More

    ಯಂಗ್ ಡಯಾಬಿಟಿಸ್, ಬಿಪಿ ಹೆಚ್ಚಳ

    ಶಿವಮೊಗ್ಗ: ಯುವಕರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. 25 ವರ್ಷದೊಳಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಯಂಗ್ ಡಯಾಬಿಟಿಸ್, ಯಂಗ್ ಬಿಪಿ ಕಾಣಿಸಿಕೊಳ್ಳತೊಡಗಿದೆ. ಯುವಕರಲ್ಲಿ ಖಿನ್ನತೆ ಹೆಚ್ಚಾಗುತ್ತಿದೆ ಎಂದು ಮನೋವೈದ್ಯ ಡಾ. ಸಿ.ಆರ್.ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದರು.

    ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ ಕುರಿತು ಉಪನ್ಯಾಸ ನೀಡಿದ ಅವರು, ಯುವಕರು ಕೀಳರಿಮೆಯಿಂದ ಹೊರ ಬರಬೇಕಿದೆ. ಮಾನಸಿಕ ಆರೋಗ್ಯ ಎಂದರೆ ಭಯ, ಕೋಪ, ಮತ್ಸರ ಮುಂತಾದ ಕೆಟ್ಟ ಗುಣಗಳನ್ನು ದೂರವಿಡುವುದು. ಮೂಢನಂಬಿಕೆಗಳಿಂದ ಹೊರಬಂದು ವೈಜ್ಞಾನಿಕವಾಗಿ ಆಲೋಚಿಸಬೇಕು ಎಂದರು.
    ಯಂತ್ರ ಯುಗದ ನಡುವೆ ಮನುಷ್ಯರು ಮತ್ತು ಮನಸ್ಸುಗಳು ಕಳೆದು ಹೋಗುತ್ತಿವೆ. ಮನುಷ್ಯರ ಅಗತ್ಯವಿಲ್ಲದ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಅಡುಗೆ ಮಾಡುವವರು, ಜೋಗುಳ ಹಾಡುವವರು, ಹಾಲು ಕುಡಿಸುವವರ ಕೆಲಸವನ್ನು ಯಂತ್ರಗಳೇ ಮಾಡುತ್ತಿವೆ. ಜನ ಜೀವನವೇ ಬದಲಾಗುತ್ತಿದೆ ಎಂದು ಹೇಳಿದರು.
    ಕವಯತ್ರಿ ಸವಿತಾ ನಾಗಭೂಷಣ್ ಮಾತನಾಡಿ, ಮಾನವೀಯತೆಯ ಸ್ಪರ್ಶ ಇಂದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಜಾತಿ, ಧರ್ಮ, ಬಡತನ, ಸಿರಿತನಗಳನ್ನು ಮೀರಿ ಬೆಳೆಯಬೇಕಾಗಿದೆ. ನಮ್ಮ ಆಸಕ್ತಿಗಳು ಸರಿಯಾದ ದಾರಿಯಲ್ಲಿ ಸಾಗಬೇಕಾಗಿದೆ ಎಂದರು.
    ಪ್ರಾಚಾರ್ಯ ಡಾ. ಟಿ.ಅವಿನಾಶ್, ಐಕ್ಯುಎಸಿ ಸಂಚಾಲಕಿ ಪ್ರೊ. ಕೆ.ಎಸ್.ಸರಳಾ, ಪ್ರಾಧ್ಯಾಪಕರಾದ ಕುಂದನ್ ಬಸವರಾಜ್, ಡಾ. ಗಿರಿಧರ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಎ.ಶಿವಮೂರ್ತಿ, ಕ್ಷೇಮ ಟ್ರಸ್ಟ್ ಅಧ್ಯಕ್ಷ ಡಾ. ಕೆ.ಆರ್.ಶ್ರೀಧರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts