣ ಹೆಚ್ಚಾಗಿದ್ದರಿಂದ ಮತ್ತಷ್ಟು ಬಿಗಿಗೊಳಿಸಲಾಗಿದೆ. ಇದರಿಂದ ಜನರು ಅಗತ್ಯ ವಸ್ತುಗಳು ಸಿಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಸಂಪೂರ್ಣ ಪಟ್ಟಣವೇ ಸ್ತಬ್ಧಗೊಂಡಿದ್ದು, ದಿನಸಿ ವಸ್ತುಗಳಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಕ್ವಾರಂಟೈನ್ ತಂದಿಟ್ಟ ಸಮಸ್ಯೆ: ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿದ್ದಂತೆ ರಾಯಬಾಗ ಪಟ್ಟಣ ಸೇರಿ ತಾಲೂಕಿನಲ್ಲಿ ಏಕಾಏಕಿ ಲಾಕ್‌ಡೌನ್ ಮತ್ತಷ್ಟು ಬಿಗಿಗೊಳಿಸಲಾಗಿದೆ. ದ್ವಿತೀಯ ಸಂಪರ್ಕ ಹೊಂದಿದವರನ್ನು ಪಟ್ಟಣದ ಲಾಡ್ಜ್‌ಗಳಲ್ಲಿ ಕ್ವಾರಂಟೈನ್‌ನಲ್ಲಿ ಇಟ್ಟಿರುವುದರಿಂದ 15 ದಿನಗಳಿಂದ ಪಟ್ಟಣದಲ್ಲಿ ದಿನಸಿ ಮಾರಾಟಕ್ಕೆ ಅವಕಾಶ ನಿರಾಕರಿಸಿದ್ದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ.

    ತರಕಾರಿ ಸಿಕ್ಕರೂ ದಿನಸಿ ಇಲ್ಲ: ಎಲ್ಲ ವಾರ್ಡ್‌ಗಳಲ್ಲಿ ಕಾಲ್ನಡಿಗೆ, ಸೈಕಲ್, ಬೈಕ್ ಮೇಲೆ ತರಕಾರಿ ಮಾರಾಟ ಮಾಡುತ್ತಿರುವುದರಿಂದ ತರಕಾರಿ ದೊರೆಯುತ್ತಿದೆ. ಆದರೆ ದಿನಸಿ ಅಂಗಡಿಗಳು ಸಂಪೂರ್ಣ ಮುಚ್ಚಿದ್ದರಿಂದ ಬಡವರಿಗೆ ಸಾಮಗ್ರಿ ಸಿಗುತ್ತಿಲ್ಲ. ಅಗತ್ಯ ವಸ್ತುಗಳನ್ನು ಮನೆ ಮನೆಗಳಿಗೆ ತಲುಪಿಸುವ ಕೆಲಸವನ್ನು ತಾಲೂಕಾಡಳಿತ ಮತ್ತು ಪಟ್ಟಣ ಪಂಚಾಯಿತಿ ಮಾಡುತ್ತಿಲ್ಲ.

    ಕ್ರಮ ಕೈಗೊಳ್ಳಲಿ: ಲಾಕ್‌ಡೌನ್ ಮತ್ತು ಸಿಲ್‌ಡೌನ್ ಪ್ರದೇಶಗಳಲ್ಲಿನ ಜನರ ಮನೆ ಬಾಗಿಲಿಗೆ ಎಲ್ಲ ಅಗತ್ಯ ವಸ್ತುಗಳನ್ನು ತಲುಪಿಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ತರಕಾರಿ ಮತ್ತು ದಿನಸಿ ಸಾಮಗ್ರಿಗಳನ್ನು ಮನೆ ಮನೆಗಳಿಗೆ ತಲುಪುತ್ತಿಲ್ಲ. ಕಾರ್ಮಿಕರ ಬಳಿ ಇದ್ದ ಅಲ್ಪಸ್ವಲ್ಪ ಹಣ ಕೂಡ ಖರ್ಚಾಗಿ ಅನ್ನಕ್ಕಾಗಿ ಅಂಗಲಾಚುವ ಪರಿಸ್ಥಿತಿ ಬಂದೊದಗಿದೆ. ಅಂತಹವರಿಗೆ ಸರ್ಕಾರ ಮತ್ತು ದಾನಿಗಳು ಉಚಿತವಾಗಿ ಜೀವನಾವಶ್ಯಕ ವಸ್ತುಗಳನ್ನು ಮನೆಗಳಿಗೆ ತಲುಪಿಸುಲು ಕ್ರಮ ಕೈಗೊಳ್ಳಬೇಕು. ಸಾಮಾನ್ಯ ಜನರಿಗೆ ಅಗತ್ಯ ದಿನಸಿ ಸಾಮಗ್ರಿಗಳು ದೊರಕುವಂತೆ ತಾಲೂಕು ಆಡಳಿತ ಸೂಕ್ತ ವ್ಯವಸ್ಥೆ ಮಾಡಲಿ ಎಂಬುದು ರಾಯಬಾಗ ಪಟ್ಟಣದ ನಾಗರಿಕರ ಒತ್ತಾಯವಾಗಿದೆ.

    ರಾಯಬಾಗ ಪಟ್ಟಣದಲ್ಲಿ ದಿನಸಿ ಅಂಗಡಿಗಳನ್ನು ತೆರೆಯುವ ಮತ್ತು ಮನೆ ಮನೆಗಳಿಗೆ ದಿನಸಿ ಸಾಮಗ್ರಿ ತಲುಪಿಸುವ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು. ಜನರಿಗೆ ಅನುಕೂಲ ಮಾಡಲಾಗುವುದು.
    | ಚಂದ್ರಕಾಂತ ಭಜಂತ್ರಿ ತಹಸೀಲ್ದಾರ್, ರಾಯಬಾಗ

    | ಸುಧೀರ ಎಂ. ಕಳ್ಳೆ ರಾಯಬಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts