More

    ಕಳ್ಳಿದೊಡ್ಡಿ ಮಾರಮ್ಮನ ಹಬ್ಬ ಸಂಪನ್ನ

    ಹನೂರು: ತಾಲೂಕಿನ ಎಂ.ಟಿ.ದೊಡ್ಡಿ ಗ್ರಾಮದಲ್ಲಿ ಕಳ್ಳಿದೊಡ್ಡಿ ಮಾರಮ್ಮನ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ನೂರಾರು ಭಕ್ತರ ಸಮ್ಮುಖದಲ್ಲಿ ಕೊಂಡೋತ್ಸವವು ವಿಜೃಂಭಣೆಯಿಂದ ಜರುಗಿತು.


    ದೇಗುಲವನ್ನು ವಿವಿಧ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತಲ್ಲದೆ ವಿವಿಧ ಪುಷ್ಪ ಹಾಗೂ ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಮಂಗಳವಾರ ಗ್ರಾಮಸ್ಥರ ಸಮ್ಮುಖದಲ್ಲಿ ಸತ್ತಿಗೆ, ಸೂರಪಾನಿ ಹಾಗೂ ಮಂಗಳ ವಾದ್ಯದೊಂದಿಗೆ ದೇವರ ಉತ್ಸವವನ್ನು ನೆರವೇರಿಸುವುದರ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಬುಧವಾರ ದೇಗುಲದ ಮುಂಭಾಗದಲ್ಲಿ ವಿವಿಧ ಕಟ್ಟಿಗೆಗಳಿಂದ ಕೊಂಡವನ್ನು ಸಿದ್ಧಪಡಿಸಲಾಗಿತ್ತು. ಉಪವಾಸವಿದ್ದ ಮೂವರು ಅರ್ಚಕರು ಬೆಳಗ್ಗೆ 6.30ರಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಕೊಂಡವನ್ನು ಹಾಯ್ದರು. ಈ ವೇಳೆ ಭಕ್ತರು ಜಯಘೋಷಗಳನ್ನು ಮೊಳಗಿಸಿದರು. ಮಧ್ಯಾಹ್ನದ ಬಳಿಕ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಮಂಗಳವಾದ್ಯದೊಂದಿಗೆ ಮೆರವಣಿಗೆಯ ಮೂಲಕ ದೇಗುಲಕ್ಕೆ ಆಗಮಿಸಿ ತಂಪುಜ್ಯೋತಿಯನ್ನು ಅರ್ಪಿಸುವುದರ ಮೂಲಕ ಮಾರಮ್ಮನ ಕೃಪೆಗೆ ಪಾತ್ರರಾದರು.

    ರಾಮಾಪುರ, ಮಂಚಾಪುರ, ಎಲ್ಲೇಮಾಳ, ಗುಳ್ಯ, ಕೌದಳ್ಳಿ ಹಾಗೂ ಇನ್ನಿತರ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇಗುಲಕ್ಕೆ ತೆರಳಿ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts