More

    ಐಪಿಎಲ್‌ನಲ್ಲಿ ಆರೆಂಜ್, ಪರ್ಪಲ್ ಕ್ಯಾಪ್‌ಗೆ ರೋಚಕ ಪೈಪೋಟಿ

    ಬೆಂಗಳೂರು: ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೂರ್ನಿಯ ಗರಿಷ್ಠ ರನ್ ಮತ್ತು ವಿಕೆಟ್ ಗಳಿಸಿದವರಿಗೆ ನೀಡಲಾಗುವ ಆರೆಂಜ್ ಮತ್ತು ಪರ್ಪಲ್ ಕ್ಯಾಪ್‌ಗೂ ಪೈಪೋಟಿ ಏರ್ಪಡಲಿದೆ. ಸದ್ಯ ಕೆಎಲ್ ರಾಹುಲ್ ಮತ್ತು ಕಗಿಸೊ ರಬಾಡ ಕ್ರಮವಾಗಿ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಹೊಂದಿದ್ದರೂ, ಅದನ್ನು ಅವರೇ ಗೆಲ್ಲಲಿದ್ದಾರೆ ಎಂದು ಹೇಳುವುದು ಕಷ್ಟ. ಫೈನಲ್ ಪಂದ್ಯದಲ್ಲಿನ ನಿರ್ವಹಣೆಯ ಆಧಾರದಲ್ಲಿ ಕ್ಯಾಪ್ ಯಾರಿಗೆ ಒಲಿಯಲಿದೆ ಎಂಬುದು ಸ್ಪಷ್ಟವಾಗಲಿದೆ.

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಟೂರ್ನಿಯ ಆರಂಭದಿಂದಲೂ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಆದರೆ ಫೈನಲ್ ಪಂದ್ಯದಲ್ಲಿ ಅವರಿಂದ ಈ ಕ್ಯಾಪ್‌ಅನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ ಕಸಿಯುವ ಅಪಾಯವಿದೆ. ಕೆಎಲ್ ರಾಹುಲ್ 670 ರನ್ ಗಳಿಸಿ ಟೂರ್ನಿಯಿಂದ ನಿರ್ಗಮಿಸಿದ್ದರೆ, ಶಿಖರ್ ಧವನ್ ಸದ್ಯ 603 ರನ್ ಗಳಿಸಿದ್ದು, ಫೈನಲ್‌ನಲ್ಲಿ 68 ರನ್ ಗಳಿಸಿದರೆ ಆರೆಂಜ್ ಕ್ಯಾಪ್ ವಶಪಡಿಸಿಕೊಳ್ಳಲಿದ್ದಾರೆ.

    ಇನ್ನು ಪರ್ಪಲ್ ಕ್ಯಾಪ್ ಲೀಗ್ ಹಂತದ ಕೊನೇ ಹಂತದಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಕಗಿಸೊ ರಬಾಡ (29) ಮತ್ತು ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ (27) ನಡುವೆ ಕೈಬದಲಾಯಿಸುತ್ತ ಬಂದಿದೆ. ಸದ್ಯ ರಬಾಡ 2 ವಿಕೆಟ್ ಮುನ್ನಡೆಯಲ್ಲಿದ್ದರೂ, ಫೈನಲ್ ಪಂದ್ಯದಲ್ಲಿ ರಬಾಡ ಮತ್ತು ಬುಮ್ರಾ ಎಷ್ಟು ವಿಕೆಟ್ ಕಬಳಿಸುವರು ಎಂಬುದೇ ಪರ್ಪಲ್ ಕ್ಯಾಪ್ ವಿಜೇತರನ್ನು ನಿರ್ಧರಿಸಲಿದೆ.

    ಇದೊಂದು ಕಾರಣದಿಂದಾಗಿ ಮುಂಬೈ ಇಂಡಿಯನ್ಸ್​ ತಂಡ ಈ ಸಲ ಕಪ್ ಗೆಲ್ಲುವುದು ಕಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts