More

    ಅದು ಇವಿಎಂ ಆಗಿರಲಿ ಅಥವಾ ಎಂವಿಎಂ ಆಗಿರಲಿ.. ಗೆಲುವು ಘಟಬಂಧನ್​ಗೇ; ರಾಹುಲ್ ಗಾಂಧಿ

    ಬಿಹಾರ: ಬಿಜೆಪಿ ಗೆಲುವು ಸಾಧಿಸಿದಾಗೆಲ್ಲ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್​ (ಇವಿಎಂ) ಮೇಲೆ ಆರೋಪ ಹೊರಿಸುವ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳ ಚಾಳಿ ಇದೀಗ ಮುಂದುವರಿದಿದೆ. ಈಗ ಚುನಾವಣೆ ಹಂತದಲ್ಲೇ ಅಂಥದ್ದೊಂದು ಪ್ರಯತ್ನ ನಡೆದಿದೆ.

    ಈ ಸಲ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅಂಥ ಆರೋಪ ಮಾಡಿದ್ದು, ಇವಿಎಂಗೆ ಬೇರೆಯದೇ ವ್ಯಾಖ್ಯಾನ ಮಾಡಿದ್ದಾರೆ. ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್​ಅನ್ನು ಮೋದಿ ವೋಟಿಂಗ್ ಮಷಿನ್​(ಎಂವಿಎಂ) ಎಂದು ರಾಹುಲ್​ ಗಾಂಧಿ ಕರೆದಿದ್ದಾರೆ.

    ಬಿಹಾರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ರಾಹುಲ್, ಇವಿಎಂ ಇವಿಎಂ ಆಗಿಲ್ಲ, ಅದೀಗ ಎಂವಿಎಂ. ಆದರೆ ಈ ಸಲ ಬಿಹಾರದಲ್ಲಿ ಯುವಜನತೆ ಸಿಟ್ಟಿಗೆದ್ದಿದ್ದು, ಇವಿಎಂ-ಎಂವಿಎಂ ಯಾವುದೇ ಇದ್ದರೂ ಗೆಲ್ಲುವುದು ಘಟಬಂಧನ್ (ಕಾಂಗ್ರೆಸ್​, ಆರ್​ಜೆಡಿ ಮತ್ತು ಎಡಪಕ್ಷಗಳ ಮೈತ್ರಿ)​ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts