More

    7 ತಿಂಗಳು ಕೇವಲ 166 ಎಪಿಸೋಡ್​​ಗಳೊಂದಿಗೆ ‘ಬೃಂದಾವನ’ ಸೀರಿಯಲ್ ಅಂತ್ಯ

    ಬೆಂಗಳೂರು: 32 ಜನರನ್ನು ಒಳಗೊಂಡ ತುಂಬಿದ ಕುಟುಂಬದ ಕಥೆಯನ್ನು ಹೊಂದಿರುವ ಬೃಂದಾವನ ಸೀರಿಯಲ್. ಅಪರೂಪವಾದ ಕಥಾ ಹಂದರವನ್ನು ಹೊತ್ತು ಪ್ರೇಕ್ಷಕರ ಮುಂದೆ ಬಂದಿದ್ದ  ಸೀರಿಯಲ್​ ತಂಡ.  ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಸೀರಿಯಲ್​​ ಜನರ ಮನಸ್ಸಿಗೆ ತುಂಬಾ ಹತ್ತಿರ ಆಗಿತ್ತು. ಆದರೆ  ಬೃಂದಾವನ ತಂಡ  ಒಂದು ವರ್ಷದ ಒಳಗಾಗಿ ತನ್ನ ಕಥೆ ಮುಗಿಸಿದೆ.

    32 ಜನರ ಪಾತ್ರವನ್ನು ಒಳಗೊಂಡ ಬೃಂದಾವನ ಸೀರಿಯಲ್ ಆರಂಭಗೊಂಡಂದಿನಿಂದ ಇಲ್ಲಿವರೆಗೆ ಕಥೆಗಿಂತ ಹೆಚ್ಚಾಗಿ ಪಾತ್ರವರ್ಗದಿಂದ ಸುದ್ದಿಯಾಗಿದ್ದೇ ಹೆಚ್ಚು. ಕಳೆದ ವರ್ಷ ಅಕ್ಟೋಬರ್ ಅಂತ್ಯಕ್ಕೆ ಆರಂಭವಾದ ಈ ಧಾರಾವಾಹಿ ಇದೀಗ ಒಂದು ವರ್ಷದದ ಒಳಗಾಗಿ 7 ತಿಂಗಳಿಗೆ ಕೇವಲ 166 ಎಪಿಸೋಡ್ ಗಳಿಗೆ ಅಂತ್ಯವಾಗುತ್ತಿದೆ.

    ವಿದೇಶದಲ್ಲಿ ಓದುತ್ತಿರುವ ಆಕಾಶ್​​ಗೆ ತಾನು ಸಾಯೋ ಮೊದಲು ಮದುವೆ ಮಾಡಿಸಬೇಕೆಂದು ಹೊರಟ ಅಜ್ಜಿ ಗ್ರಾಮದ ಹುಡುಗಿ ಪುಷ್ಪಾಳ ಗುಣಗಳಿಗೆ ಮನಸೋತು ಆಕೆಯನ್ನೇ ಸೊಸೆ ಮಾಡಿಕೊಳ್ಳಲು ಮನೆಯವರೆಲ್ಲರೂ ನಿರ್ಧರಿಸುತ್ತಾರೆ. ವಿದೇಶದಲ್ಲಿ ಓದುತ್ತಿರುವ ಆಕಾಶ್ ಗೆ ಫೋಟೋ ಕಳಿಸುವ ಸಂದರ್ಭದಲ್ಲಿ ಫೋಟೋ ಅದಲು ಬದಲಾಗಿ, ಬೇರೊಬ್ಬ ಹುಡುಗಿ ಸಹನಾಳ ಫೋಟೋ ಸೆಂಡ್ ಆಗಿ, ಆಕೆಯನ್ನೇ ಪುಷ್ಪಾ ಎಂದು ತಿಳಿದು ಪ್ರೀತಿಸುತ್ತಾನೆ ಆಕಾಶ್.  ಮದುವೆ ದಿನ ತಾನು ಇಷ್ಟಪಟ್ಟಿದ್ದ ಪುಷ್ಫಾ, ಮದುವೆಯಾಗುತ್ತಿರುವುದು ಬೇರೆ ಪುಷ್ಫಾ ಬೇರೆ ಬೇರೆ ಎಂದು ಗೊತ್ತಾದ ಮೇಲೆ ಇಷ್ಟವಿಲ್ಲದಿದ್ದರೂ ಅಜ್ಜಿಯ ಖುಷಿಗೆ ಮದುವೆಯಾಗುತ್ತಾನೆ, ಆದರೆ ಆಕೆಯನ್ನು ಹೆಂಡತಿ ಎಂದು ಸ್ವೀಕರಿಸೋದಿಲ್ಲ.  ಕಾಲೇಜಿಗೆ ಸೇರುತ್ತಾನೆ, ಅಲ್ಲಿ ಮತ್ತೆ ಪುಷ್ಪಾ ಎಂದು ಇಷ್ಟಪಟ್ಟಿದ್ದ ಸಹನಾಳ ಪರಿಚಯವಾಗಿ ಸ್ನೇಹ  ಆರಂಭವಾಗುತ್ತೆ. ಆಕಾಶ್‌ಗೆ ಸಹನಾ ತಾಯಿ ಪರಿಚಯ ಆಗುತ್ತದೆ. ಆಕಾಶ್ ಕುಟುಂಬ ಕಂಡರೆ ಸಹನಾ ತಾಯಿ ಭಾರ್ಗವಿಗೆ ಆಗೋದಿಲ್ಲ. ಹಾಗಾಗಿ ಅವಳು ಆಕಾಶ್‌ಗೆ ನನ್ನ ಮಗಳಿಗೆ ಕಾಯಿಲೆ ಇದೆ, ಅವಳು ಬೇಗ ಸಾಯುತ್ತಾಳೆ, ಅವಳ ಪ್ರೀತಿ ಒಪ್ಪಿಕೋ, ಅವಳು ಬದುಕಿದ್ದಷ್ಟು ದಿನ ಚೆನ್ನಾಗಿರಲಿ ಅಂತ ಸುಳ್ಳು ಹೇಳುತ್ತಾಳೆ. ಹಾಗಾಗಿ ಆಕಾಶ್ ಸುಮ್ಮನೆ ಇರುತ್ತಾನೆ.

    ಸಹನಾಳಿಗೆ ತಾನು ಪ್ರೀತಿಸುತ್ತಿರುವ ಆಕಾಶ್, ತನ್ನ ಗೆಳತಿ ಪುಷ್ಪಾಳ ಗಂಡ ಅನ್ನೋದು ಗೊತ್ತಾಗಿ, ಎಲ್ಲರೆದುರು ಬಯಲು ಮಾಡುತ್ತಾಳೆ. ಆವಾಗ ಆಕಾಶ್ ನಿಮ್ಮ ತಾಯಿ ಹೇಳಿದ್ದಕ್ಕೆ ನಾನು ಸುಳ್ಳು ಹೇಳಿದ್ದೆ ಎಂದು ಪುಷ್ಪಾ ಮತ್ತು ಅಜ್ಜಿ ಮೇಲೆ ಆಣೆ ಮಾಡಿ ಹೇಳುತ್ತಾನೆ. ಈಗ ಸಹಾನಾ ನೇರವಾಗಿ ಮನೆಗೆ ಹೋಗಿ ಅಮ್ಮನನ್ನೆ ಕರೆದುಕೊಂಡು ಬೃಂದಾವನಕ್ಕೆ ಕಾಲಿಟ್ಟಾಗ, ಎಲ್ಲರಿಗೂ ಕಥೆ ಏನು ಅನ್ನೋದು ಗೊತ್ತಾಗುತ್ತೆ. ಭಾರ್ಗವಿ ನಮ್ಮ ಮನೆಯನ್ನು ಮುರಿಯೋದಕ್ಕೆ ಇದೆಲ್ಲಾ ಮಾಡಿದ್ದು ಎಂದು ಗೊತ್ತಾಗುತ್ತೆ. ಆವಾಗ ಭಾರ್ಗವಿ ಹೌದು, ನನ್ನ ಗಂಡನನ್ನು ಆಕ್ಸಿಡೆಂಟ್ ಮಾಡಿ ನೀವೆ ಕೊಂದದ್ದು, ಅದರ ಸೇಡು ತೀರಿಸೋದಕ್ಕೆ ನಾನು ಹೀಗೆ ಮಾಡಿದ್ದು ಎಂದಾಗ, ಅಜ್ಜಿ ಆಕೆಯ ಗಂಡ ದೊಡ್ಡ ಸ್ಮಗ್ಲರ್ ಎನ್ನುವ ಸತ್ಯವನ್ನು ಹೇಳಿ, ಅದು ಆತ ಪೊಲೀಸರಿಂದ ತಪ್ಪಿಸಿಕೊಂಡು ಹೋಗುವಾಗ ನಡೆದ ಆಕ್ಸಿಡೆಂಟ್ ಅನ್ನೋದನ್ನು ಮನವರಿಕೆ ಮಾಡಿಸುತ್ತಾರೆ.

    ಭಾರ್ಗವಿಗೆ ತನ್ನ ತಪ್ಪಿನ ಅರಿವಾಗಿ ಎಲ್ಲರ ಬಳಿಯೂ ಕ್ಷಮೆ ಕೇಳಿ ಇಲ್ಲಿವರೆಗೆ ನಾನು ನನ್ನ ಮಗಳು ಒಬ್ಬಂಟಿಯಾಗಿದ್ದೆವು. ನಮಗೂ ನಿಮ್ಮ ಮನೆಯಲ್ಲಿ ಜಾಗಕೊಡಿ ಎಂದು ಅವರೂ ಕೂಡ ಬೃಂದಾವನಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿಗೆ ಬೃಂದಾವನದ ಕಥೆ ಅಂತ್ಯವಾಗುತ್ತದೆ. ಇವತ್ತು ಕೊನೆಯ ಎಪಿಸೋಡ್ ಪ್ರಸಾರವಾಗಲಿದೆ. ಒಟ್ಟಲ್ಲಿ ಆರಂಭವಾಗಿ 7 ತಿಂಗಳೊಳಗೆ ಕೇವಲ 166 ಎಪಿಸೋಡ್ ಗಳೊಂದಿಗೆ ಸೀರಿಯಲ್ ಅಂತ್ಯವಾಗಿದೆ.

    ಮಿಥಾಲಿ ರಾಜ್ ಜತೆ ಮದುವೆ.. ಶಿಖರ್ ಧವನ್ ಶಾಕಿಂಗ್ ಹೇಳಿಕೆ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts