More

    ಸರ್ಕಾರಿ ಬಂಗಲೆ ವಿವಾದ; ಹೈಕೋರ್ಟ್​ ಮೆಟ್ಟಿಲೇರಿದ ಸಂಸದ ರಾಘವ್​ ಚಡ್ಡಾ

    ನವದೆಹಲಿ: ತಮಗೆ ನೀಡಲಾಗಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಆದೇಶಿಸಿರುವ ಕೆಲ ಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆಮ್​ ಆದ್ಮಿ ಪಕ್ಷದ ಸಂಸದ (ರಾಜ್ಯಸಭೆ) ರಾಘವ್​ ಚಡ್ಡಾ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತು ವಿಚಾರಣೆ ನಡೆಸುವಂತೆ ಅರ್ಜಿಯಲ್ಲಿ ಕೋರಲಾಗಿದ್ದು, ಬುಧವಾರ ನ್ಯಾಯಾಲಯ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

    ಇದನ್ನೂ ಓದಿ: ಏಕದಿನ ವಿಶ್ವಕಪ್ 2023| ಆಸ್ಪತ್ರೆಗೆ ದಾಖಲಾದ ಶುಭಮನ್ ಗಿಲ್; ಪಾಕ್​ ವಿರುದ್ಧದ ಪಂದ್ಯಕ್ಕೆ ಡೌಟ್?

    ರಾಘವ್​ ಚಡ್ಡಾ ಪರ ನ್ಯಾಯಾಲಯಕ್ಕೆ ದಾವೆ ಹೂಡಿದ ಅವರ ವಕೀಲರು, ಈ ಹಿಂದೆ ವಿಚಾರಣಾ ನ್ಯಾಯಾಲಯದಿಂದ ಸರ್ಕಾರಿ ಬಂಗಲೆ ಖಾಲಿ ಮಾಡುವ ಸಲುವಾಗಿ ತಡೆಯಾಜ್ಞೆ ನೀಡಲಾಗಿತ್ತು. ಆದರೆ, ಈಗ ಅದನ್ನು ಏಕಾಏಕಿ ತೆಗೆದುಹಾಕಲಾಗಿದ್ದು, ಮನೆ ಖಾಲಿ ಮಾಡುವಂತೆ ನೋಟಿಸ್​ ನೀಡಲಾಗಿದೆ. ಈ ನಿಟ್ಟಿನಲ್ಲಿ ಕಲಹಂತದ ನ್ಯಾಯಾಲಯ ನೀಡಿರುವ ಆದೇಶವನ್ನು ರದ್ದು ಮಾಡಬೇಕು ಮತ್ತು ಈ ಕೂಡಲೇ ಅರ್ಜಿಯ ವಿಚಾರಣೆ ನಡೆಸಬೇಕೆಂದು ವಿನಂತಿಸಿದ್ದಾರೆ.

    ರಾಘವ್ ಚಡ್ಡಾ ಅವರು ರಾಜ್ಯಸಭಾ ಸಂಸದರಾಗಿ ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳುವವರೆಗೆ ಈ ಬಂಗಲೆಯಲ್ಲಿ ವಾಸಿಸುವ ಹಕ್ಕಿದೆ ಎಂದು ಹೇಳಿಕೊಳ್ಳುವಂತಿಲ್ಲ.  ರಾಘವ್ ಚಡ್ಡಾ ಅವರು ಸಂಸದರಾಗಿ ಅವರಿಗೆ ನೀಡಲಾದ ಸವಲತ್ತು ಮಾತ್ರವಾದ್ದರಿಂದ ಟೈಪ್ 7 ಬಂಗಲೆಯನ್ನು ಆಕ್ರಮಿಸಿಕೊಳ್ಳುವುದನ್ನು ಮುಂದುವರಿಸಲು ಅವರಿಗೆ ಯಾವುದೇ ಸ್ವಾಭಾವಿಕ ಹಕ್ಕು ಇಲ್ಲ ಎಂದು ಅಕ್ಟೋಬರ್​ 5ರಂದು ಪಟಿಯಾಲ ಹೌಸ್​ ಕೋರ್ಟ್ ಹೇಳಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts