More

    ಡಾರ್ಲಿಂಗ್ ಕೃಷ್ಣನ ಜತೆ ರಚಿತಾ ರಾಮ್?

    ಬೆಂಗಳೂರು: ಲಾಕ್​ಡೌನ್ ಮುಗಿದ ನಂತರ ರಚಿತಾ ಈಗಾಗಲೇ ‘ಮಾನ್ಸೂನ್ ರಾಗ’ ಎಂಬ ಚಿತ್ರದಲ್ಲಿ ತಮ್ಮ ಭಾಗದ ಕೆಲಸವನ್ನು ಮುಗಿಸಿದ್ದಾರೆ. ಸದ್ಯ, ಪ್ರಜ್ವಲ್ ಅಭಿನಯದ ‘ವೀರಂ’ ಚಿತ್ರದಲ್ಲಿ ನಟಿಸುತ್ತಿದ್ದು, ಇದರ ನಂತರ ಸತೀಶ್ ನೀನಾಸಂ ಅಭಿನಯದ ‘ಮ್ಯಾಟ್ನೀ’ಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ಈ ಮಧ್ಯೆ, ಇನ್ನೊಂದು ಚಿತ್ರದಲ್ಲಿ ಅವರ ಹೆಸರು ಕೇಳಿಬರುತ್ತಿದೆ. ‘ಡಾರ್ಲಿಂಗ್’ ಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ರಚಿತಾ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ. ಈಗಾಗಲೇ ಚಿತ್ರತಂಡದವರು ರಚಿತಾ ಅವರನ್ನು ಭೇಟಿ ಮಾಡಿ ಕಥೆ ಹೇಳಿ ಬಂದಿದ್ದಾರೆ. ರಚಿತಾ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಬಂದಿಲ್ಲವಂತೆ. ರಚಿತಾ ಒಪ್ಪಿದರೆ, ಇದೇ ಮೊದಲ ಬಾರಿಗೆ ಕೃಷ್ಣಗೆ ನಾಯಕಿಯಾಗಿ ನಟಿಸಿ ದಂತಾಗುತ್ತದೆ. ಈ ಚಿತ್ರವನ್ನು ನಿರ್ದೇಶಿ ಸುತ್ತಿರುವುದು ದೀಪಕ್ ಗಂಗಾಧರ್. ಇದಕ್ಕೂ ಮುನ್ನ ಸಹಾಯಕ ನಿರ್ದೇಶಕರಾಗಿ, ಚಿತ್ರಗಳ ವಿತರಕರಾಗಿ ಗುರುತಿಸಿಕೊಂಡಿರುವ ದೀಪಕ್, ಇದೇ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ಸಜ್ಜಾ ಗಿದ್ದು, ತಾವೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಎನ್ನುವ ದೀಪಕ್, ಮಾರ್ಚ್​ನಿಂದ ಚಿತ್ರೀಕರಣ ಪ್ರಾರಂಭ ಮಾಡುತ್ತಾರಂತೆ. 50 ದಿನಗಳಲ್ಲಿ ಬೆಂಗಳೂರು, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ಮುಗಿಸಲಿದ್ದಾರಂತೆ. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸಿದ್ದು, ಕೆ.ಎಂ. ಪ್ರಕಾಶ್ ಸಂಕಲನ ಮಾಡಲಿದ್ದಾರೆ. ಈಗಾಗಲೇ ಚಿತ್ರಕ್ಕೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಚಿತ್ರತಂಡಕ್ಕೆ ರಚಿತಾ ಸೇರ್ಪಡೆಯಾಗುತ್ತಾರೋ, ಇಲ್ಲವೋ ಎಂಬುದು ಕೆಲವೇ ದಿನಗಳಲ್ಲಿ ಸ್ಪಷ್ಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts