More

    ದಿನೇಶ್​ ಬಾಬು 50ನೇ ಚಿತ್ರಕ್ಕೆ ರಚಿತಾ ನಾಯಕಿ …

    ಕನ್ನಡ ಚಿತ್ರಂಗದ ಅತ್ಯಂತ ಬ್ಯುಸಿ ನಟಿ ಎಂದರೆ ಅದು ರಚಿತಾ ರಾಮ್​. ಈಗಾಗಲೇ ಅವರ ಅಭಿನಯದ ‘ಏಕ್​ ಲವ್ ಯಾ’, ‘100’, ‘ಸೂಪರ್​ ಮಚ್ಚಿ’, ‘ರವಿ ಬೋಪಣ್ಣ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದು, ಅವೆಲ್ಲಾ ಬಿಡುಗಡೆಯಾಗಬೇಕಿದೆ.

    ಇದನ್ನೂ ಓದಿ: ಜೀವ ಉಳೀಬೇಕು ಅಂದ್ರೆ 35 ಕೋಟಿ ಕೊಡಿ … ಮಹೇಶ್​ ಮಂಜ್ರೇಕರ್​​​ಗೆ ಬೆದರಿಕೆ

    ಈ ಮಧ್ಯೆ ಅವರು ‘ಏಪ್ರಿಲ್​’, ‘ವೀರಂ’, ‘ಮಾನ್ಸೂನ್​ ರಾಗ’, ‘ಸೀರೆ’ ಮತ್ತು ‘ಕೊಲಮಾವು ಕೋಕಿಲ’ ಚಿತ್ರದ ಕನ್ನಡ ರೀಮೇಕ್​ನಲ್ಲಿ ಅವರು ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಈ ಚಿತ್ರಗಳು ಮುಂದಿನ ದಿನಗಳಲ್ಲಿ ಒಂದರಹಿಂದೊಂದು ಪ್ರಾರಂಭವಾಗಲಿದೆ.

    ಇದೆಲ್ಲದರ ಜತೆಗೆ, ರಚಿತಾ ಇನ್ನೂ ಒಂದು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ವಿಶೇಷವೆಂದರೆ, ದಿನೇಶ್​ ಬಾಬು ನಿರ್ದೇಶನದ 50ನೇ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ಶುಕ್ರವಾರ ಚಾಲನೆ ಸಿಗಲಿದೆ, ಈ ಹೆಸರಿಡದ ಚಿತ್ರವನ್ನು ರವೀಶ್​ ಆರ್​ ಸಿ ಮತ್ತು ರುಬಿನ್​ ರಾಜ್​ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಪಿ.ಕೆ.ಎಚ್​. ದಾಸ್​ ಛಾಯಾಗ್ರಹಣ ಮಾಡಿದರೆ, ಗುಮ್ಮಿನೇನಿ ವಿಜಯ್​ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

    ಅಂದಹಾಗೆ, ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ರಚಿಸುತ್ತಿದ್ದಾರೆ ದಿನೇಶ್​ ಬಾಬು. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ಇದೊಂದು ಪ್ಯಾರಾ ನಾರ್ಮಲ್​ ಆಕ್ಟಿವಿಟಿ ಇರುವ ಚಿತ್ರ ಎನ್ನುತ್ತಾರೆ. ‘ಈ ಹಿಂದೆ ‘ಕನಕಾಂಬರಿ’ ಎಂಬ ಹಾರರ್​ ಚಿತ್ರ ಮಾಡಿದ್ದೆ. ಆದರೆ, ಅತೀಂದ್ರಿಯ ಶಕ್ತಿಯ ಬಗ್ಗೆ ಇದುವರೆಗೂ ಚಿತ್ರ ಮಾಡಿರಲಿಲ್ಲ. ಈ ಚಿತ್ರದಲ್ಲಿ ಅಂಥದ್ದೊಂದು ಕಥೆ ಮಾಡಿಕೊಂಡಿದ್ದೇನೆ. ಚಿತ್ರಕ್ಕಾಗಿ ಒಂದು ಮನೆಯ ಹುಡುಕಾಟ ನಡೆದಿದ್ದು, ಸೆಪ್ಟೆಂಬರ್​ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ’ ಎನ್ನುತ್ತಾರೆ.

    ಇದನ್ನೂ ಓದಿ: ‘ಕ್ಷಮಿಸು ಬಾಬು.. ಎಂದು ಯಾಕೆ ಹೇಳಿದೆ..ಜೂ.14ರಂದು ಏನಾಯಿತು?’-ಎಳೆಎಳೆಯಾಗಿ ಬಿಚ್ಚಿಟ್ಟ ರಿಯಾ ಚಕ್ರವರ್ತಿ

    ಈ ಚಿತ್ರದ ಹೆಸರನ್ನು ಸದ್ಯಕ್ಕೆ ಗೌಪ್ಯವಾಗಿ ಇಡಲಾಗಿದ್ದು, ಶುಕ್ರವಾರ ಮುಹೂರ್ತದ ಸಂದರ್ಭದಲ್ಲಿ ಚಿತ್ರದ ಹೆಸರನ್ನು ಅನಾವರಣಗೊಳಿಸಲಾಗುತ್ತದೆ.

    ಅನುಷ್ಕಾರ ಈ ಪೋಲ್ಕಾ ಡಾಟ್​ ಡ್ರೆಸ್​ನ ಬೆಲೆ ಎಷ್ಟಿರಬಹುದು ಹೇಳಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts