More

    13ನೇ ಬಾರಿ ಫ್ರೆಂಚ್ ಓಪನ್​ ಕಿರೀಟ ಗೆದ್ದ ನಡಾಲ್, 20 ಗ್ರಾಂಡ್ ಸ್ಲಾಂ ಗೆಲುವಿನ ಫೆಡರರ್ ದಾಖಲೆ ಸಮ

    ಪ್ಯಾರಿಸ್: ಕ್ಲೇಕೋರ್ಟ್ ಕಿಂಗ್ ರಾಫೆಲ್ ನಡಾಲ್ 13ನೇ ಬಾರಿ ಫ್ರೆಂಚ್ ಓಪನ್ ಟೆನಿಸ್ ಪ್ರಶಸ್ತಿ ಜಯಿಸುವ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ. ಈ ಮೂಲಕ ಸ್ಪೇನ್ ಆಟಗಾರ ನಡಾಲ್, ಸರ್ವಾಧಿಕ 20 ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಸ್ವಿಸ್ ದಿಗ್ಗಜ ರೋಜರ್ ಫೆಡರರ್ ದಾಖಲೆಯನ್ನೂ ಸರಿಗಟ್ಟಿದರು.

    ರೋಲ್ಯಾಂಡ್ ಗ್ಯಾರಸ್‌ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 34 ವರ್ಷದ ನಡಾಲ್ ಅಗ್ರ ಶ್ರೇಯಾಂಕಿತ ನೊವಾಕ್ ಜೋಕೊವಿಕ್ ವಿರುದ್ಧ 6-0, 6-2, 7-5 ನೇರಸೆಟ್‌ಗಳಿಂದ ಗೆಲುವು ದಾಖಲಿಸಿದರು. ಇದರೊಂದಿಗೆ ನಡಾಲ್ ಒಂದೂ ಸೆಟ್ ಸೋಲದೆ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದರು. ಪ್ಯಾರಿಸ್‌ನಲ್ಲಿ ಅವರಿಗೆ ಇದು 100ನೇ ಪಂದ್ಯ ಗೆಲುವಾಗಿದೆ.

    2016ರ ಬಳಿಕ ಮತ್ತೊಮ್ಮೆ ಫ್ರೆಂಚ್ ಕಿರೀಟ ಗೆಲ್ಲುವ ತವಕದಲ್ಲಿದ್ದ ಸೆರ್ಬಿಯಾ ಆಟಗಾರ ಜೋಕೋ, 2ನೇ ಶ್ರೇಯಾಂಕಿತ ನಡಾಲ್‌ರ ಶಕ್ತಿಶಾಲಿ ನಿರ್ವಹಣೆ ಎದುರು ಮಂಕಾದರು. ಇದರೊಂದಿಗೆ ನಡಾಲ್ ಪ್ಯಾರಿಸ್ ಫೈನಲ್‌ನಲ್ಲಿ ಅಜೇಯ ದಾಖಲೆಯನ್ನೂ ಉಳಿಸಿಕೊಂಡರು.

    ನಡಾಲ್ ಗ್ರಾಂಡ್ ಸ್ಲಾಂ ಗೆಲುವುಗಳು:
    ಆಸ್ಟ್ರೇಲಿಯನ್ ಓಪನ್: 1 (2009)
    ಫ್ರೆಂಚ್ ಓಪನ್: 13 (2005, 2006, 2007, 2008, 2010, 2011, 2012, 2013, 2014, 2017, 2018, 2019, 2020)
    ವಿಂಬಲ್ಡನ್: 2 (2008, 2010)
    ಯುಎಸ್ ಓಪನ್: 4 (2010, 2013, 2017, 2019)

    ಗರಿಷ್ಠ ಗ್ರಾಂಡ್ ಸ್ಲಾಂ ವಿಜೇತರು
    ರೋಜರ್ ಫೆಡರರ್ 20
    ರಾಫೆಲ್ ನಡಾಲ್ 20
    ಜೋಕೋವಿಕ್ 17
    ಪೀಟ್ ಸಾಂಪ್ರಾಸ್ 14

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts