More

    ‘ರಾಜತಂತ್ರ’ ಚಿತ್ರದಲ್ಲಿ ಫೈಟ್​ ಮಾಡಿದ್ದಾರಂತೆ ರಾಘವೇಂದ್ರ ರಾಜಕುಮಾರ್​

    ಬೆಂಗಳೂರು: ಲಾಕ್​ಡೌನ್​ ‘ಸಡಿಲವಾಗುತ್ತಿದ್ದಂತೆ ಪ್ರಾರಂಭವಾಗಿದ್ದ ರಾಘವೇಂದ್ರ ರಾಜಕುಮಾರ್ ಅಭಿನಯದ ‘ರಾಜತಂತ್ರ’ ಇದೀಗ ಮುಗಿದಿರುವುದಷ್ಟೇ ಅಲ್ಲ, ಜನವರಿ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

    ಇದನ್ನೂ ಓದಿ: ದ್ವಾರಕೀಶ್​ ಬಿಡುಗಡೆ ಮಾಡ್ತಾರಂತೆ ಶರಣ್​ ಹೊಸ ಚಿತ್ರದ ಟೈಟಲ್​!

    ಅದಕ್ಕೂ ಮುನ್ನ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ಮುಗಿದಿದ್ದು, ‘ಪವರ್​ಸ್ಟಾರ್​’ ಪುನೀತ್ ರಾಜ್​ಕುಮಾರ್ ಅತಿಥಿಯಾಗಿ ಆಗಮಿಸಿ ಟೀಸರ್ ಬಿಡುಗಡೆ ಮಾಡಿದರು. ಅಷ್ಟೇ ಅಲ್ಲ, ಅಣ್ಣನ ಚಿತ್ರಕ್ಕೆ ‘ಆಲ್ ದಿ ಬೆಸ್ಟ್’ ಹೇಳಿದರು. ‘ಇಡೀ ತಂಡ ತುಂಬ ಶ್ರಮ ಹಾಕಿ ಈ ಸಿನಿಮಾ‌ ಮಾಡಿದೆ. ಕರೊನಾ ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ ಈ ಸಿನಿಮಾ ಶುರುವಾಗಿತ್ತು.‌ ಇದೀಗ ರಿಲೀಸ್​ಗೆ ರೆಡಿಯಾಗಿದೆ’ ಎಂದು ಹೇಳುವುದರ ಜತೆಗೆ ಚಿತ್ರತಂಡಕ್ಕೆ ಶುಭಕೋರಿದರು.

    ಇನ್ನು ಚಿತ್ರದ ನಿರ್ದೇಶಕ ಪಿವಿಆರ್ ಸ್ವಾಮಿ ಮಾತನಾಡಿ, ‘ಈ ಹಿಂದೆ ‘ಅಮ್ಮನ ಮನೆ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದೆ. ಈಗ ಈ ಚಿತ್ರದಲ್ಲಿ ಅವರನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲಿ ನಿವೃತ್ತ ಆರ್ಮಿ ಆಧಿಕಾರಿ ಕ್ಯಾಪ್ಟನ್ ರಾಜಾರಾಮ್ ಆಗಿ ಕಾಣಿಸಿಕೊಂಡಿದ್ದಾರೆ. ಸಮಾಜದೊಳಗಿನ ಲೋಪಗಳನ್ನು ತಮ್ಮದೆ ಶೈಲಿಯಲ್ಲಿ ಸರಿಪಡಿಸುತ್ತಾರೆ. ಅದೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಿ. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ರಾಘಣ್ಣ ಅವರಿಂದ ಫೈಟ್ ಸಹ ಮಾಡಿಸಿದ್ದೇವೆ’ ಎಂದರು ನಿರದೇಶಕರು.

    ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ ಲಿ ಲಾಂಛನದಲ್ಲಿ ಜೆ.ಎಂ.ಪ್ರಹ್ಲಾದ್, ವಿಜಯ್ ಭಾಸ್ಕರ್ ಹರಪನಹಳ್ಳಿ ಹಾಗೂ ಪಿ.ಆರ್.ಶ್ರೀಧರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದಾರೆ.

    ಇದನ್ನೂ ಓದಿ: ‘ಕೆಜಿಎಫ್​ 2’ ಚಿತ್ರದಲ್ಲಿ ಕೆಲಸ ಮುಗಿಸಿ ಹೊರಟ ಸಂಜಯ್​ ದತ್​ …

    ರಾಘವೇಂದ್ರ ರಾಜಕುಮಾರ್, ದೊಡ್ಡಣ್ಣ, ಶ್ರೀನಿವಾಸಮೂರ್ತಿ, ಭವ್ಯ, ಶಂಕರ್ ಅಶ್ವಥ್, ನೀನಾಸಂ ಅಶ್ವಥ್, ಮುನಿರಾಜು, ವಿಜಯಭಾಸ್ಕರ್, ಶಿವಾನಂದ, ಪ್ರಕಾಶ್ ಕಾರಿಯಪ್ಪ, ವೆಂಕಟೇಶ್ ಪ್ರಸಾದ್, ಹೋಳಿ‌ ವೆಂಕಟೇಶ್ ಮುಂತಾದವರು ನಟಿಸಿದ್ದಾರೆ.

    ಕ್ರಿಸ್ಮಸ್​ಗೆ ‘ಯುವರತ್ನ’ ಚಿತ್ರದ ಇನ್ನೊಂದು ಹಾಡು …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts