More

    ಬಹುಪಯೋಗಿ ಮೂಲಂಗಿ; ಚಳಿಗಾಲಕ್ಕಂತೂ ಇದು ಹೇಳಿಮಾಡಿಸಿದ ಸೂಪರ್‌ಫುಡ್

    ಮೂಲಂಗಿ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ. ಇದರ ವಿಶಿಷ್ಟ ಸುವಾಸನೆಯೇ ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ. ಇಂತಹ ಮೂಲಂಗಿ ಚಳಿಗಾಲದಲ್ಲಂತೂ ನಿಮ್ಮ ತಿನ್ನುವ ಹಂಬಲವನ್ನು ಹೆಚ್ಚಿಸುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹೆಚ್ಚು ಅಗತ್ಯವಿರುವ ಸೂಪರ್‌ಫುಡ್ ಕೂಡ ಹೌದು.

    ಚಳಿಗಾಲದಲ್ಲಿ ಇದರ ಲಭ್ಯತೆ ಹೆಚ್ಚಾಗಿದ್ದು, ಭಾರತೀಯರ ಅಡುಗೆ ಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಸಲಾಡ್, ಪರೋಟ, ಉಪ್ಪಿನಕಾಯಿ, ಚಟ್ನಿ, ಮೇಲೊಗರಗಳವರೆಗೆ ವಿವಿಧ ರೂಪಗಳಲ್ಲಿ ಮೂಲಂಗಿಯನ್ನು ಆಹಾರವಾಗಿ ಸೇವಿಸುತ್ತೇವೆ. ನೀವು ಸಾಗು ಪ್ರಿಯರೇ? ಎಲ್ಲ ಹಸಿರು ಪದಾರ್ಥಗಳನ್ನು ಇಷ್ಟಪಡುತ್ತಿರಾ? ಹಾಗಾದರೆ ಮೂಲಂಗಿ ಎಲೆಗಳನ್ನು ನಿಮ್ಮ ತರಕಾರಿ ಪಟ್ಟಿಗೆ ಸೇರಿಸಿಕೊಳ್ಳಬಹುದು. ಏಕೆಂದರೆ ಮೂಲಂಗಿ ಎಲೆಗಳೂ ವಿಟಮಿನ್‌ಗಳ ಆಗರ. ಈ ಎಲೆಗಳು ವಿಟಮಿನ್ ಬಿ6, ವಿಟಮಿನ್ ಸಿ, ಮೆಗ್ನೀಸಿಯಂ, ರಂಜಕ ಮತ್ತು ಕಬ್ಬಿಣ, ಕ್ಯಾಲ್ಸಿಯಂನ ಉತ್ತಮ ಮೂಲವಾಗಿದ್ದು, ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ.

    ಮೂಲಂಗಿಯು ಕಡಿಮೆ ಕ್ಯಾಲರಿಗಳನ್ನು ಹೊಂದಿರುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡಿ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಮೂಲಂಗಿ ರಸವು ಯಕೃತ್ತಿನ ನಿರ್ವಿಶೀಕರಣಕ್ಕೆ ಸಹಾಯ ಮಾಡುವ ವಸ್ತುಗಳನ್ನು ಸಹ ಹೊಂದಿದೆ.

    ಮೂಲಂಗಿಯಿಂದಾಗುವ ಪ್ರಯೋಜನಗಳು:

    ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು: ಮೂಲಂಗಿಯಂತಹ ಕ್ರೂಸಿಫರ್ ತರಕಾರಿಗಳನ್ನು ತಿನ್ನುವುದು ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ, ಕ್ರೂಸಿಫರ್ ತರಕಾರಿಗಳು ನೀರಿನೊಂದಿಗೆ ಸಂಯೋಜಿಸಿದಾಗ ಐಸೊಥಿಯೋಸೈನೇಟ್‌ಗಳಾಗಿ ವಿಭಜನೆಯಾಗುವ ಸಂಯುಕ್ತಗಳನ್ನು ಹೊಂದಿರುತ್ತದೆ. ಐಸೊಥಿಯೋಸೈನೇಟ್‌ಗಳು ಕ್ಯಾನ್ಸರ್ ಉಂಟುಮಾಡುವ ವಸ್ತುಗಳಿಂದ ದೇಹವನ್ನು ಶುದ್ಧೀಕರಿಸಲು ಮತ್ತು ಗೆಡ್ಡೆಯ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತವೆ.

    ಮಧುಮೇಹ ನಿರ್ವಹಿಸುತ್ತದೆ: ಮೂಲಿಯ ಪ್ರಬಲವಾದ ಮಧುಮೇಹ ವಿರೋಧಿ ಗುಣಲಕ್ಷಣಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ. ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ, ಅಡಿಪೋನೆಕ್ಟಿನ್ ಒಂದು ಹಾರ್ಮೋನ್ ಆಗಿದ್ದು, ಅದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಕಾರಣವಾಗಿದೆ. ಮೂಲಂಗಿಯು ಅಡಿಪೋನೆಕ್ಟಿನ್ ಅನ್ನು ನಿಯಂತ್ರಿಸುವ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತದೆ ಮತ್ತು ಗ್ಲೂಕೋಸ್ ಹೋಮಿಯೋಸ್ಟಾಸಿಸ್ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

    ಉತ್ತಮ ಜೀರ್ಣಕಾರಿ: ಮೂಲಿಯು ಜೀರ್ಣಾಂಗ ವ್ಯವಸ್ಥೆಗೆ ಉತ್ತಮವಾಗಿದೆ. ಮೂಲಂಗಿ ಕರಗಬಲ್ಲ ಮತ್ತು ಕರಗದ ನಾರಿನ ಸಂಯೋಜನೆಯನ್ನು ನೀಡುತ್ತದೆ. ಇದು ಜಿಐ ಟ್ರಾಕ್ಟ್​ಗೆ ಉತ್ತಮವಾಗಿದೆ. ಫೈಬರ್ ನಿಮ್ಮ ಕರುಳಿನ ಮೂಲಕ ತ್ಯಾಜ್ಯವನ್ನು ಚಲಿಸುವಂತೆ ಮಾಡಿ ಮಲಬದ್ಧತೆ ತಡೆಯುತ್ತದೆ.

    ಆಂಟಿಹೈಪರ್ಟೆನ್ಸಿವ್ ಪರಿಣಾಮಗಳು: ಮೂಲಂಗಿಯು ಪೊಟ್ಯಾಸಿಯಂನ ಉತ್ತಮ ಮೂಲವಾಗಿದೆ. ಇದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಿ ಹೃದಯ ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಅಲ್ಲದೆ ಆಂಥೋಸಯಾನಿನ್ ಎಂಬ ಸಂಯುಕ್ತಗಳ ಮೂಲಕ ರಕ್ತ ಪರಿಚಲನೆ ಸುಧಾರಿಸಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಯಕೃತ್ತಿನ ಕಾರ್ಯ ಸುಧಾರಣೆ: ಇತರ ಸಂಯುಕ್ತಗಳ ಜತೆಗೆ ಮೂಲಂಗಿಯು ಇಂಡೋಲ್ 3 ಕಾರ್ಬಿನಾಲ್ ಮತ್ತು 4-ಮೀಥೈಲ್ಥಿಯೋ-3-ಬ್ಯುಟೆನಿಲ್-ಐಸೋಥಿಯೋಸೈನೇಟ್ ಅನ್ನು ಹೊಂದಿದೆ. ಇದು ಯಕೃತ್ತಿನಲ್ಲಿ ಜಮೆಯಾದ ವಿಷವನ್ನು ತೆಗೆಯಲು ಮತ್ತು ಆಗಿರುವ ಹಾನಿಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದೇ ಸಂಯುಕ್ತಗಳು ಮೂತ್ರಪಿಂಡಗಳು ವಿಷ ಹೊರಹಾಕುವಂತೆ ಮಾಡುತ್ತವೆ.

    ಹೃದಯರಕ್ತನಾಳದ ಸುಧಾರಣೆ: ಮೂಲಂಗಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಕ್ಯಾಲ್ಸಿಯಂ, ಪೊಟ್ಯಾಸಿಯಂ ನಂತಹ ಖನಿಜಗಳು ಸಮೃದ್ಧವಾಗಿದೆ. ಈ ಪೋಷಕಾಂಶಗಳು ಅಧಿಕ ರಕ್ತದೊತ್ತಡವನ್ನು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಮೂಲಂಗಿ ರಕ್ತದ ಹರಿವನ್ನು ಸುಧಾರಿಸುವ ನೈಸರ್ಗಿಕ ನೈಟ್ರೇಟ್‌ಗಳನ್ನು ಹೊಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts