More

    ರಾಹುಲ್-ಡಿ ಕಾಕ್ ಶತಕದ ಜೊತೆಯಾಟ: ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್‌ಗಳ ಭರ್ಜರಿ ಜಯ

    ಲಖನೌ: ಕೆಎಲ್ ರಾಹುಲ್ (82 ರನ್​, 53 ಎಸೆತ, 9 ಫೋರ್, 3 ಸಿಕ್ಸರ್​ ) ಮತ್ತು ಕ್ವಿಂಟನ್ ಡಿ ಕಾಕ್ (54 ರನ್​, 43 ಎಸೆತ, 5 ಫೋರ್​, 1ಸಿಕ್ಸರ್​) ಜೋಡಿಯ ಅರ್ಧ ಶತಕದ ಜೊತೆಯಾಟದ ನೆರವಿನಿಂದ ಲಕ್ನೊ ಸೂಪರ್ ಜೈಂಟ್ಸ್​ ತಂಡ ಐಪಿಎಲ್​ನ 2024ನೇ ಆವೃತ್ತಿಯ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್​ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

    ಇದನ್ನೂ ಓದಿ: ನೈಜೀರಿಯಾ ಪ್ರಜೆಗಳಿಂದ ರಕ್ತ ಬರುವಂತೆ ಪೊಲೀಸರ ಮೇಲೆ ಹಲ್ಲೆ: 8 ಆರೋಪಿಗಳು ಬಂಧನ

    ಲಕ್ನೊ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕನೇ ಗೆಲುವಾಗಿದೆ. ಅತ್ತ ಸಿಎಸ್​ಕೆ ತಂಡ ಆಡಿರುವ ಏಳರಲ್ಲಿ ಮೂರನೇ ಸೋಲು ಅನುಭವಿಸಿದೆ.

    ರಾಹುಲ್-ಡಿ ಕಾಕ್ ಶತಕದ ಜೊತೆಯಾಟ: ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್‌ಗಳ ಭರ್ಜರಿ ಜಯ

    ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್​ಗೆ ಇಳಿದ ಸಿಎಸ್​ಕೆ, 90 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಆಗ ಜತೆಯಾದ ರವೀಂದ್ರ ಜಡೇಜಾ-ಮೊಯಿನ್ ಅಲಿ (30) ಜತೆಯಾಟ ಹಾಗೂ ಕೊನೆಯಲ್ಲಿ ಎಂಎಸ್ ಧೋನಿ (28* ರನ್, 9 ಎಸೆತ, 3 ಬೌಂಡರಿ, 2 ಸಿಕ್ಸರ್) ಚಿನಕುರುಳಿ ಆಟದ ಬಲದಿಂದ 6 ವಿಕೆಟ್​ಗೆ 176 ರನ್​ಗಳ ಪೈಪೋಟಿಯುತ ಮೊತ್ತ ಕಲೆಹಾಕಿತು.

    ರಾಹುಲ್-ಡಿ ಕಾಕ್ ಶತಕದ ಜೊತೆಯಾಟ: ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್‌ಗಳ ಭರ್ಜರಿ ಜಯ

    ಈ ಗುರಿಯನ್ನು ಬೆನ್ನಟ್ಟಿದ ಲಕ್ನೋ ತಂಡ, 19 ಓವರ್‌ ಗಳಲ್ಲಿ 180 ರನ್‌ ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಪವರ್‌ಪ್ಲೇ ಅಂತ್ಯಕ್ಕೆ ಲಕ್ನೋ ವಿಕೆಟ್ ನಷ್ಟವಿಲ್ಲದೆ 54 ರನ್ ದಾಖಲಿಸಿತು.

    ಸಿಎಸ್‌ಕೆ ಪರ ಜಡೇಜಾ 40 ಎಸೆತಗಳಲ್ಲಿ ಐದು ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 57 ರನ್ ಹಾಗೂ ಧೋನಿ ಒಂಬತ್ತು ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 28 ರನ್ ಗಳಿಸಿದರು. ಲಕ್ನೋ ಪರ ಕೃನಾಲ್ ಪಾಂಡ್ಯ ಎರಡು ವಿಕೆಟ್ ಪಡೆದರು.
    ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ ಆರಂಭಿಕರಿಬ್ಬರ ಶತಕದ ಜೊತೆಯಾಟ ಹಾಗೂ ತಲಾ ಅರ್ಧಶತಕದ ನೆರವಿನಿಂದ ಇನ್ನು 6 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು.

    ಮತ್ತೆ ಅಬ್ಬರಿಸಿದ ಧೋನಿ: ಮೊಯಿನ್ ನಿರ್ಗಮನದ ಬಳಿಕ 42 ವರ್ಷದ ಧೋನಿ ಸಿಎಸ್​ಕೆ ತಂಡದ ಪೈಪೋಟಿಯುತ ಮೊತ್ತ ಕಲೆಹಾಕುವಲ್ಲಿ ನೆರವಾದರು.ಜಡೇಜಾ ಜತೆಯಾಗಿ 6ನೇ ವಿಕೆಟ್​ಗೆ 13 ಎಸೆತಗಳಲ್ಲಿ 35 ರನ್ ಕಸಿದ ಧೋನಿ, ಇದರಲ್ಲಿ ಏಕಾಂಗಿಯಾಗಿ 28 ರನ್ ಚಚ್ಚಿದರು. ಧೋನಿ ತಾನೆದುರಿಸಿದ 9 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಅಂತಿಮ ಐದು ಓವರ್​ನಲ್ಲಿ ಲಖನೌ ಬೌಲರ್​ಗಳಿಗೆ ದಿಟ್ಟ ತಿರುಗೇಟು ನೀಡಿದ ಸಿಎಸ್​ಕೆ 71 ರನ್ ಕಸಿಯಿತು.

    ಹುಬ್ಬಳ್ಳಿಯ ನೇಹಾ ಹತ್ಯೆ ಕೇಸ್​: ಆರೋಪಿ ಫಯಾಜ್ ತಲೆ ಕಡಿದವರಿಗೆ 10 ಲಕ್ಷ ರೂ. ಬಹುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts