More

    ರೈತರ ಹುಬ್ಬೇರಿಸಿದ ಭಲೇ ಬಸವ..!

    ರಬಕವಿ/ಬನಹಟ್ಟಿ: ತಾಲೂಕಿನ ನಾವಲಗಿ ಗ್ರಾಮದ ಕಿಲಾರಿ ಎತ್ತು ದಾಖಲೆ ಬೆಲೆಗೆ ಮಾರಾಟವಾಗಿ ರೈತರನ್ನು ಹುಬ್ಬೇರಿಸುವಂತೆ ಮಾಡಿದೆ. ಬರೋಬ್ಬರಿ 13.5 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಬರೆದಿದೆ.ಕೇವಲ ಏಳು ತಿಂಗಳ ಹಿಂದೆ 1 ಲಕ್ಷ ರೂ.ಗೆ ಬೈಲಹೊಂಗಲದ ರೈತನಿಂದ ಹೊಳೆಪ್ಪ ಸಂಗಪ್ಪ ಕಾಮನವರ ಈ ಎತ್ತನ್ನು ಖರೀದಿ ಮಾಡಿದ್ದರು. ತೆರಬಂಡಿ ಸ್ಪರ್ಧೆಯಲ್ಲಿ ವಿಶೇಷ ಸಾಧನೆ ಮಾಡಿರುವ ‘ರಾಜ’ ಹೆಸರಿನ ಈ ಕಿಲಾರಿ ಎತ್ತು, ಇದೀಗ ದಾಖಲೆಯ ಮೊತ್ತಕ್ಕೆ ಮಾರಾಟವಾಗಿ ಆಶ್ಚರ್ಯ ಪಡುವಂತೆ ಮಾಡಿದೆ. ಐದು ವರ್ಷದ ಈ ಎತ್ತನ್ನು ಮುಧೋಳ ತಾಲೂಕಿನ ಒಂಟಗೂಡಿ ಗ್ರಾಮದ ರೈತ ಭೀಮಶಿ ಐನಾಪುರ ಖರೀದಿಸಿದ್ದಾರೆ.

    ಕಳೆದ ಏಳು ತಿಂಗಳಲ್ಲಿ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ತೆರ (ಕರ) ಬಂಡಿ ಜಗ್ಗುವ ಸ್ಪರ್ಧೆಯಲ್ಲಿ ಈ ರಾಜ ವಿಶೇಷ ಸಾಧನೆ ಮೆರೆದಿದ್ದಾನೆ. ಸ್ಪರ್ಧೆಯಲ್ಲಿ ಭಾಗಿಯಾದರೆ ರಾಜನಿಗೆ ಬಹುಮಾನ ಕಟ್ಟಿಟ್ಟ ಬುತ್ತಿ. ಏಳು ತಿಂಗಳಲ್ಲಿ ಅಂದಾಜು 3 ಲಕ್ಷ ರೂಪಾಯಿಗೂ ಅಧಿಕ ಹಣ ಗೆದ್ದಿದೆ. ನಾವಲಗಿ ಗ್ರಾಮಸ್ಥರು ಅದ್ದೂರಿ ಮೆರವಣಿಗೆ ಮಾಡಿ, ಪೂಜೆ ಸಲ್ಲಿಸಿ, ಪ್ರೀತಿಯ ರಾಜನನ್ನು ಬುಧವಾರ ಬೀಳ್ಕೊಟ್ಟಿದ್ದಾರೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts