More

    ಗಜರಾಮನ ಜತೆ ರಾಗಿಣಿ ಡಾನ್ಸ್; ರಾಜವರ್ಧನ್, ತಪಸ್ವಿನಿ ಪೂಣಚ್ಚ ನಟಿಸುತ್ತಿರುವ ಆ್ಯಕ್ಷನ್ ಚಿತ್ರ

    ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್. ಅವರ ಪುತ್ರ ರಾಜವರ್ಧನ್ ಕೂಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ‘ನೂರೊಂದು ನೆನಪು’ ಹಾಗೂ ‘ಬಿಚ್ಚುಗತ್ತಿ’ ಸೇರಿ ಕೆಲವು ಚಿತ್ರಗಳಲ್ಲಿ ನಟಿಸಿರುವ ರಾಜವರ್ಧನ್, ಸದ್ಯ ಸುನೀಲ್ ಕುಮಾರ್ ಚೊಚ್ಚಲ ನಿರ್ದೇಶನದ ‘ಗಜರಾಮ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಇತ್ತೀಚೆಗಷ್ಟೆ ವಿಶೇಷ ಹಾಡಿನ ಚಿತ್ರೀಕರಣ ಮಾಡುವ ಮೂಲಕ ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಇದರಲ್ಲಿ ರಾಜವರ್ಧನ್ ಜತೆ ರಾಗಿಣಿ ಹೆಜ್ಜೆ ಹಾಕಿದ್ದು, ‘ಕನ್ನಡ ಸಿನಿಮಾಗಳು ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಿವೆ. ಇಂತಹ ಹೊಸ ಪ್ರಯತ್ನಗಳು ಹೆಚ್ಚೆಚ್ಚು ಆಗಬೇಕು. ಈ ಚಿತ್ರದಲ್ಲಿ ನನಗಾಗಿ ಮಾಡಿರುವ ವಿಶೇಷ ಹಾಡಿದು. ಧನಂಜಯ ನೃತ್ಯ ಸಂಯೋಜನೆ ಮಾಡಿದ್ದಾರೆ’ ಎಂದು ಹೇಳಿಕೊಂಡರು. ರಾಜವರ್ಧನ್, ‘ಒಂದು ವರ್ಷದ ಪಯಣ ಇಂದು ಮುಕ್ತಾಯದ ಹಂತಕ್ಕೆ ಬಂದಿದೆ. ನನ್ನ ಪಾತ್ರದ ಹೆಸರು ರಾಮ್. ರಾಮ ಮತ್ತು ರಾವಣ ಎರಡೂ ನಾನೇ. ಕಾಲೇಜ್ ಟೈಮ್‌ನಲ್ಲಿ ರಾಗಿಣಿ ಮೇಡಂ ಮೇಲೆ ಕ್ರಶ್ ಇತ್ತು. ಇಂದು ಅವರ ಜತೆ ಹೆಜ್ಜೆ ಹಾಕಿದ್ದು ಕನಸು ಈಡೇರಿದಂತಾಗಿದೆ’ ಎಂದರು. ಇದೊಂದು ಆ್ಯಕ್ಷನ್ ಮಾಸ್ ಎಂಟರ್‌ಟೇನ್ಮೆಂಟ್ ಚಿತ್ರವಾಗಿದ್ದು, ‘ಬೆಂಗಳೂರು, ಮೈಸೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ’ ಎಂದು ನಿರ್ದೇಶಕ ಸುನೀಲ್ ಮಾಹಿತಿ ನೀಡಿದರು.

    ರಾಜವರ್ಧನ್‌ಗೆ ತಪಸ್ವಿನಿ ಜೋಡಿಯಾಗಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಮನೋಮೂರ್ತಿ ಸಂಗೀತ ನೀಡಿದ್ದಾರೆ. ಉಳಿದಂತೆ ಮುಖ್ಯ ತಾರಾಗಣದಲ್ಲಿ ದೀಪಕ್, ಕಬೀರ್ ಸಿಂಗ್, ಸಂತು ಅಭಿನಯಿಸಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ, ಜ್ಞಾನೇಶ್ ಸಂಕಲನ ‘ಗಜರಾಮ’ ಚಿತ್ರಕ್ಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts