More

    ಯಶ್ ಮತ್ತು ರಾಧಿಕಾ ಪಂಡಿತ್ 5ನೇ ವಿವಾಹ ವಾರ್ಷಿಕೋತ್ಸವ! ಪ್ರೀತಿ ತುಂಬಿದ ಫೋಟೋಗಳು ವೈರಲ್!

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್ ಅವರು ದಾಂಪತ್ಯ ಜೀವನವನ್ನು ಆರಂಭಿಸಿ ಐದು ವರ್ಷಗಳು ಕಳೆದಿವೆ. ಮತ್ತು ಇಬ್ಬರು ಇತ್ತೀಚೆಗೆ ಮಾಲ್ಡೀವ್ಸ್ ಕಡಲತೀರದಲ್ಲಿ ಎಂಜಾಯ್ ಮಾಡಿದ್ದು, 5 ನೇ ವಿವಾಹ ವಾರ್ಷಿಕೋತ್ಸವದ ಸಂರ್ದಭದಲ್ಲಿ ಅವರ ಮಾಲ್ಡೀವ್ಸ್ ಫೋಟೋಗಳನ್ನು ಅಭಿಮಾನಿಗಳಿಗೆಂದು ಹಂಚಿಕೊಂಡಿದ್ದಾರೆ. ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ, “ಫೋಟೋಗಳಿಗೆ ಪೋಸ್ ನೀಡಲು ಪುರುಷರು ಏಕೆ ಕಷ್ಟಪಡುತ್ತಾರೆಎಂದು ಯಶ್ ಅವರನ್ನು ಕ್ಯಾಪ್ಷನ್ ಮೂಲಕ ಕಾಲೆಳೆದಿದ್ದಾರೆ ರಾಧಿಕಾ. ಸ್ಯಾಂಡಲ್​​ವುಡ್​ನ ಈ ಕ್ಯೂಟ್ ದಂಪತಿಗಳು ತಮ್ಮ ವಿವಾಹವಾರ್ಷಿಕೋತ್ಸವದಂದು ಪರಸ್ಪರ ಸಿಹಿ ಸಂದೇಶಗಳನ್ನು ಹಂಚಿಕೊಂಡರು.

    ಯಶ್ ಮತ್ತು ರಾಧಿಕಾ ಪಂಡಿತ್ 5ನೇ ವಿವಾಹ ವಾರ್ಷಿಕೋತ್ಸವ! ಪ್ರೀತಿ ತುಂಬಿದ ಫೋಟೋಗಳು ವೈರಲ್! ಯಶ್ ಮತ್ತು ರಾಧಿಕಾ ಪಂಡಿತ್ 5ನೇ ವಿವಾಹ ವಾರ್ಷಿಕೋತ್ಸವ! ಪ್ರೀತಿ ತುಂಬಿದ ಫೋಟೋಗಳು ವೈರಲ್!

    ರಾಧಿಕಾ ಅವರು happy 5th sweetheartಎಂಬ ಸಂದೇಶದ ಜೊತೆಗೆ ವಿಶೇಷ ಉಲ್ಲೇಖವನ್ನು ಯಶ್ ಅವರಿಗೆ ಹಂಚಿಕೊಂಡಿದ್ದಾರೆ. ಇನ್ನು, ಸೋಷಿಯಲ್ ಮೀಡಿಯಾದಲ್ಲಿ ಅಪರೂಪಕ್ಕೆ ಫೋಟೋಗಳನ್ನು ಪೋಸ್ಟ್ ಮಾಡುವ ನಟ ಯಶ್, ” ಜಗತ್ತು ಸುಂದರವಾಗಿದೆ ಎಂದು ಹೇಳುತ್ತಾರೆ. ಅದಕ್ಕೆ, ನಾನು ಸಂಪೂರ್ಣವಾಗಿ ಒಪ್ಪುತ್ತೇನೆ, ಆದರೆ ಅದು ನೀನು (ರಾಧಿಕಾ) ನನ್ನ ಪಕ್ಕದಲ್ಲಿರುವಾಗ ಮಾತ್ರ. ನನ್ನ ಜಗತ್ತನ್ನು ಸುಂದರವಾಗಿಸಿದ್ದಕ್ಕಾಗಿ ಧನ್ಯವಾದಗಳು. ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆಎಂದು ಬರೆದುಕೊಂಡಿದ್ದಾರೆ. ಇದೀಗ, ರಾಧಿಕಾ ಮತ್ತು ಯಶ್ ಅವರು ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿವೆ. 

    ಪುಷ್ಪ ಚಿತ್ರ ತಂಡಕ್ಕೆ ಅಲ್ಲು ಅರ್ಜುನ್​​ ನೀಡಿದ ಉಡುಗೊರೆಗಳೇನು? ಏನಂದ್ರು ಸ್ಟೈಲಿಶ್​​ ಸ್ಟಾರ್​?

    25 ವರ್ಷಗಳ ಬಳಿಕ ಮತ್ತೆ ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ವಿಕ್ಟರಿ ವೆಂಕಟೇಶ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts