More

    ಮೈತ್ರಿ ಗಟ್ಟಿಗೊಳಿಸಲಿದೆಯೇ ವಿಧಾನ ಪರಿಷತ್ ಚುನಾವಣೆ?

    ಬೆಂಗಳೂರು:
    ವಿಧಾನ ಪರಿಷತ್ ಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮೂಲಕ ಎದುರಿಸುತ್ತಿರುವುದು ಮೈತ್ರಿ ರಾಜಕಾರಣದ ಮತ್ತೊಂದು ಹೆಜ್ಜೆಯಾಗಿದೆ.
    ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯ ಮೂಲಕ ಚುನಾವಣೆ ಎದುರಿಸಿದ್ದು, ಅದರ ಲಾಭ ಮತ್ತು ನಷ್ಟ ಏನೆಂದು ಗೊತ್ತಾಗಲು ಲಿತಾಂಶದ ತನಕ ಕಾಯಬೇಕು. ಅದಕ್ಕೂ ಮುನ್ನವೇ ವಿಧಾನ ಪರಿಷತ್ ಚುನಾವಣೆ ೋಷಣೆ ಆಗಿದ್ದರಿಂದ ಇದೇ ಮೈತ್ರಿಯನ್ನು ಎರಡೂ ಪಕ್ಷದ ನಾಯಕರು ವಿಶ್ವಾಸದಲ್ಲಿ ಹೆಜ್ಜೆ ಇಟ್ಟಿದ್ದಾರೆ.
    ಮೈತ್ರಿಯ ವಿಷಯದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರುಗಳು ಹಲವಾರು ಸುತ್ತಿನ ಸಭೆಗಳನ್ನು ನಡೆಸಿದ್ದು, ಪರಸ್ಪರ ಹೊಂದಾಣಿಕೆಯಲ್ಲಿಯೇ ಹೆಜ್ಜೆಯೂರಿದ್ದಾರೆ. ಆದರೆ ಬಿಜೆಪಿಯಲ್ಲಿ ಮೈತ್ರಿ ಬಗ್ಗೆ ಅಪಸ್ವರಗಳು ಮಾತ್ರ ಇನ್ನೂ ನಿಂತಿಲ್ಲ. ಈ ಮೈತ್ರಿಗೆ ಹೈಕಮಾಂಡ್ ಕೂಡ ಅಸ್ತು ಎಂದಿರುವುದು ಹಲವರಿಗೆ ನುಂಗಲಾರದ ತುತ್ತಾಗಿದೆ. ಮೈತ್ರಿ ಜೆಡಿಎಸ್‌ಗೆ ಅನಿವಾರ್ಯವಾಗಿದೆ. ಎರಡೂ ಪಕ್ಷಗಳು ವಿಶ್ವಾಸದಿಂದ ಚುನಾವಣೆಯಲ್ಲಿ ಸೆಣೆಸಿದರೆ ಮಾತ್ರ ಲಿತಅಂಸ ಪಡೆದುಕೊಳ್ಳಲು ಸಾಧ್ಯವಿದೆ. ಇಲ್ಲದೆ ಇದ್ದರೆ, ಆಡಳಿತರೂಢ ಕಾಂಗ್ರೆಸ್ ಅಭ್ಯರ್ಥಿಗಳ ಎದುರು ಎದುಸಿರು ಬಿಡಬೇಕಾದ ಸ್ಥಿತಿ ಇದೆ. ಎಲ್ಲಾ ಕಡೆಯಲ್ಲು ಜಂಟಿ ಸಭೆಗಳನ್ನು ನಡೆಸುತ್ತಿರುವ ನಾಯಕರು ಕಾರ್ಯಕರ್ತರನ್ನು ವಿಶ್ವಾಸವನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಲ ನೀಡುವುದೊ ಕಾಯ್ದು ನೋಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts