More

    ಮಹಿಳಾ ನೇಕಾರರನ್ನು ಸರ್ಕಾರ ಪ್ರೋತ್ಸಾಹಿಸಲಿ

    ರಬಕವಿ/ಬನಹಟ್ಟಿ: ಮಹಿಳಾ ನೇಕಾರರಿಗೆ ಪ್ರತ್ಯೇಕ ಯೋಜನೆಗಳನ್ನು ರೂಪಿಸುವ ಮೂಲಕ ಸರ್ಕಾರ ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿ ಬನಹಟ್ಟಿಯ ದಾನೇಶ್ವರಿ ಮಹಿಳಾ ವಿದ್ಯುತ್ ಮಗ್ಗಗಳ ಸಹಕಾರಿ ಸಂಘದ ಅಧ್ಯಕ್ಷೆ ಶಾಂತಾ ಸೊರಗಾಂವಿ ನೇತೃತ್ವದ ಮಹಿಳೆಯರು ಬಿಜೆಪಿ ಕಾರ್ಯಾಲಯದಲ್ಲಿ ಶಾಸಕ ಸಿದ್ದು ಸವದಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

    ಶಾಂತಾ ಸೊರಗಾಂವಿ ಮಾತನಾಡಿ, ಸರ್ಕಾರ ನೇಕಾರರಿಗೆ ಸಮರ್ಪಕ ಯೋಜನೆ ನೀಡುವಲ್ಲಿ ಯೋಜನೆಗಳನ್ನು ರೂಪಿಸುತ್ತಿರುವುದು ಸ್ವಾಗತಾರ್ಹ. ಆದರೆ, ಮಹಿಳಾ ನೇಕಾರರಿಗೆಂದೆ ಪ್ರತ್ಯೇಕ ಯೋಜನೆಗಳನ್ನು ರೂಪಿಸುವ ಮೂಲಕ ಮಹಿಳಾ ನೇಕಾರರಿಗೆ ಉತ್ತೇಜನ ನೀಡಬೇಕೆಂದು ಒತ್ತಾಯಿಸಿದರು.

    ರಜನಿ ಶೇಠೆ, ರೇಖಾ ಮಂಡಿ, ಕಮಲಾ ಹಾರುಗೇರಿ, ಪೂರ್ಣಿಮಾ ಮೊಳೆಗಾಂವಿ, ಗೀತಾ ಹಳಿಂಗಳಿ, ಬಿ.ಕೆ., ನಗರ ಬಿಜೆಪಿ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಬಿಜೆಪಿ ಜಿಲ್ಲಾ ಘಟಕ ಉಪಾಧ್ಯಕ್ಷ ರಾಜು ಅಂಬಲಿ, ಆನಂದ ಕಂಪು, ಎಸ್.ಸಿ. ಕಾರಜೋಳ, ಎನ್.ಎನ್. ಕಿನ್ನಾಳ, ಎ.ಕೆ. ಬೀಳಗಿ, ಜಿ.ಎಂ. ಮುಗತಿ, ಯು.ಐ. ಗಣೇಶನವರ, ಆರ್.ಜಿ. ಶಿರಹಟ್ಟಿ ಅನೇಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts