ಆಸ್ಪತ್ರೆಗೆ ಸೆಟ್ ಪ್ರಾಪರ್ಟಿ ದಾನ ಮಾಡಿದ ರಾಧೇ ಶ್ಯಾಮ್ ತಂಡ

blank

ಹೈದರಾಬಾದ್​: ಪ್ರಭಾಸ್​ ಅಭಿನಯದ ರಾಧೇ ಶ್ಯಾಮ್ ಚಿತ್ರವು ಜುಲೈ 30ರಂದು ಬಿಡುಗಡೆಯಾಗುತ್ತಿದೆ. ಆದರೆ, ಕರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನ ರದ್ದಾಗಿರುವುದರಿಂದ, ಚಿತ್ರ ಪೋಸ್ಟ್​ಪೋನ್​ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

blank

ಇದನ್ನೂ ಓದಿ: ನಟ ಸಲ್ಮಾನ್​ ಖಾನ್​ ಬಾಡಿಗಾರ್ಡ್​ ಶೇರಾ ಸಂಬಳ ಓರ್ವ ಸಿಇಒಗಿಂತಲೂ ಹೆಚ್ಚಾ?

ಈ ಮಧ್ಯೆ, ಚಿತ್ರತಂಡವು ಒಂದೊಳ್ಳೆಯ ಕೆಲಸ ಮಾಡಿದೆ. ಚಿತ್ರಕ್ಕಾಗಿ ಹೈದರಾಬಾದ್​ನಲ್ಲಿ ಒಂದು ಆಸ್ಪತ್ರೆಯ ಸೆಟ್​ ಹಾಕಿಸಲಾಗಿತ್ತು. ಅದಕ್ಕಾಗಿ ಹಾಸಿಗೆ, ಮಂಚ, ಸ್ಟ್ರೆಚರ್​, ಆಕ್ಸಿಜನ್​ ಸಿಲಿಂಡರ್​ಗಳು ಸೇರಿದಂತೆ ಆಸ್ಪತ್ರೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ತರಿಸಲಾಗಿತ್ತು. ಈಗ ಆ ಎಲ್ಲ ಉಪಕರಣಗಳನ್ನು ಹೈದರಾಬಾದ್​ನ ಒಂದು ಕೋವಿಡ್​ ಆಸ್ಪತ್ರೆಗೆ ದಾನ ಮಾಡಲಾಗಿದೆ.

ಹೈದರಾಬಾದ್​ನ ಕೋವಿಡ್​ ಆಸ್ಪತ್ರೆಗಳಲ್ಲಿ ಬೆಡ್​ ಸಿಗದೆ ಜನ ಒದ್ದಾಡುವಂತಾಗಿದೆ. ಹೇಗೂ ಚಿತ್ರಕ್ಕೆ ಇತ್ತೀಚೆಗೆ ಆಸ್ಪತ್ರೆಯ ಸೆಟ್​ ಹಾಕಿಸಲಾಗಿತ್ತು. ಆಸ್ಪತ್ರೆಗೆ ಏನು ಬೇಕೋ ಅವೆಲ್ಲವನ್ನು ಹೊಸದಾಗಿ ತರಿಸಲಾಗಿತ್ತು. 70ರ ದಶಕದ ಇಟಲಿಯ ಒಂದು ಆಸ್ಪತ್ರೆಯಂತೆ ಈ ಸೆಟ್​ ನಿರ್ಮಾಣ ಮಾಡಲಾಗಿತ್ತು.

ಈಗ ಹೇಗೂ ಚಿತ್ರೀಕರಣ ಮುಗಿದಿರುವುದರಿಂದ, ಪ್ರಾಪರ್ಟಿಗಳನ್ನು ಚಿತ್ರತಂಡ ಹಾಗೆಯೇ ಇಟ್ಟುಕೊಂಡಿತ್ತು. ಯಾವಾಗ, ಆಸ್ಪತ್ರೆಗಳಲ್ಲಿ ಅಭಾವ ಹೆಚ್ಚಿದೆ ಎಂಬ ವಿಷಯ ಗೊತ್ತಾಯಿತೋ, ತಕ್ಷಣವೇ ಆಸ್ಪತ್ರೆಯೊಂದಕ್ಕೆ ಆ ಪ್ರಾಪರ್ಟಿಗಳನ್ನು ದಾನ ಮಾಡಲಾಗಿದೆ. ಒಂಬತ್ತು ಟ್ರಕ್​ಗಳಲ್ಲಿ 50 ಹಾಸಿಗೆಗಳು, ಸ್ಟ್ರೆಚರ್​ ಮುಂತಾದವುಗಳನ್ನು ರವಾನಿಸಲಾಗಿದೆ.

ಇದನ್ನೂ ಓದಿ: ಆಕ್ಸಿಜನ್‌ ಮುಗೀತಿದೆ, ಯಾರೂ ಬರ್ತಿಲ್ಲ… ಮೃತ ನಟ ರಾಹುಲ್‌ನ ಹೃದಯವಿದ್ರಾವಕ ವಿಡಿಯೋ ಹಂಚಿಕೊಂಡ ಪತ್ನಿ

ರಾಧೇ ಶ್ಯಾಮ್​ ಚಿತ್ರದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದು, ಮಿಕ್ಕಂತೆ ಮೈನೆ ಪ್ಯಾರ್​ ಕಿಯಾ ಖ್ಯಾತಿಯ ಭಾಗ್ಯಶ್ರೀ, ಕೃಷ್ಣಂರಾಜು ಸೇರಿದಂತೆ ಹಲವು ಜನಪ್ರಿಯ ನಟ-ನಟಿಯರು ನಟಿಸಿದ್ದಾರೆ. ಚಿತ್ರವನ್ನು ರಾಧಾಕೃಷ್ಣ ಕುಮಾರ್​ ನಿರ್ದೇಶಿಸುತ್ತಿದ್ದಾರೆ.

ಮದುವೆ ಆಗುವ ತಪ್ಪು ಖಂಡಿತಾ ಮಾಡುವುದಿಲ್ಲ … ಚಾರ್ಮಿ ಸ್ಪಷ್ಟನೆ

Share This Article

ಅಧಿಕ ನೀರು ಕುಡಿಯುವುದರಿಂದ ಈ 6 ದೊಡ್ಡ ಸಮಸ್ಯೆಗಳು ಕಾಡಬಹುದಂತೆ! | Drinking water

Drinking water:ಸಾಮಾನ್ಯವಾಗಿ ನೀರು ಕುಡಿಯವುದರಿಂದ ಅನೇಕ ರೋಗದ ಸಮಸ್ಯೆಗಳು ದೂರುವಾಗುತ್ತದೆ. ಅಲ್ಲದೆ, ಆರೋಗ್ಯಕ್ಕೆ ಊಟ ಎಷ್ಟು…

ಪದೇಪದೆ ವಿವಾಹದ ಪ್ರಸ್ತಾಪಗಳು ಮುರಿದು ಬೀಳುತ್ತಿದೆಯೇ? ಈ ಕ್ರಮಗಳು ಅನುಸರಿಸಿ; ಮದುವೆಯ ಅಡೆತಡೆಗಳನ್ನು ನಿವಾರಿಸಿ | Marriage Proposals

Marriage Proposals : ಜೀವನದ ಅತಿದೊಡ್ಡ ತಿರುವು ಎಂದ್ರೆ ಅದು ಮದುವೆ. ಮದುವೆ ಎಂದ್ರೆ ಎಲ್ಲರಿಗೂ…

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…