More

    ವಿರಾಟ್ ಕೊಹ್ಲಿ ಬಳಿ ಅಜಿಂಕ್ಯ ರಹಾನೆ ಕ್ಷಮೆಯಾಚಿಸಿದ್ದೇಕೆ..?

    ಮೆಲ್ಬೋರ್ನ್: ಅಡಿಲೇಡ್‌ನಲ್ಲಿ ನಡೆದ ಅಹರ್ನಿಶಿ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರನ್ನು ರನೌಟ್ ಮಾಡಿಸಿದ್ದಕ್ಕೆ ದಿನದಾಟದ ಬಳಿಕ ಕ್ಷಮೆಯಾಚಿಸಿದ್ದಾಗಿ ಭಾರತ ತಂಡದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಹೇಳಿಕೊಂಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಕೊಹ್ಲಿ 74 ರನ್ ಗಳಿಸಿದ್ದಾಗ ರಹಾನೆ ಮಾಡಿದ ಸಂವಹನ ಕೊರತೆಯಿಂದ ರನೌಟ್ ಆಗಿದ್ದರು. ಈ ವೇಳೆ ಸಿಟ್ಟಿನೊಂದಿಗೆ ಕೊಹ್ಲಿ ಪೆವಿಲಿಯನ್‌ಗೆ ವಾಪಸಾಗಿದ್ದರು. ‘ದಿನದಾಟ ಕೊನೆಯಲ್ಲಿ ಕೊಹ್ಲಿ ಬಳಿ ತೆರಳಿ ಕ್ಷಮೆ ಕೇಳಿದೆ. ಕೊಹ್ಲಿ ಕೂಡ ಇದಕ್ಕೆ ಸಮ್ಮತಿಸಿದರು’ ಎಂದು ರಹಾನೆ ಹೇಳಿದ್ದಾರೆ.

    ಇದನ್ನೂ ಓದಿ:ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲೂ ಕನ್ನಡಿಗ ಕೆಎಲ್ ರಾಹುಲ್‌ಗೆ ಸ್ಥಾನವಿಲ್ಲ; ಅಭಿಮಾನಿಗಳ ಆಕ್ರೋಶ

    ನಾನು ಹಾಗೂ ಕೊಹ್ಲಿ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದೆವು. ಕ್ರಿಕೆಟ್‌ನಲ್ಲಿ ಇಂಥ ಸನ್ನಿವೇಶ ಸಾಮಾನ್ಯ. ಪರಿಸ್ಥಿತಿ ಅರ್ಥಮಾಡಿಕೊಂಡು ಮುಂದೆ ಸಾಗಬೇಕು’ ಎಂದು ರಹಾನೆ ಹೇಳಿದ್ದಾರೆ. ಕೊಹ್ಲಿ ರನೌಟ್ ಆಗುವವರೆಗೂ ಇನಿಂಗ್ಸ್ ಉತ್ತಮ ರೀತಿಯಲ್ಲೇ ಸಾಗುತ್ತಿತ್ತು. ರನೌಟ್ ಆದ ಕೂಡಲೇ ಇನಿಂಗ್ಸ್ ಸ್ಥಿತಿಯೇ ಬದಲಾಯಿತು ಎಂದಿದ್ದಾರೆ. ಭಾರತ ತಂಡ 8 ವಿಕೆಟ್‌ಗಳಿಂದ ಆಸ್ಟ್ರೇಲಿಯಾಗೆ ಶರಣಾಯಿತು. ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ 0-1 ರಿಂದ ಹಿನ್ನಡೆ ಸಾಧಿಸಿತು.

    ಇದನ್ನೂ ಓದಿ: ಗೌತಮ್ ಗಂಭೀರ್ ಕ್ಯಾಂಟೀನ್‌ನಲ್ಲಿ 1 ರೂಪಾಯಿಗೆ ಊಟ!

    ಅಡಿಲೇಡ್ ನಲ್ಲಿ ನಡೆದ ಅಹರ್ನಿಶಿ ಟೆಸ್ಟ್ ಪಂದ್ಯ ಮೊದಲ ಇನಿಂಗ್ಸ್‌ನಲ್ಲಿ 53 ರನ್ ಮುನ್ನಡೆ ಸಾಧಿಸಿದರೂ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಆಲೌಟ್ ಆಗಿತ್ತು. 88 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ದಾಖಲಿಸಿದ ಅತಿಕಡಿಮೆ ಮೊತ್ತ ಇದಾಗಿದೆ.

    ನಾಲ್ಕೂವರೆ ತಿಂಗಳಿನಿಂದ ಪತ್ನಿಯನ್ನು ನೋಡದೆ ಚಡಪಡಿಸುತ್ತಿದ್ದಾರೆ ಸ್ಟೀವನ್ ಸ್ಮಿತ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts