More

    ಚಿರು ಸಾವಿಗೆ ಸಾಂತ್ವನ ಹೇಳಿದ ರಾಘವೇಂದ್ರ ರಾಜ್​ಕುಮಾರ್​ ಕುಟುಂಬಕ್ಕೆ ಕಾನೂನು ಸಂಕಷ್ಟ

    ಬೆಂಗಳೂರು: ಕರೊನಾ ವೈರಸ್​ ಜಾಗತಿಕವಾಗಿ ಮೃತ್ಯಕೂಪವನ್ನು ನಿರ್ಮಿಸಿದ್ದು, ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸರ್​, ಮಾಸ್ಕ್​ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಸೋಂಕು ತಡೆಗಟ್ಟಲು ಲಾಕ್​ಡೌನ್​ ಸಹ ಹೇರಲಾಗಿದ್ದು, ಎಲ್ಲೆಡೆ ನಿಯಮ ಪಾಲನೆಯಾಗುತ್ತಿದೆ. ಆದರೆ, ಅಷ್ಟೇ ಪ್ರಮಾಣದಲ್ಲಿ ಉಲ್ಲಂಘನೆಯಾಗುತ್ತಿದೆ.

    ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ರೇವತಿ​ ಮದುವೆ ನೇರವೇರಿದಾಗಲೂ ಲಾಕ್​ಡೌನ್​ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿತ್ತು. ಇದೀಗ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಪುತ್ರಿ ಐಶ್ವರ್ಯಾ ಶಿವಕುಮಾರ್​ ಹಾಗೂ ಮಾಜಿ ಮುಖ್ಯಮಂತ್ರಿ, ಎಸ್.ಎಂ.ಕೃಷ್ಣ ಮೊಮ್ಮಗ ಹಾಗೂ ಕೆಫೆ ಕಾಫಿಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಮಗ ಅಮಾರ್ಥ್ಯ ಹೆಗ್ಡೆ ಮದುವೆ ನಿಶ್ಚಯ ಕಾರ್ಯಕ್ರಮ ನಿನ್ನೆಯಷ್ಟೇ ಅದ್ಧೂರಿಯಾಗಿ ನೆರವೇರಿದ್ದು, ಇಲ್ಲಿಯೂ ಯಾವುದೇ ಮಾರ್ಗಸೂಚಿಯನ್ನು ಪಾಲಿಸಿಲ್ಲ ಎಂಬ ಆರೋಪಗಳು ಎದುರಾಗಿವೆ. ಇದನ್ನೂ ಓದಿ: ಮಹಿಳೆಯನ್ನು ಹೊತ್ತೊಯ್ದ ಮೊಸಳೆ ಬೇಟೆಯಾಡಿ ಹೊಟ್ಟೆ ಬಗೆದು ನೋಡಿದಾಗ ಕಾದಿತ್ತು ಶಾಕ್​!

    ಕಳೆದವಾರವಷ್ಟೇ ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಸಾವಿಗೀಡಾದರು. ಈ ಹಿನ್ನೆಲೆಯಲ್ಲಿ ಮೃತ ಕುಟುಂಬದವರಿಗೆ ಸಾಂತ್ವನ ಹೇಳಲು ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಕುಟುಂಬ ಸಮೇತ ಬಂದಿದ್ದರು. ಆದರೆ, ಈ ವೇಳೆ, ಸಾಮಾಜಿಕ ಅಂತರ ಪಾಲಿಸಿಲ್ ಹಾಗೂ ಮಾಸ್ಕ್ ಧರಿಸಿಲ್ಲ ಎಂದು ಹೈಕೋರ್ಟ್​ನಲ್ಲಿ ವಕೀಲ ಜಿ.ಆರ್. ಮೋಹನ್​ ಅವರು ದೂರು ದಾಖಲಿಸಿದ್ದಾರೆ. ಇದರ ವಿಚಾರಣೆಯನ್ನು ಹೈಕೋರ್ಟ್​ ನಡೆಸಲಿದೆ.

    ಶಾಸಕ ಪರಮೇಶ್ವರ್ ನಾಯಕ್​ರಿಗೂ ಸಂಕಷ್ಟ
    ಮಾಜಿ ಸಚಿವ ಹಾಗೂ ಶಾಸಕ ಪಿ.ಟಿ.ಪರಮೇಶ್ವರ್ ನಾಯಕ್ ಮಗನ ಮದುವೆ ವಿಚಾರವಾಗಿಯೂ ವಕೀಲ ಜಿ.ಆರ್​. ಮೋಹನ್​ ಹೈಕೋರ್ಟ್​ನಲ್ಲಿ ದೂರು ದಾಖಲಿಸಿದ್ದಾರೆ. ನಿನ್ನೆ ಬಳ್ಳಾರಿಯ ಹಗರಿಬೊಮ್ಮನಹಳ್ಳಿಯಲ್ಲಿ ಶಾಸಕರು ಮಗನ ಮದುವೆ ಆಯೋಜಿಸಿದ್ದರು. ಕರೊನಾ ವೈರಸ್ ಹಿನ್ನಲೆ ಮದುವೆ ಮಾಡಲು ಕೇಂದ್ರ ಸರ್ಕಾರ ಮಾರ್ಗಸೂಚಿ ರೂಪಿಸಿದೆ. ಇದರ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜಿಲ್ಲಾಡಳಿತದಿಂದ ಅನುಮತಿ ಪಡೆಯಬೇಕು. 50 ಕ್ಕೂ ಹೆಚ್ಚು ಮಂದಿ ಸೇರುವ ಹಾಗಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಇದ್ಯಾವುದೂ ಅನುಸರಿಸದೇ ಮದುವೆ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​) ಇದನ್ನೂ ಓದಿ: VIDEO| ಲವ್​ ಮಾಡಿದ್ದಕ್ಕೆ ಹುಡುಗನ ಮೇಲೆ ಪುಡಿ ರೌಡಿಗಳ ಅಟ್ಟಹಾಸ: ಪಾರ್ಕ್​ಗೆ ಕರೆದೊಯ್ದು ಥಳಿತ

    ಮಗಳ ಮದುವೆ ನಿಶ್ಚಯ ಮಾಡಿದ ಡಿ.ಕೆ.ಶಿವಕುಮಾರ್​ಗೆ ಎದುರಾಯ್ತು ಸಂಕಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts